ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಬ್ಯಾಟ್ಸ್‌ಮನ್ ಇನ್ಝಮಾಮ್ ದಾಖಲೆ ಮುರಿದ ಜೋ ರೂಟ್!

India vs England: Joe Root breaks Inzamam-ul-Haqs record

ಚೆನ್ನೈ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಭಾರತದ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ರೂಟ್ ಅವರ ದಾಖಲೆಗಳ ಸರಮಾಲೆ ಇನ್ನೂ ನಿಂತಿಲ್ಲ. ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿರುವ ಜೋ, ಪಾಕಿಸ್ತಾನ ಕ್ರಿಕೆಟ್ ದಂತಕತೆ ಇನ್ಝಮಾಮ್ ಉಲ್ ಹಕ್ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದ್ದಾರೆ. ಮೊದಲನೇ ಟೆಸ್ಟ್‌ ಪಂದ್ಯದ ದ್ವಿತೀಯ ದಿನದಾಟದಲ್ಲಿ ರೂಟ್ ಈ ಸಾಧನೆ ತೋರಿದ್ದಾರೆ.

ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ಕಾಮೆಂಟ್ ವೈರಲ್-ವಿಡಿಯೋಭಾರತ vs ಇಂಗ್ಲೆಂಡ್: ರಿಷಭ್ ಪಂತ್ ಕಾಮೆಂಟ್ ವೈರಲ್-ವಿಡಿಯೋ

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ರೂಟ್ 218 ರನ್ ಬಾರಿಸಿದ್ದಾರೆ. ಇದರೊಂದಿಗೆ ದಾಖಲೆ ನಿರ್ಮಾಣವಾಗಿದೆ.

ಭಾರತ vs ಇಂಗ್ಲೆಂಡ್, 1ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
49838

ಮೊದಲ ಟೆಸ್ಟ್‌ ಪಂದ್ಯದ ಮೂಲಕ ಜೋ ರೂಟ್ ನಿರ್ಮಿಸಿರುವ ದಾಖಲೆಗಳ ಇಣುಕು ನೋಟ ಕೆಳಗಿದೆ ನೋಡಿ.

100ನೇ ಟೆಸ್ಟ್‌ ಪಂದ್ಯ

100ನೇ ಟೆಸ್ಟ್‌ ಪಂದ್ಯ

ಭಾರತ ವಿರುದ್ಧದ ಮೊದಲನೇ ಪಂದ್ಯದಲ್ಲಿ ಜೋ ರೂಟ್ 100ನೇ ಟೆಸ್ಟ್‌ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದರು. ಈ ಪಂದ್ಯದಲ್ಲಿ ರೂಟ್ ದ್ವಿಶತಕ ಬಾರಿಸಿರುವುದರಿಂದ ಅವರ ಹೆಸರಿನಲ್ಲಿ ದಾಖಲೆಗಳು ನಿರ್ಮಾಣವಾಗಿದೆ. ಶತಕ ಬಾರಿಸಿದ್ದಾಗ ಬೇರೆ ದಾಖಲೆ ಪಟ್ಟಿಯಲ್ಲಿದ್ದರು. ಆದರೆ ಆ ಶತಕವನ್ನು ದ್ವಿಶತಕಕ್ಕೆ ಪರಿವರ್ತಿಸಿರುವ ರೂಟ್ ಮತ್ತೊಂದು ದಾಖಲೆ ಪಟ್ಟಿಗೆ ಜಿಗಿದಿದ್ದಾರೆ.

ಸತತ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು 150+ ರನ್

ಸತತ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು 150+ ರನ್

(ಸತತ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು 150+ ರನ್ ಗಳಿಸಿರುವ ಬ್ಯಾಟ್ಸ್‌ಮನ್ ಗಳು ಪಟ್ಟಿ)
* ಕುಮಾರ ಸಂಗಕ್ಕಾರ, ಶ್ರೀಲಂಕಾ, 4 ಸಾರಿ, 2007
* ಇಂಗ್ಲೆಂಡ್ ನ ವ್ಯಾಲಿ ಹ್ಯಾಮಂಡ್, 3 ಸಾರಿ, 1928-29
* ಡಾನ್ ಬ್ರಾಡ್ಮನ್, ಆಸ್ಟ್ರೇಲಿಯಾ, 3 ಸಾರಿ, 1937
* ಝಹೀರ್ ಅಬ್ಬಾಸ್, ಪಾಕಿಸ್ತಾನ, 3 ಸಾರಿ, 1982-83
* ಮುದಾಸರ್ ನಝರ್, ಪಾಕಿಸ್ತಾನ, 3 ಸಾರಿ, 1983
* ನ್ಯೂಜಿಲೆಂಡ್ ನ ಟಾಮ್ ಲ್ಯಾಥಮ್, 3 ಸಾರಿ, 2018-19
* ಜೋ ರೂಟ್, ಇಂಗ್ಲೆಂಡ್, 3 ಸಾರಿ, 2021.

ರೂಟ್ ಹೆಸರಲ್ಲಿ ವಿಶ್ವದಾಖಲೆ

ರೂಟ್ ಹೆಸರಲ್ಲಿ ವಿಶ್ವದಾಖಲೆ

ತನ್ನ 98, 99 ಮತ್ತು 100ನೇ ಟೆಸ್ಟ್‌ನಲ್ಲಿ ಶತಕ, ದ್ವಿಶತಕದ ದಾಖಲೆ ವಿಶ್ವದ ಯಾವುದೇ ಬ್ಯಾಟ್ಸ್‌ಮನ್‌ ಮಾಡಿಲ್ಲ. ಆ ದಾಖಲೆ ರೂಟ್‌ ಹೆಸರಿನಲ್ಲಿ ನಿರ್ಮಾಣವಾಗಿದೆ. ತನ್ನ 98ನೇ, 99ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿರುವ ರೂಟ್, 100ನೇ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿ ಅವಿಸ್ಮರಣೀಯ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಇನ್ಝಮಾಮ್ ದಾಖಲೆ ಬದಿಗೆ

ಇನ್ಝಮಾಮ್ ದಾಖಲೆ ಬದಿಗೆ

2005ರಲ್ಲಿ ಭಾರತ ವಿರುದ್ಧ ಬೆಂಗಳೂರಿನಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ 100ನೇ ಟೆಸ್ಟ್ ಪಂದ್ಯ ಆಡಿದ್ದ ಪಾಕಿಸ್ತಾನದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಇನ್ಝಮಾಮ್ ಉಲ್ ಹಕ್ ಅವರು 184 ರನ್ ಬಾರಿಸಿದ್ದರು. ಆದರೆ ಜೋ ರೂಟ್ ಈಗ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ (218 ರನ್) ಬಾರಿಸಿರುವುದರಿಂದ ಹಕ್ ದಾಖಲೆ ಮುರಿದಿದೆ.

Story first published: Saturday, February 6, 2021, 17:20 [IST]
Other articles published on Feb 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X