ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಡಿಯಾ vs ಇಂಗ್ಲೆಂಡ್: ತಮಿಳುನಾಡು ಸ್ಕ್ವಾಡ್‌ನಿಂದ ನಟರಾಜನ್ ಬಿಡುಗಡೆ

India vs England: Pacer Natarajan released from Tamil Nadu squad after BCCI request

ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ತಮಿಳುನಾಡು ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದ ಟೀಮ್ ಇಂಡಿಯಾ ವೇಗಿ ಟಿ ನಟರಾಜನ್ ಅವರನ್ನು ಬಿಡುಗಡೆಗೊಳಿಸಲಾಗಿದೆ. ಬಿಸಿಸಿಐ ತಮಿಳುನಾಡು ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಮಿಳುನಾಡು ಕ್ರಿಕೆಟ್ ತಂಡದಿಂದ ನಟರಾಜನ್ ಬಿಡುಗಡೆಯಾಗಿದ್ದಾರೆ.

ಮುಂದಿನ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆರಂಭವಾಗಲಿದೆ. ಈ ಸರಣಿಗೆ ನಟರಾಜನ್ ಆಯ್ಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆಟಗಾರ ಆ ಟೂರ್ನಿಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಈ ಮನವಿಯನ್ನು ತಮಿಳುನಾಡು ಕ್ರಿಕೆಟ್ ಮಂಡಳಿಯೊಂದಿಗೆ ಮಾಡಿದೆ.

ಯುರೋ ಮಿಲಿಯನ್‌ನಲ್ಲಿ ಈ ವಾರ 163 ಮಿಲಿಯನ್ ಯೂರೋ ಗೆಲ್ಲಲು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.ಯುರೋ ಮಿಲಿಯನ್‌ನಲ್ಲಿ ಈ ವಾರ 163 ಮಿಲಿಯನ್ ಯೂರೋ ಗೆಲ್ಲಲು ನಿಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಿ.

"ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಾಗಿ ಟಿ ನಟರಾಜನ್ ಅವರು ತಾಜಾತನದಿಂದ ಇರಲು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ಬಿಸಿಸಿಐ ಬಯಸಿದೆ. ಟೀಮ್ ಇಂಡಿಐಆದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ" ಎಂದು ತಮಿಳುನಾಡು ಕ್ರಿಕೆಟ್ ಅಸೊಸಿಯೇಶನ್‌ನ ಕಾರ್ಯದರ್ಶಿ ಆರ್‌ಎಸ್ ರಾಮಸ್ವಾಮಿ ತಿಳಿಸಿದ್ದಾರೆ.

ವಿಜಯ್ ಹಝಾರೆ ಟ್ರೋಫಿ ಫೆಬ್ರವರಿ 20ರಿಂದ ಆರಂಭವಾಗಲಿದ್ದು ಆರಂಬದಲ್ಲಿ ಹೆಸರಿಸಿದ್ದ ತಂಡದಲ್ಲಿ ನಟರಾಜನ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಈಗ ಅವರ ಸ್ಥಾನಕ್ಕೆ ಆರ್‌ಎಸ್ ಜಗನಾಥ್ ಶ್ರೀನಿವಾಸ್ ಅವರನ್ನು ತಂಡ ಹೆಸರಿಸಿದೆ. ಈ ಟೂರ್ನಿಯ ಪಂದ್ಯಕ್ಕಾಗಿ ಫೆಬ್ರವರಿ 13ರಂದು ತಮಿಳುನಾಡು ತಂಡ ಇಂದೋರ್‌ಗೆ ಪ್ರಯಾಣ ಬೆಳೆಸಲಿದೆ.

2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು2ನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾಗೆ ಆತಂಕ ಮೂಡಿಸಿದ ನಾಲ್ಕು ಸಂಗತಿಗಳು

ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚಿದ್ದ ಟಿ ನಟರಾಜನ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗುವುದು ಖಚಿತ. ಸದ್ಯ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ನಡೆಯುತ್ತಿದ್ದು ಈ ಸರಣಿ ಅಂತ್ಯವಾಗುತ್ತಿದ್ದಂತೆಯೇ ಮೊದಲಿಗೆ ಮಾರ್ಚ್ 12ರಿಂದ ಅಹ್ಮದಾಬಾದ್‌ನಲ್ಲಿ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅದಾದ ಬಳಿಕ ಮಾರ್ಚ್ 23ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

Story first published: Thursday, February 11, 2021, 23:02 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X