ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್: ಕೊಹ್ಲಿ, ರಹಾನೆ ಆಸರೆ, ಭಾರತ 6 ವಿಕೆಟ್ ಕಳೆದು 307 ರನ್

india vs england live score 3rd test day 1

ಟ್ರೆಂಟ್ ಬ್ರಿಡ್ಜ್, ಆಗಸ್ಟ್ 19:ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊನೆಗೂ ಭಾರತ ದಿಟ್ಟ ಪ್ರದರ್ಶನ ನೀಡಿದೆ. ಮೊದಲ ದಿನದಾಂತ್ಯಕ್ಕೆ ಭಾರತ 87 ಓವರ್ ಮುಕ್ತಾಯಕ್ಕೆ 6 ವಿಕೆಟ್ ಕಳೆದು 307 ಉತ್ತಮ ರನ್ ಕಲೆ ಹಾಕಿತು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42376

ಮೊದಲೆರಡು ಟೆಸ್ಟ್ ಗಳಲ್ಲಿ ಆಂಗ್ಲರೆದುರು ಸೋಲು ಕಂಡಿದ್ದ ಭಾರತ ಮೂರನೇ ಟೆಸ್ಟ್ ನಲ್ಲಿ ತಂಡದಲ್ಲಿ ಸಣ್ಣ ಮಾರ್ಪಾಡುಗಳೊಂದಿಗೆ ಉತ್ತಮ ಮೊತ್ತ ಕಲೆ ಹಾಕಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 350 ರನ್ ಗಡಿ ದಾಟಿದರೂ ಇಂಗ್ಲೆಂಡ್ ಗೆ ಸವಾಲಿನ ಮೊತ್ತವನ್ನೇ ನೀಡಲಿದೆ.

ಇಂಗ್ಲೆಂಡ್ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದು ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ರನ್ ಪೇರಿಸುವ ಸಂಭವವಿದೆ. ಏನಾದರೂ ಭಾರತ ಮೊದಲೆರಡು ಟೆಸ್ಟ್ ಗಳಿಗೆ ಹೋಲಿಸಿದರೆ ಮೂರನೇ ಟೆಸ್ಟ್ ಗೆ ಎಚ್ಚೆತ್ತುಕೊಂಡಿದ್ದಂತೂ ಸುಳ್ಳಲ್ಲ. ಎರಡೂ ತಂಡಗಳ ದ್ವಿತೀಯ ಇನ್ನಿಂಗ್ಸ್ ಮುಕ್ತಾಯ ಪಂದ್ಯದ ಸ್ಪಷ್ಟ ಚಿತ್ರಣ ನೀಡಲಿದೆ.

ಆರಂಭಿಕ ಕುಸಿತ ಕಂಡ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಇಬ್ಬರೂ ಚಹಾ ವಿರಾಮದ ವೇಳೆಗೆ ಮುರಿಯದ ನಾಲ್ಕನೆಯ ವಿಕೆಟ್‌ಗೆ 107 ರನ್ ಕಲೆಹಾಕಿದ್ದರು.

ಚಹಾ ವಿರಾಮಕ್ಕೆ ಭಾರತ ಮೂರು ವಿಕೆಟ್ ಕಳೆದುಕೊಂಡು 189 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ಕೆ.ಎಲ್. ರಾಹುಲ್ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿ ಉತ್ತಮ ಆರಂಭ ಒದಗಿಸಿದರು. ಈ ಟೆಸ್ಟ್ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಭಾರತದ ಆರಂಭಿಕ ಜೋಡಿ 50ಕ್ಕೂ ಹೆಚ್ಚು ರನ್‌ಗಳ ಜತೆಯಾಟ ನೀಡಿತು.

ಉತ್ತಮವಾಗಿ ಆಡುತ್ತಿದ್ದ ಧವನ್ 35 (65) ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಮೊದಲ ವಿಕೆಟ್‌ಗೆ ಅವರು 60 ರನ್‌ಗಳ ಜತೆಯಾಟ ಕೊಟ್ಟರು.

ಮತ್ತೆ ಐದು ರನ್ ಸೇರಿಸುವುದರೊಳಗೆ ವೋಕ್ಸ್, ರಾಹುಲ್ ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದರು.

