ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯದ ವೇಳೆ ಕಣ್ಣೀರು ಹಾಕಿದ ಕೃನಾಲ್ ಪಾಂಡ್ಯ, ಕಾರಣ ಏನ್ ಗೊತ್ತಾ?!

India vs England: Krunal Pandya breaks down during interview after scoring fastest fifty on ODI debut

ಪೂಣೆ: ಇಂಗ್ಲೆಂಡ್ ಮತ್ತು ಭಾರತ ಮೊದಲನೇ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯ ಕಣ್ಣೀರು ಹಾಕಿದ್ದಾರೆ. ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದ ಪಂದ್ಯದಲ್ಲೇ ಕೃನಾಲ್ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಐಪಿಎಲ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಆಲ್ ರೌಂಡರ್ ಕೃನಾಲ್ ಕಣ್ಣೀರಿಗೆ ಕಾರಣವೂ ಇದೆ!

ಭಾರತ vs ಇಂಗ್ಲೆಂಡ್ 1st ODI: ಭರ್ಜರಿ ಅರ್ಧ ಶತಕ ಸಿಡಿಸಿ 2 ಪ್ರಮುಖ ದಾಖಲೆ ಬರೆದ ಕೊಹ್ಲಿಭಾರತ vs ಇಂಗ್ಲೆಂಡ್ 1st ODI: ಭರ್ಜರಿ ಅರ್ಧ ಶತಕ ಸಿಡಿಸಿ 2 ಪ್ರಮುಖ ದಾಖಲೆ ಬರೆದ ಕೊಹ್ಲಿ

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಂಗಳವಾರ (ಮಾರ್ಚ್ 23) ನಡೆದ ಭಾರತ-ಇಂಗ್ಲೆಂಡ್ 1ನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಏಕದಿನ ಪಂದ್ಯ ಆಡಿದ್ದ ಕೃನಾಲ್ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದು 31 ಎಸೆತಗಳಲ್ಲಿ ಅಜೇಯ 58 ರನ್ ಚಚ್ಚಿದ್ದರು.

ವೇಗದ ಅರ್ಧ ಶತಕ ದಾಖಲೆ

ವೇಗದ ಅರ್ಧ ಶತಕ ದಾಖಲೆ

ಇದೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ವೇಗದ ಅರ್ಧ ಶತಕವೂ ಬಾರಿಸಿದ್ದರು. 26 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಕೃನಾಲ್ ಪಾದಾರ್ಪಣೆ ಏಕದಿನ ಪಂದ್ಯದಲ್ಲಿ ವೇಗದ ಅರ್ಧ ಶತಕ ಬಾರಿಸಿದ ವಿಶಿಷ್ಠ ದಾಖಲೆಗೂ ಕಾರಣವಾಗಿದ್ದರು. ಅಷ್ಟೇ ಅಲ್ಲ, 7ನೇ ಕ್ರಮಾಂಕದಲ್ಲಿ ಬಂದು ಚೊಚ್ಚಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ಮೈಲಿಗಲ್ಲನ್ನೂ ಪಾಂಡ್ಯ ಸ್ಥಾಪಿಸಿದ್ದರು.

ಕಣ್ಣೀರಿಗೆ ಕಾರಣ 1

ಭಾರತದ ಇನ್ನಿಂಗ್ಸ್‌ ಮುಗಿಸಿ ಪೆವಿಲಿನ್‌ಗೆ ಬಂದ ಕೃನಾಲ್, ತಮ್ಮ ಹಾರ್ದಿಕ್ ಪಾಂಡ್ಯ ಅವರನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿದ್ದವು. 1. ಪಾಂಡ್ಯ ಸಹೋದರರ ತಂದೆಯ ಸಾವು. ಇದೇ ವರ್ಷ ಜನವರಿಯಲ್ಲಿ ಪಾಂಡ್ಯ ಸಹೋದರರ ತಂದೆ ಹಿಮಾಂಶು ಪಾಂಡ್ಯ ಸಾವನ್ನಪ್ಪಿದ್ದರು. ತಂದೆ ಈ ಹೊತ್ತಿನಲ್ಲಿ ಇದ್ದಿದ್ದರೆ ಎಷ್ಟು ಖುಷಿಪಡುತ್ತಿದ್ದರು ಎಂದು ನೆನಪಿಸಿಕೊಂಡ ಪಾಂಡ್ಯ ಕಣ್ಣೀರಿಟ್ಟರು. ಇದನ್ನು ಕೃನಾಲ್ ಸಂದರ್ಶನದ ವೇಳೆ ಹೇಳಿಕೊಂಡಿದ್ದರು.

ಕಂಬನಿಗೆ ಕಾರಣ 2

ಕೃನಾಲ್ ಪಾಂಡ್ಯ ಅವರು ಕಣ್ಣೀರಿಟ್ಟಿದ್ದಕ್ಕೆ ಎರಡನೇ ಕಾರಣ ಹೇಳೋದಾದರೆ, ಭಾರತದ ಪರ ಕೃನಾಲ್ 18 ಟಿ20ಐ ಪಂದ್ಯಗಳನ್ನಾಡಿದ್ದರಾದರೂ ಅಂತಾರಾಷ್ಟ್ರೀಯ ಚೊಚ್ಚಲ ಏಕದಿನ ಆಡುತ್ತಿರುವುದು ಇದೇ ಮೊದಲ ಬಾರಿ. ತಮ್ಮ ಹಾರ್ದಿಕ್ 58 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ಕೃನಾಲ್‌ಗೆ ಇದು ಮೊದಲ ಪಂದ್ಯ. ಹೀಗಾಗಿ ಸಹಜವಾಗೇ ಖುಷಿ, ಭಾವನೆ ಕಣ್ಣೀರಾಗಿ ಕಾಣಿಸೋದಿದೆ. ಪಾಂಡ್ಯ ಕಣ್ಣೀರಿಗೆ ಇದೂ ಒಂದು ಕಾರಣವಿರಬಹುದು.

Story first published: Tuesday, March 23, 2021, 19:21 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X