ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ರೆಂಟ್ ಬ್ರಿಡ್ಜ್ ಟೆಸ್ಟ್: ಆಂಗ್ಲರ ವಿರುದ್ಧ ಭಾರತಕ್ಕೆ ಒಲಿದ ವಿಜಯಲಕ್ಷ್ಮಿ

India vs England Live Score 3rd Test Day 5 india won by 203 runs

ನ್ಯಾಟಿಂಗ್‌ಹ್ಯಾಮ್, ಆಗಸ್ಟ್ 22: ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ನಲ್ಲಿ ಭಾರತ ಕೊನೆಗೂ ಗೆಲುವಿನ ನಗೆ ಬೀರಿದೆ.

ಗೆಲುವಿಗೆ ಬೇಕಿದ್ದ ಏಕೈಕ ವಿಕೆಟ್‌ಗಾಗಿ ಐದನೇ ದಿನದ ಆಟ ಆರಂಭವಾಯಿತು. ಮಂಗಳವಾರ ದಿನದಾಟದ ಮೂರನೇ ಓವರ್‌ನಲ್ಲಿ ಆರ್. ಅಶ್ವಿನ್, ಆಂಡರ್ಸನ್ ವಿಕೆಟ್ ಕೀಳುವ ಮೂಲಕ 203 ರನ್‌ಗಳ ವಿಜಯ ದಾಖಲಿಸಿತು.

11 ರನ್ ಗಳಿಸಿದ್ದ ಆಂಡರ್ಸನ್, ಸ್ಲಿಪ್‌ನಲ್ಲಿದ್ದ ಅಜಿಂಕ್ಯ ರಹಾನೆ ಅವರಿಗೆ ಕ್ಯಾಚ್ ನೀಡಿದರು. ಇದರಿಂದ ಇಂಗ್ಲೆಂಡ್‌ನ ಬಾಲಂಗೋಚಿಗಳ ಹೋರಾಟಕ್ಕೆ ತೆರೆಬಿದ್ದಿತು. ಇನ್ನೊಂದೆಡೆ ಆದಿಲ್ ರಶೀದ್ 33 ರನ್ ಗಳಿಸಿ ಅಜೇಯರಾಗಿ ಉಳಿದರು.

 ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು? ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು?

ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋತು ಸುಣ್ಣವಾಗಿದ್ದ ಭಾರತ, ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಗೆಲುವಿನ ಮುನ್ನುಡಿ ಬರೆಯಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1ರ ಮುನ್ನಡೆ ಪಡೆದುಕೊಂಡಿದೆ.

ಗೆಲುವಿಗೆ ಬೇಕಾಗಿದ್ದ 521 ರನ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್, ಸೋಮವಾರ ಆರಂಭದಲ್ಲಿಯೇ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡರೂ ಜೋಸ್ ಬಟ್ಲರ್ ಚೊಚ್ಚಲ ಶತಕ ಮತ್ತು ಬೆನ್‌ ಸ್ಟೋಕ್ಸ್ ಅರ್ಧಶತಕದ ಕೆಚ್ಚೆದೆಯ ಆಟದಿಂದ ಮರುಹೋರಾಟ ನಡೆಸಿತ್ತು.

80 ಓವರ್‌ಗಳ ಆಟದ ನಂತರ ಹೊಸ ಚೆಂಡು ಕೈಗೆ ಬಂದ ಬಳಿಕ ವೇಗಿ ಜಸ್ ಪ್ರೀತ್ ಬೂಮ್ರಾ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕೇವಲ ಹತ್ತು ರನ್ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ವಿಕೆಟ್ ಕೀಪಿಂಗ್‌ನಲ್ಲಿಯೂ ದಾಖಲೆ ನಿರ್ಮಿಸಿದ ರಿಷಬ್ ಪಂತ್ವಿಕೆಟ್ ಕೀಪಿಂಗ್‌ನಲ್ಲಿಯೂ ದಾಖಲೆ ನಿರ್ಮಿಸಿದ ರಿಷಬ್ ಪಂತ್

ಆದರೆ, ಕೊನೆಯಲ್ಲಿ ಆದಿಲ್ ರಶೀದ್ ಮತ್ತು ಸ್ಟುವರ್ಟ್ ಬ್ರಾಡ್ ಬಿರುಸಿನ ಆಟವಾಡಿ ಅರ್ಧಶತಕದ ಜತೆಯಾಟ ನೀಡಿದರು. ಬ್ರಾಡ್ ಔಟಾದ ನಂತರ ಜೇಮ್ಸ್ ಆಂಡರ್ಸನ್ ಎಚ್ಚರಿಕೆಯಿಂದ ಆಡಿ ವಿಕೆಟ್ ಕಾಯ್ದಿರಿಸಿಕೊಂಡು ಪಂದ್ಯವನ್ನು ಮರುದಿನದವರೆಗೂ ಉಳಿಸಿದ್ದರು.

Story first published: Wednesday, August 22, 2018, 16:03 [IST]
Other articles published on Aug 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X