ಬಳಿಕ ಚೇತೇಶ್ವರ ಪೂಜಾರ 14 (31) ವೋಕ್ಸ್ ಎಸೆದ ಶಾರ್ಟ್‌ಪಿಚ್ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಆದಿಲ್ ರಶೀದ್ ಅವರ ಕೈಗೆ ನೀಡಿದರು.

ಭೋಜನ ವಿರಾಮದ ಬಳಿಕ ಕೊಹ್ಲಿ ಅವರ ಜತೆಗೂಡಿದ ರಹಾನೆ ಆಂಗ್ಲರ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಕೊಹ್ಲಿ ಅರ್ಧಶತಕ ಗಳಿಸಿದ ಬೆನ್ನಲ್ಲೇ ರಹಾನೆ ಕೂಡ ಅರ್ಧಶತಕದ ಗಡಿ ದಾಟಿದರು. ಇಡೀ ಸರಣಿಯಲ್ಲಿ ಕೊಹ್ಲಿ ಬಳಿಕ ಅರ್ಧಶತಕ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಭಾರತದ ಪಾಲಿಗೆ ಈ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸರಣಿಯನ್ನು ಜೀವಂತವಾಗಿರಿಸಲು ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ವಿಕೆಟ್ ಕೀಪರ್ ರಿಷಬ್ ಪಂತ್ ಈ ಪಂದ್ಯದಿಂದ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ವಿಫಲರಾಗಿದ್ದರು.

ಎರಡನೆಯ ಟೆಸ್ಟ್‌ನಲ್ಲಿ ಹೊರಗುಳಿದಿದ್ದ ಶಿಖರ್ ಧವನ್ ಈ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಜತೆ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸತತ ವೈಫಲ್ಯ ಕಂಡಿರುವ ಮುರಳಿ ವಿಜಯ್ ಅವರನ್ನು ಕೈಬಿಡಲಾಗಿದೆ.

ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಥಾನಕ್ಕೆ ಜಸ್‌ ಪ್ರೀತ್ ಬೂಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. ಗಾಯದ ಸಮಸ್ಯೆಯಿಂದ ಬೂಮ್ರಾ ಇದುವರೆಗೂ ಆಡಿರಲಿಲ್ಲ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಇಂಗ್ಲೆಂಡ್, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
ಕಳೆದ ಪಂದ್ಯದಲ್ಲಿ ಆಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ತಂಡಕ್ಕೆ ಮರಳಿದ್ದಾರೆ. ಮೊದಲ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸ್ಯಾಮ್ ಕುರ್ರನ್ ಹಿರಿಯ ಆಟಗಾರನಿಗೆ ಸ್ಥಾನ ಬಿಟ್ಟುಕೊಡಬೇಕಾಗಿದೆ.

2001ರಿಂದ ಟ್ರೆಂಟ್ ಬ್ರಿಡ್ಜ್‌ನಲ್ಲಿ ಆಡಿರುವ 15 ಟೆಸ್ಟ್ ಪಂದ್ಯಗಳಲ್ಲಿ 13ರಲ್ಲಿ ಫಲಿತಾಂಶ ದೊರೆತಿದೆ. ಈ ಕ್ರೀಡಾಂಗಣದಲ್ಲಿ ಭಾರತ ಎರಡು ಬಾರಿ ಡ್ರಾ ಸಾಧಿಸಿದೆ.

ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ

ಇಂಗ್ಲೆಂಡ್: ಜೋ ರೂಟ್ (ನಾಯಕ), ಅಲೆಸ್ಟರ್ ಕುಕ್, ಕೀಟನ್ ಜೆನ್ನಿಂಗ್ಸ್, ಓಲಿ ಪೋಪ್, ಜಾನಿ ಬೈರ್‌ಸ್ಟೋ (ವಿಕೆಟ್ ಕೀಪರ್), ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಸ್ಟುವರ್ಟ್‌ ಬ್ರಾಡ್, ಜೇಮ್ಸ್ ಆಂಡರ್ಸನ್

Story first published: Sunday, August 19, 2018, 1:18 [IST]
Other articles published on Aug 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X