ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಫಿಟ್ ಆಗಿರುವ ಕೆಎಲ್ ರಾಹುಲ್ ಸರಣಿಗೆ ಸಿದ್ಧ

India vs England: KL Rahul Completes Rehab, Looks Forward To Home Series

ಬೆಂಗಳೂರು: ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಗಾಯಕ್ಕೀಡಾಗಿದ್ದ ಕೆಎಲ್ ರಾಹುಲ್ ಈಗ ಚೇತರಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿರುವ ರಾಹುಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಹೀಗಾಗಿ ಮುಂಬರಲಿರುವ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಅವಕಾಶಕ್ಕಾಗಿ ರಾಹುಲ್ ಎದುರು ನೋಡುತ್ತಿದ್ದಾರೆ.

ಟೀಮ್ ಇಂಡಿಯಾದ ಗೆಲುವಿನಲ್ಲಿ ದ್ರಾವಿಡ್ ಪಾತ್ರದ ಬಗ್ಗೆ ಬಾಯ್ದೆರೆದ ರಹಾನೆಟೀಮ್ ಇಂಡಿಯಾದ ಗೆಲುವಿನಲ್ಲಿ ದ್ರಾವಿಡ್ ಪಾತ್ರದ ಬಗ್ಗೆ ಬಾಯ್ದೆರೆದ ರಹಾನೆ

ತಾನು ಫಿಟ್ ಆಗಿರುವ ವಿಚಾರವನ್ನು ಕೆಎಲ್ ರಾಹುಲ್ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. 'ನನ್ನ ಚೇತರಿಕೆ ಪರೀಕ್ಷೆಯನ್ನು ನಾನು ಬಲಿಷ್ಠನಾಗಿ ಮುಗಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಆರೋಗ್ಯವಾಗಿ, ಫಿಟ್‌ ಆಗಿ ಮರಳುವುಕ್ಕಿಂತ ಖುಷಿಯ ಸಂಗತಿ ಬೇರೇನಿಲ್ಲ. ಸ್ನೇಹಿತರೊಂದಿಗೆ ಮತ್ತೆ ಸೇರಿಕೊಳ್ಳಲು, ಭಾರತ ಪ್ರತಿನಿಧಿಸಲು ಹೆಮ್ಮೆಯೆನಿಸುತ್ತದೆ. ತವರಿನ ಸರಣಿಗಾಗಿ ಎದುರು ನೋಡುತ್ತಿದ್ದೇನೆ,' ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ ಬಳಿಕ ಕೈಗೆ ಗಾಯ ಮಾಡಿಕೊಂಡಿದ್ದ ರಾಹುಲ್, ತಂಡದಿಂದ ಹೊರ ಬಿದ್ದಿದ್ದರು. ಅಭ್ಯಾಸದ ವೇಳೆ ರಾಹುಲ್ ಕೈಗೆ ಗಾಯವಾಗಿತ್ತು. ಆ ಬಳಿಕ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ರಾಹುಲ್ ಚೇತರಿಸಿಕೊಳ್ಳುತ್ತಿದ್ದರು.

Test Champs: ಫೈನಲ್‌ಗೇರಲು ಭಾರತ, ಇಂಗ್ಲೆಂಡ್, ಆಸೀಸ್ ಮಧ್ಯೆ ಫೈಟ್!Test Champs: ಫೈನಲ್‌ಗೇರಲು ಭಾರತ, ಇಂಗ್ಲೆಂಡ್, ಆಸೀಸ್ ಮಧ್ಯೆ ಫೈಟ್!

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಫೆಬ್ರವರಿ 5ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಆ ಬಳಿಕ ಐದು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಎರಡು ಟೆಸ್ಟ್ ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Tuesday, February 2, 2021, 21:41 [IST]
Other articles published on Feb 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X