ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಯಾಂಕ್ ಅಥವಾ ರಾಹುಲ್?: ಆರಂಭಿಕ ಆಟಗಾರನನ್ನು ಆಯ್ಕೆ ಮಾಡಿದ ಜಾಫರ್

India vs England: Mayank Agarwal or KL Rahul: Wasim Jaffer selects Indias opener

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಇನ್ನೂ ಒಂದು ತಿಂಗಳಿಗೂ ಅಧಿಕ ಸಮಯಾವಕಾಶವಿದೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಒಂದು ಹಿನ್ನಡೆಯಾಗಿದೆ. ಆರಂಭಿಕ ಆಟಗಾರ ಶುಬ್ಮನ್ ಗಾಯಗೊಂಡಿದ್ದಾರೆ. ಗಿಲ್‌ಗೆ ಕನಿಷ್ಠ ಎರಡು ತಿಂಗಳ ವಿಶ್ರಾಂತಿಯ ಅಗತ್ಯವಿದೆ ಎಂಬ ಮಾಹಿತಿಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಆರಂಭಿಕನಾಗಿ ರೋಹಿತ್ ಶರ್ಮಾಗೆ ಸಾಥ್ ನೀಡುವ ಆಟಗಾರ ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

ಈ ಸ್ಥಾನಕ್ಕೆ ಇಬ್ಬರು ಕನ್ನಡಿಗ ದಾಂಡಿಗರ ಮಧ್ಯೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಈ ಇಬ್ಬರು ಆಟಗಾರರ ಜೊತೆಗೆ ಅಭಿಮನ್ಯು ಈಶ್ವರನ್ ಹಾಗೂ ಹನುಮ ವಿಹಾರಿ ಹೆಸರುಗಳನ್ನು ಕೂಡ ಆರಂಭಿಕ ಸ್ಥಾನಕ್ಕೆ ಕೆಲ ಕೆಲ ಕ್ರಿಕೆಟ್ ಪಂಡಿತರು ಸೂಚಿಸುತ್ತಿದ್ದಾರೆ. ಆದರೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಈ ವಿಚಾರವಾಗಿ ನೇರವಾದ ಉತ್ತರವನ್ನು ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಆಂಗ್ಲರೆದುರು ಭಾರತದ ಆರಂಭಿಕ ಜೋಡಿ ದುರ್ಬಲವಾಗಲಿದೆಯಾ?ಭಾರತ vs ಇಂಗ್ಲೆಂಡ್: ಆಂಗ್ಲರೆದುರು ಭಾರತದ ಆರಂಭಿಕ ಜೋಡಿ ದುರ್ಬಲವಾಗಲಿದೆಯಾ?

ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಟೀಮ್ ಆರಂಭಿಕ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಸೂಕ್ತ ಆಟಗಾರ ಎಂಬುದನ್ನು ಹೇಳಿದ್ದಾರೆ. ಮಯಾಂಕ್‌ಗೆ ಈ ಅವಕಾಶವನ್ನು ನೀಡಲೇಬೇಕು ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಮಂಕಾಗಿ ಕಾಣಿಸಿದ್ದರಾದರೂ ಇಂಗ್ಲೆಂಡ್‌ನಲ್ಲಿ ಅವರು ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲಿದ್ದಾರೆ ಎಂದು ಜಾಫರ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಲು ಇಳಿದಿದ್ದ ಮಯಾಂಕ್ ಅಗರ್ವಾಲ್ ಎರಡು ಪಂದ್ಯಗಳಲ್ಲಿಯೂ ಖಳೆ ಪ್ರದರ್ಶನ ನೀಡಿದ್ದರು. ನಂತರ ಶುಬ್ಮನ್ ಗಿಲ್ ಆರಂಭಿಕನಾಗಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಇನ್ನು ಇದೇ ಸಂದರ್ಭದಲ್ಲಿ ಕೆಎಲ್ ರಾಹುಲ್‌ಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶವನ್ನು ನೀಡಬೇಕು ಎಂದು ವಾಸಿಂ ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

RCB ಹಾಗು Maxwell ವಿಚಾರದಲ್ಲಿ ಭರ್ಜರಿ ಸುದ್ದಿ | Oneindia Kannada

"ಇದು ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್‌ಗೆ ಸಿ್ಕಕ ಅತ್ಯುತ್ತಮವಾದ ಅವಕಾಶವಾಗಿದೆ. ಆರಂಭುಕನಾಗಿ ಮಯಾಂಕ್ ಅವರನ್ನು ನಾನು ಆಯ್ಕೆ ಮಾಡುತ್ತೇನೆ. ಅವರ ವೃತ್ತಿಜೀವನ ಈವರೆಗೆ ಅತ್ಯುತ್ತಮವಾಗಿದೆ. ಎರಡು ಪಂದ್ಯಗಳಲ್ಲಿ ನೀಡಿದ ಕೆಟ್ಟ ಪ್ರದರ್ಶನದ ಕಾರಣದಿಂದಾಗಿ ಅವರು ಸ್ಥಾನವನ್ನು ಕಳೆದುಕೊಂಡರು. ಈ ಅವಕಾಶವನ್ನು ಬಳಸಿಕೊಂಡು ಅವರು ಮುನ್ನುಗ್ಗಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ" ಎಂದು ವಾಸಿಂ ಜಾಫರ್ ಹೇಳಿದ್ದಾರೆ.

Story first published: Friday, July 2, 2021, 15:04 [IST]
Other articles published on Jul 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X