ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರಣಿ ಸಮಬಲಗೊಳಿಸಿದರೆ ಅದು ನನ್ನ ಶ್ರೇಷ್ಠ ಸಾಧನೆಗಳಲ್ಲಿ ಒಂದೆನಿಸುತ್ತದೆ: ಜೋ ರೂಟ್

India vs England: Level the series against India would be one of my greatest achievement: Root

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಈ ಪಂದ್ಯ ಆರಂಭವಾಗಲಿದ್ದು ಭಾರತ ಈ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಅಂತಿಮ ಪಂದ್ಯವನ್ನು ಕನಿಷ್ಟ ಡ್ರಾ ಮಾಡಿಕೊಂಡರೂ ಟೀಮ್ ಇಂಡಿಯಾ ಸರಣಿಯನ್ನು ಗೆಲ್ಲಲಿದೆ. ಜೊತೆಗೆ WTC ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಆದರೆ ಭಾರತವನ್ನು ಅಂತಿಮ ಪಂದ್ಯದಲ್ಲಿ ಸೋಲಿಸಿ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದ್ದಾರೆ ಇಂಗ್ಲೆಂಡ್ ನಾಯಕ ಜೋ ರೂಟ್.

ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಭಾರತದ ವಿರುದ್ಧದ ಈ ಸರಣಿಯನ್ನು ಕನಿಷ್ಠ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅದು ನನ್ನ ಶ್ರೇಷ್ಠ ಸಾಧನೆಗಳಲ್ಲಿ ಒಂದೆನಿಸುತ್ತದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ತಂಡ ಸರಣಿಯನ್ನು ಡ್ರಾ ಮಾಡಿಕೊಳ್ಳಬೇಕಾದರೆ ಅಂತಿಮ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

ತವರಿನಲ್ಲಿ ಭಾರತದ ಇತ್ತೀಚಿನ ದಾಖಲೆಗಳನ್ನು ಗಮನಿಸಿದರೆ ಅದು ಅದ್ಭುತವಾಗಿದೆ. ಹಾಗಾಗಿ ನಮಗೆ ಈ ಸರಣಿಯನ್ನು ಸಮಬಲಗೊಳಿಸಿದರೂ ಅದು ದೊಡ್ಡ ಸಾಧನೆಯಾಗಲಿದೆ. ನಾವು ಹಿಂದಿನ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ. ಎರಡು ಕಠಿಣ ವಾರಗಳು ನಮ್ಮದಾಗಿತ್ತು. ಅದರೆ ಅದು ನಮ್ಮ ತಂಡದ ಸಾಮರ್ಥ್ಯವನ್ನು ವ್ಯಾಖ್ಯಾನಿಸದು" ಎಂದಿದ್ದಾರೆ ಜೋ ರೂಟ್.

ಅಂತಿಮ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸಲು ಸಾಧ್ಯವಾದರೆ ಅದು ನಾಯಕನಾಗಿ ನನ್ನ ಅತ್ಯಂತ ಶ್ರೇಷ್ಠ ಸಾಧನೆಯಾಗಿರಲಿದೆ. ಕಳೆದ ಒಂದೆರಡು ವರ್ಷಗಳಲ್ಲಿ ಸಾಧಿಸಿದ ಪ್ರಗತಿ ಅತ್ಯುತ್ತಮವಾಗಿದೆ. ವಿಶೇಷವಾಗಿ ತವರಿಗಿಂತ ಹೊರಗಿನ ಪಂದ್ಯಗಳ ಸಾಧನೆ. ಅಂತಿಮ ಪಂದ್ಯಗಳಲ್ಲಿ ಗೆಲ್ಲಲು ಸಾಧ್ಯವಾದರೆ ಈ ಪ್ರವಾಸದಲ್ಲಿ (ಶ್ರೀಲಂಕಾ ಟೆಸ್ಟ್ ಸರಣಿಯನ್ನೂ ಸೇರಿಸಿ) ಆರು ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದಂತಾಗುತ್ತದೆ. ಕಠಿಣ ಕಂಡೀಶನ್‌ಗಳಲ್ಲಿ ಅದು ನಮ್ಮ ಆಟಗಾರರಿಂದ ಬಂದ ಅತ್ಯುತ್ತಮ ಸಾಧನೆಯಾಗಿರಲಿದೆ" ಎಂದಿದ್ದಾರೆ ಜೋ ರೂಟ್.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

"ಪಿಚ್ ಕಳೆದ ಪಂದ್ಯದ ರೀತಿಯಲ್ಲಿಯೇ ಇದ್ದರೆ ಆಗ ಡಾಮ್ ಬೆಸ್ ಅತ್ಯುತ್ತಮ ಆಯ್ಕಯಾಗಲಿದ್ದಾರೆ. ನನಗಿಂತ ಅವರ ಕೌಶಲ್ಯ ತುಂಬಾ ಅತ್ಯುತ್ತಮ ಮಟ್ಟದಲ್ಲಿದೆ. ಅಂತಾ ಪಿಚ್‌ನಲ್ಲಿ ಬೌಲಿಂಗ್ ದಾಳಿಯನ್ನು ನಡೆಸಲು ಅವರು ಸಾಕಷ್ಟು ಕುತೂಹಲದಿಂದ ಕಾದಿದ್ದಾರೆ. ಈ ಪಿಚ್‌ನಲ್ಲಿ ತಿರುವು ಪಡೆಯುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನಮ್ಮ ತರಬೇತಿಯಲ್ಲೂ ಅದೇ ಪ್ರಮುಖ ಅಂಶವಾಗಿದೆ" ಎಂದು ಜೋ ರೂಟ್ ಹೇಳಿದ್ದಾರೆ.

Story first published: Wednesday, March 3, 2021, 10:17 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X