ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಮೊಯೀನ್ ಅಲಿ ಹೆಸರಿಗೊಂದು ವಿಶಿಷ್ಠ ದಾಖಲೆ

India vs England: Moeen Ali becomes first spinner to dismiss Virat Kohli for a duck in Tests

ಚೆನ್ನೈ: ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್ ಮೊಯೀನ್ ಅಲಿ ವಿಶಿಷ್ಠ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಡಕ್‌ ಔಟ್ ಮಾಡಿದ ಮೊದಲ ಸ್ಪಿನ್ನರ್ ಎಂಬ ದಾಖಲೆಗೆ ಅಲಿ ಕಾರಣರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ 'ಹಿಟ್‌ಮ್ಯಾನ್‌' ರೋಹಿತ್ ಅಪರೂಪದ ದಾಖಲೆ!ಇಂಗ್ಲೆಂಡ್ ವಿರುದ್ಧ 'ಹಿಟ್‌ಮ್ಯಾನ್‌' ರೋಹಿತ್ ಅಪರೂಪದ ದಾಖಲೆ!

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿತ್ತು. ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೊಹ್ಲಿ 21.2ನೇ ಓವರ್‌ನಲ್ಲಿ ಮೊಯೀನ್ ಅಲಿ ಎಸೆತಕ್ಕೆ ಬೌಲ್ಡ್ ಆಗಿ 0 ರನ್‌ಗೆ ನಿರ್ಗಮಿಸಿದ್ದರು.

ಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಬರೆದ ಅಜಿಂಕ್ಯ ರಹಾನೆಭಾರತ vs ಇಂಗ್ಲೆಂಡ್: ವಿಶೇಷ ದಾಖಲೆ ಬರೆದ ಅಜಿಂಕ್ಯ ರಹಾನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಬಹಳಷ್ಟು ಸಾರಿ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಮೊಯೀನ್ ಅಲಿ ವಿಕೆಟ್ ಸೇರಿ ಒಟ್ಟಿಗೆ 11 ಬಾರಿ ಕೊಹ್ಲಿ ಸೊನ್ನೆಗೆ ಔಟ್ ಆಗಿದ್ದಾರೆ. ಆದರೆ ಅಲಿ ಬಿಟ್ಟರೆ ಉಳಿದವರೆಲ್ಲರೂ ವೇಗಿಗಳು. ಹೀಗಾಗಿ ಟೆಸ್ಟ್‌ನಲ್ಲಿ ಕೊಹ್ಲೀನ ಸೊನ್ನೆಗೆ ಔಟ್ ಮಾಡಿದ ಮೊದಲ ಸ್ಪಿನ್ನರ್ ಎಂಬ ಹಿರಿಮೆ ಅಲಿ ಅವರದ್ದಾಗಿದೆ.

ಕೊಹ್ಲಿ ಈವರೆಗೆ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಲಿಯಾಮ್ ಪ್ಲಂಕೆಟ್, ಮೊಯೀನ್ ಅಲಿ, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಬೆನ್ ಹಿಲ್ಫೆನ್ಹೌಸ್, ಮಿಚೆಲ್ ಸ್ಟಾರ್ಕ್, ಶ್ರೀಲಂಕಾದ ಸುರಂಗ ಲಕ್ಮಲ್, ಬಾಂಗ್ಲಾದೇಶದ ಅಬು ಜಾಯೆದ್, ವೆಸ್ಟ್‌ ಇಂಡೀಸ್‌ನ ರವಿ ರಾಮ್‌ಪೌಲ್, ಕೆಮರ್ ರೋಚ್‌ಗೆ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ.

Story first published: Saturday, February 13, 2021, 17:24 [IST]
Other articles published on Feb 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X