ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲೂ ಪಂದ್ಯಗಳು ಬೇಗನೆ ಅಂತ್ಯವಾಗಿದೆ: ಜೋಫ್ರಾ ಆರ್ಚರ್

India vs England: matches finish quickly even in England, Jofra Archer on Pitch debate

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಎರಡನೇ ದಿನದಲ್ಲಿ ಅಂತ್ಯ ಕಂಡ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡ್‌ನ ಕೆಲ ಮಾಜಿ ಕ್ರಿಕೆಟಿಗರು ಅಹ್ಮದಾಬಾದ್‌ನ ಪಿಚ್‌ ಬಗ್ಗೆ ತೀವ್ರ ಟೀಕೆಯನ್ನು ಮಾಡಿದ್ದಾರೆ. ಆದರೆ ನಾಯಕ ಜೋ ರೂಟ್ ಸಹಿತ ಇಂಗ್ಲೆಂಡ್ ತಂಡದ ಸದಸ್ಯರು ಪಿಚ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಈಗ ಈ ಸಾಲಿಗೆ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಕೂಡ ಸೇರಿಕೊಂಡಿದ್ದಾರೆ.

"ಪಿಚ್‌ಗಳು ದೊಡ್ಡ ಸಂಗತಿಯಲ್ಲ, ಜೀವನದಲ್ಲಿ ದೂರನ್ನು ನೀಡಲು ಹೆಚ್ಚು ವಿಚಾರಗಳು ಇಲ್ಲ. ಇಂಗ್ಲೆಂಡ್‌ನಲ್ಲಿಯೂ ಕೂಡ ಟೆಸ್ಟ್ ಪಂದ್ಯಗಳು ಬಲು ಬೇಗನೆ ಅಂತ್ಯ ಕಂಡಿದೆ" ಎಂದು ಜೋಫ್ರಾ ಆರ್ಚರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

ಭಾರತದಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಲ್ಲ, ಇಲ್ಲಿ ಚೆಂಡುಗಳು ಸ್ಪಿನ್ ಆಗುತ್ತದೆ ಎಂಬುದನ್ನು ಮೊದಲೇ ನಿರೀಕ್ಷಿಸಿರಬೇಕು ಎಂದು ಹೇಳಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯ ಕೇವಲ ಎರಡನೇ ದಿನದಾಟದಲ್ಲಿ ಸಂಪೂರ್ಣವಾಗಿತ್ತು. ಆರನೇ ಸೆಶನ್‌ಗೂ ಮುನ್ನವೇ ಪಂದ್ಯದ ಫಲಿತಾಂಶ ನಿರ್ಣಯವಾಗಿತ್ತು.

"ನನಗೆ ಯಾವ ಪಿಚ್‌ನಲ್ಲಿ ನಾವು ಆಡುತ್ತೇವೆ ಎಂಬುದು ಮುಖ್ಯವಾಗಲಾರದು. ಜೀವನದಲ್ಲಿ ಹೆಚ್ಚಾಗಿ ದೂರುವಂತದ್ದು ಏನೂ ಇರಲ್ಲ. ವೈಫೈ ನೆಟ್ವರ್ಕ್ ದುರ್ಬಲವಾಗಿರುವುದು ಹೊರತು ಪಡಿಸಿ" ಎಂದು ಜೋಫ್ರಾ ಆರ್ಚರ್ ತಮಾಷೆಯಾಗಿ ಹೇಳಿದರು. ಇಂಗ್ಲೆಂಡ್‌ನಲ್ಲಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸ್ವತಃ ಜೋಫ್ರಾ ಆರ್ಚರ್ ಆಡಿದ್ದ ಪಂದ್ಯವೊಂದು ಎರಡನೇ ದಿನದಾಟದ ಸಂದರ್ಭದಲ್ಲಿಯೇ ಅಂತ್ಯವಾಗಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

ಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

"ಪ್ರಾಮಾಣಿಕವಾಗಿ ಹೇಳಬೇಕಾದರೆ ನಾವು ಭಾರತದಲ್ಲಿ ಇದ್ದೇವೆ ಎಂದರೆ ನಾವು ಚೆಂಡು ಸ್ಪಿನ್ ಆಗುತ್ತದೆ ಎಂಬುದನ್ನು ನಿರೀಕ್ಷಿಸಬೇಕು. ಹಾಗೆಂದ ಮಾತ್ರಕ್ಕೆ ಅದು ಬ್ಯಾಟಿಂಗ್‌ಗೆ ಸುಲಭವಾಗಿದೆ ಎನ್ನುವುದು ತಪ್ಪಾಗುತ್ತದೆ" ಎಂದು ಪಿಚ್ ವಿಚಾರವಾಗಿ ಎದ್ದಿರುವ ಚರ್ಚೆಯ ಬಗ್ಗೆ ಜೋಫ್ರಾ ಆರ್ಚರ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

Story first published: Tuesday, March 2, 2021, 10:35 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X