ಇಂಗ್ಲೆಂಡ್ ವಿರುದ್ಧದ ಸರಣಿಗೆ ನೆಟ್ ಬೌಲರ್ ಆಗಿ ಕರ್ನಾಟಕದ ಕೆ ಗೌತಮ್ ಆಯ್ಕೆ

ಕರ್ನಾಟಕ ತಂಡದ ಅನುಭವಿ ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಮುಂದಿನ ತಿಂಗಳಿನ ಆರಂಭದಲ್ಲಿ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನೆಟ್ ಬೌಲರ್ ಆಗಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಕರ್ನಾಟಕ ತಂಡವನ್ನು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅವರು ಪ್ರತಿನಿಧಿಸುತ್ತಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ ಅನುಭವ ಹೊಂದಿರುವ ಕೃಷ್ಣಪ್ಪ ಗೌತಮ್ ಭಾರತ ಎ ತಂಡವನ್ನು ಕೂಡ ಪ್ರತಿನಿಧಿಸಿದ ಅನುಭವವನ್ನು ಹೊಂದಿದ್ದಾರೆ. ಐಪಿಎಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಅವಕಾಶ ಗಿಟ್ಟಿಸಿಕೊಂಡಿರುವ ಕೆ ಗೌತಮ್ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಗೆದ್ದಿದ್ದು ಭಾರತ, ಸದ್ದು ಮಾಡಿದ್ದು ಆರ್‌ಸಿಬಿ!

ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅದ್ಭುತ ಪ್ರದರ್ಶನಗಳನ್ನು ನೀಡಿರುವ ಕೃಷ್ಣಪ್ಪ ಗೌತಮ್‌ಗೆ ರಾಷ್ಟ್ರೀಯ ತಂಡದಲ್ಲಿ ಈವರೆಗೂ ಅವಕಾಶ ದೊರೆತಿಲ್ಲ. ಐಪಿಎಲ್, ದೇವಧರ್ ಟ್ರೋಫಿಯಂತಾ ಪ್ರಮುಖ ಟೂರ್ನಿಗಳಲ್ಲಿ ಮಿಂಚಿದ್ದರೂ ಭಾರತೀಯ ಕ್ರಿಕೆಟ್‌ನ ಆಯ್ಕೆ ಸಮಿತಿ ಕೆ ಗೌತಮ್ ಅವರತ್ತ ಚಿತ್ತವನ್ನು ಹರಿಸಿರಲಿಲ್ಲ.

ಲೆಗ್ ಸ್ಪಿನ್ನರ್ ಆಗಿರುವ ಕೆ ಗೌತಮ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರಿಗೆ ನೆಟ್‌ನಲ್ಲಿ ಅಭ್ಯಾಸಕ್ಕಾಗಿ ಕೆ ಗೌತಮ್‌ಗೆ ಅವಕಾಶವನ್ನು ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ನೆಟ್ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಾಕಷ್ಟು ಆಟಗಾರರು ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿರುವುದು ಕೆ ಗೌತಮ್‌ಗೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ದೊರೆಯಬಹುದು ಎಂಬ ನಿರೀಕ್ಷೆ ಮೂಡಲು ಕಾರಣವಾಗಿದೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌: ಅಗ್ರ ಸ್ಥಾನಕ್ಕೇರಿದ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಸರಣಿಗೆ ಒಟ್ಟು ಐವರನ್ನು ನೆಟ್ ಬೌಲರ್‌ಗಳನ್ನಾಗಿ ಹೆಸರಿಸಲಾಗಿದೆ. ಕರ್ನಾಟಕದ ಕೆ ಗೌತಮ್ ಜೊತೆಗೆ ಉತ್ತರ ಪ್ರದೇಶದ ಅಂಕಿತ್ ರಜಪೂತ್, ಮಧ್ಯಪ್ರದೇಶದ ಅವೇಶ್ ಖಾನ್, ಕೇರಳದ ಸಂದೀಪ್ ವಾರಿಯರ್, ಉತ್ತರ ಪ್ರದೇಶದ ಸೌರಭ್ ಕುಮಾರ್ ನೆಟ್ ಬೌಲರ್ ಆಗಿ ಮುಂಬರುವ ಸರಣಿಯಲ್ಲಿ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಭಾಗಿಯಾಗಲಿದ್ದಾರೆ

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, January 20, 2021, 11:40 [IST]
Other articles published on Jan 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X