ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ 'ಎ'ಗೆ ಇನ್ನಿಂಗ್ಸ್‌ ಸಹಿತ 68 ರನ್ ಗೆಲುವು

India A vs England Lions, 2nd unofficial Test: Bowlers help India A gain huge lead

ಮೈಸೂರು, ಫೆಬ್ರವರಿ 15: ಭಾರತ 'ಎ' ತಂಡದ ಬೌಲರ್‌ಗಳ ದಾಳಿಗೆ ಸಿಲುಕಿದ ಪ್ರವಾಸಿ ಇಂಗ್ಲೆಂಡ್ ಲಯನ್ಸ್ ತಂಡ, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಒಂದು ಇನ್ನಿಂಗ್ಸ್‌ ಸಹಿತ 68 ರನ್ ಸೋಲನುಭವಿಸಿದೆ.

2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಪಂತ್ ಬೇಕಾ, ಇಲ್ಲ ದಿನೇಶ್ ಕಾರ್ತಿಕಾ?2019ರ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಪಂತ್ ಬೇಕಾ, ಇಲ್ಲ ದಿನೇಶ್ ಕಾರ್ತಿಕಾ?

ಭಾರತ ಪರ ವರುಣ್ ಆ್ಯರನ್ 2+1, ನವದೀಪ್ ಸೈನಿ 3+1, ಜಲಜ್ ಸಕ್ಸೇನಾ 2+2, ಶಹಬಾಝ್ ನದೀಮ್ 3+1 ಮತ್ತು ಮಯಾಂಕ್ ಮಾರ್ಕಂಡೆ 0+5 ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡವನ್ನು ಕಾಡಿದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅರ್ಧಶತಕ, ಅಭಿಮನ್ಯು ಈಶ್ವರನ್ ಶತಕವೂ ತಂಡದ ಗೆಲುವಿಗೆ ಕಾರಣವಾಯ್ತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ 'ಎ' ತಂಡ, ಆರಂಭಿಕ ಆಟಗಾರ - ನಾಯಕ ಕೆಎಲ್ ರಾಹುಲ್ 81, ಅಭಿಮನ್ಯು 117, ಪ್ರಿಯಾಂಕ್ ಪಾಂಚಲ್ 50 ರನ್ ನೆರವಿನೊಂದಿಗೆ 114.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 392 ರನ್ ಗಳಿಸಿತು. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 144 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 180 ರನ್ ಪೇರಿಸಿ ಶರಣಾಯಿತು.

ವಿಶ್ವಕಪ್ ತಂಡದಲ್ಲಿ ಪಂತ್ ಸೇರ್ಪಡೆಗೆ 5 ಕಾರಣಗಳನ್ನು ಕೊಟ್ಟ ಆಶೀಷ್ ನೆಹ್ರಾವಿಶ್ವಕಪ್ ತಂಡದಲ್ಲಿ ಪಂತ್ ಸೇರ್ಪಡೆಗೆ 5 ಕಾರಣಗಳನ್ನು ಕೊಟ್ಟ ಆಶೀಷ್ ನೆಹ್ರಾ

ಅಂತೂ ಭಾರತ ಪ್ರವಾಸ ಕೈಗೊಂಡಿದ್ದ ಸ್ಯಾಮ್ ಬಿಲ್ಲಿಂಗ್ಸ್‌ ನಾಯಕತ್ವದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಐದು ಅನಧಿಕೃತ ಏಕದಿನ ಪಂದ್ಯಗಳ ಸರಣಿಯನ್ನು 4-1ರಿಂದ, ಎರಡು ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿಯನ್ನು 1-0ಯಿಂದ (ಮೊದಲ ಪಂದ್ಯ ಡ್ರಾ) ಗೆದ್ದಂತಾಗಿದೆ.

Story first published: Friday, February 15, 2019, 16:31 [IST]
Other articles published on Feb 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X