ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಬೇರೆ ದೇಶದ ಪರವಾಗಿ ಆಡಿದ್ದರೆ 50 ಪಂದ್ಯ 200 ವಿಕೆಟ್ ಪಡೆದಿರುತ್ತಿದ್ದ: ಕುಲ್‌ದೀಪ್ ಯಾದವ್ ಕೋಚ್

India vs England: Kuldeep Yadav’s coach speaking about his exclussion for test

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕುಲ್‌ದೀಪ್ ಯಾದವ್‌ಗೆ ಅವಕಾಶ ದೊರೆಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ಅಕ್ಷರ್ ಪಟೇಲ್ ಗಾಯದ ಕಾರಣದಿಂದಾಗಿ ಮೊದಲ ಪಂದ್ಯದಿಂದ ಹೊರಬಿದ್ದ ಬಳಿಕವೂ ಮೀಸಲು ಆಟಗಾರನಾಗಿದ್ದ ಶಹ್ಬಾಜ್ ನದೀಮ್‌ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಕುಲ್‌ದೀಪ್ ಯಾದವ್ ಆಯ್ಕೆ ಮಾಡದಿರುವ ಅಭಿಮಾನಿಗಳು ಹಾಗು ಮಾಜಿ ಕ್ರಿಕೆಟಿಗರು ಬೇಸರ ಹಾಗೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು.

ಈಗ ಬಗ್ಗೆ ಕುಲ್‌ದೀಪ್ ಯಾದವ್ ಅವರ ಕೋಚ್ ಪ್ರತಿಕ್ರಿಯೆ ನೀಡಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. "ಈ ಸರಣಿಯಲ್ಲಿ ಕೋಚ್ ಹಾಗೂ ನಾಯಕ ವಾಶಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದಾರೆ. ಯಾಕೆಂದರೆ ಅಶ್ವಿನ್‌ಗೆ ಆತ ಉತ್ತಮ ಸಾಥ್ ನೀಡಬಲ್ಲ ಎಂದು ಅವರಿಗೆ ಅನಿಸಿದೆ. ಈ ಆಯ್ಕೆಯ ಹಿಂದಿರುವ ಕಾರಣ ಅವರಿಗೆ ಮಾತ್ರವೇ ತಿಳಿದಿದೆ. ನಾಯಕ ಕೊಹ್ಲಿ ಮತ್ತು ಕೋಚ್ ಈ ಬಗ್ಗೆ ಕಾರಣವನ್ನು ವಿವರಿಸಬಹುದು. ಆದರೆ ಕುಲ್‌ದೀಪ್ ಯಾದವ್ ಯಾವುದೇ ಪಂದ್ಯದಲ್ಲೂ ಆಡ ಬಲ್ಲ ಹಾಗೂ ಆಡಲೇಬೇಕಾದ ಆಟಗಾರ. ಯಾಕೆಂದರೆ ಆತ ಕೇವಲ 6 ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಆತ 4 ವಿಕೆಟ್‌ಗಿಂತ ಕಡಿಮೆ ವಿಕೆಟ್ ಪಡೆದೇ ಇಲ್ಲ" ಎಂದು ಕುಲ್‌ದೀಪ್ ಯಾದವ್ ಅವರ ಕೋಚ್ ಕಪಿಲ್ ಪಾಂಡೆ ಸ್ಪೋರ್ಟ್ಸ್ ಕೀಡಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!

ಸುದೀರ್ಘ ಕಾಲದಿಂದ ಅವಕಾಶ ನೀಡದ ಕಾರಣ ಆತನ ಮೇಲೆ ಸಹಜವಾಗಿಯೇ ಒತ್ತಡವಿರುತ್ತದೆ. ಎಲ್ಲರಿಗೂ ಅಮಾನ ಅವಕಾಶ ದೊರೆಯಬೇಕು. ವಾಶಿಂಗ್ಟನ್ ಸುಂದರ್‌ಗೆ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶವನ್ನು ನೀಡಲಾಯಿತು. ನದೀಮ್‌ಗೆ ಎರಡು ಅವಕಾಶ ದೊರೆಯಿತು. ಆದರೆ ಕುಲ್‌ದೀಪ್ ಯಾದವ್‌ಗೆ ಯಾಕಿಲ್ಲ? ಆತ ಆಡಿದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದಲ್ಲಿ 5 ವಿಕೆಟ್ ಪಡೆದಿದ್ದ. ಆತನಿಗೆ ಅವಕಾಶ ದೊರೆಯಬಾರದಾ? ಎಂದು ಬೇಸರದಿಂದ ಕಪಿಲ್ ಪಾಂಡೆ ಪ್ರಶ್ನಿಸಿದರು. ಕಪಿಲ್ ಪಾಂಡೆ ಕುಲ್‌ದೀಪ್ ಯಾದವ್‌ಗೆ ಕಳೆದ 17 ವರ್ಷಗಳಿಂದ ಕೋಚ್ ಆಗಿದ್ದಾರೆ.

ಕುಲ್‌ದೀಪ್ ಯಾದವ್ 2018-19ರ ಐತಿಹಾಸಿಕ ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಪಂದ್ಯದಲ್ಲಿ ಆಡಿದ್ದೇ ಕೊನೆ ಅದಾದ ಬಳಿಕ ಆಡುವ ಬಳಗದಲ್ಲಿ ಅವಕಾಶ ದೊರೆತಿಲ್ಲ. ವಿಚಿತ್ರ ಅಂದರೆ ಆ ಪಂದ್ಯದಲ್ಲಿ ಕುಲ್‌ದೀಪ್ ಯಾದವ್ 5 ವಿಕೆಟ್‌ಗಳನ್ನು ಪಡೆದು ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಂಚ್ ಕಾದ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೂ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.

Story first published: Tuesday, February 9, 2021, 20:47 [IST]
Other articles published on Feb 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X