ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಇಂಗ್ಲೆಂಡ್ ಮೊದಲ ಪಂದ್ಯ: ಆಸಕ್ತಿಕರ ಅಂಕಿ ಅಂಶಗಳು

ಮ್ಯಾಂಚೆಸ್ಟರ್, ಜುಲೈ 4: ಕುಲದೀಪ್ ಯಾದವ್ ಮಣಿಕಟ್ಟಿನ ಸ್ಪಿನ್ ಬೌಲಿಂಗ್ ಮೋಡಿ ಮತ್ತು ಕೆ.ಎಲ್. ರಾಹುಲ್ ಅಬ್ಬರದ ಶತಕ, ಆಂಗ್ಲರ ನಾಡಿನಲ್ಲಿ ಭಾರತದ ಸುದೀರ್ಘ ಪಯಣಕ್ಕೆ ಗೆಲುವಿನ ಮುನ್ನಡಿ ಬರೆದಿವೆ.

ಬೃಹತ್ ರನ್ ಪೇರಿಸುವತ್ತ ಮುನ್ನಡೆದಿದ್ದ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಸಾಲಾಗಿ ಪೆವಿಲಿಯನ್ ಕಡೆಗೆ ಅಟ್ಟುವ ಮೂಲಕ ಕುಲದೀಪ್ ಯಾದವ್ ಇಂಗ್ಲೆಂಡ್ ಬ್ಯಾಟಿಂಗ್ ಸಾಮರ್ಥ್ಯದ ಬೆನ್ನುಹುರಿ ಮುರಿದರು.

ಬಳಿಕ, ವಿರಾಟ್ ಕೊಹ್ಲಿ ಬದಲು ಮೂರನೇ ಕ್ರಮಾಂಕದಲ್ಲಿ ಆಡಿದ ಕೆ.ಎಲ್. ರಾಹುಲ್, ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ವೇಗಿಗಳು, ಸ್ಪಿನ್ನರ್‌ಗಳೆಂದು ಮುಲಾಜು ನೋಡದೆ ಚೆಂಡನ್ನು ಬೌಂಡರಿಗಟ್ಟುವತ್ತ ಗಮನ ಹರಿಸಿದರು.

ರಾಹುಲ್ ಶತಕದಂಚಿಗೆ ಬಂದಾಗ ಅವರ ಆಟದ ವೇಗ ತಗ್ಗಿತ್ತು. ಆದರೆ, ಆಗಲೇ ಗೆಲುವಿನ ಸನಿಹ ಬಂದಿದ್ದರಿಂದ ಅವರ ಜತೆಗೂಡಿದ್ದ ನಾಯಕ ಕೊಹ್ಲಿ ಅವಸರ ಮಾಡಲಿಲ್ಲ. ರಾಹುಲ್ ಶತಕಕ್ಕೆ ಅನುಕೂಲವಾಗುವಂತೆ ಒಂದೊಂದೇ ರನ್‌ಗಳನ್ನು ತೆಗೆದು ಸ್ಟ್ರೈಕ್ ನೀಡತೊಡಗಿದರು.

ಮೊದಲ ಟಿ20: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯಮೊದಲ ಟಿ20: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಆರಂಭಿಕ ಆಟಗಾರನ ಸ್ಥಾನದ ಅವಕಾಶ ಸಿಗದ ಕಾರಣಕ್ಕೆ ಸ್ಥಾನ ಸಿಗದೆ ಹೊರಗುಳಿಯಬೇಕಾಗಬಹುದು ಎಂಬಂತಾಗಿದ್ದ ರಾಹುಲ್, ತಂಡಕ್ಕೆ ತಮ್ಮ ಅವಶ್ಯಕತೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದರು.

ಮೊದಲ ಟಿ20 ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಭಾರತವು ಸಮರ್ಥವಾಗಿದೆ ಎಂಬುದನ್ನು ತೋರಿಸಿತು. ಈ ಪಂದ್ಯದ ಕೆಲವು ಆಸಕ್ತಿಕರ ಅಂಕಿ ಅಂಶಗಳನ್ನು ನೋಡೋಣ...

ಪಂದ್ಯದಲ್ಲಿ ಶತಕ ಮತ್ತು 5 ವಿಕೆಟ್

ಟಿ20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ತಂಡವೊಂದರ ಆಟಗಾರರು ಶತಕ ಮತ್ತು ಐದು ವಿಕೆಟ್ ಸಾಧನೆ ಮಾಡಿರುವುದು ಇದು ಎರಡನೆಯ ನಿದರ್ಶನ.

2015ರಲ್ಲಿ ಡರ್ಬನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಾರ್ನ್ ವಾನ್ ವೈಕ್ ಅಜೇಯ 114 ರನ್ ಗಳಿಸಿದ್ದರೆ, ವೇಗಿ ಡೇವಿಡ್ ವೈಸ್ 23 ರನ್ ನೀಡಿ 5 ವಿಕೆಟ್ ಪಡೆದಿದ್ದರು.

ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಔಟಾಗದೆ 101 ರನ್ ಬಾರಿಸಿದರೆ, ಕುಲದೀಪ್ ಯಾದವ್ 24 ರನ್ ನೀಡಿ 5 ವಿಕೆಟ್ ಪಡೆದರು.

ಕೊಹ್ಲಿ ವೇಗದ 2,000 ರನ್

ಟಿ20ಯಲ್ಲಿ 2,000 ರನ್ ಗಡಿ ದಾಟಿದ ನಾಲ್ಕನೆಯ ಆಟಗಾರ ಎಂಬ ಕೀರ್ತಿಗೆ ವಿರಾಟ್ ಕೊಹ್ಲಿ ಭಾಜನರಾದರು. ಜತೆಗೆ ಕಡಿಮೆ ಪಂದ್ಯದಲ್ಲಿ ಈ ಸಾಧನೆ ಮಾಡಿದ ಹೆಮ್ಮಯೂ ಅವರದಾಯಿತು.

ಅತಿ ವೇಗದ 1,000 ರನ್ ಸಾಧನೆ ಮಾಡಿದ ದಾಖಲೆಯೂ ಕೊಹ್ಲಿ ಹೆಸರಿನಲ್ಲಿದೆ. ಕೇವಲ 27 ಪಂದ್ಯಗಳಲ್ಲಿ ಕೊಹ್ಲಿ ಸಾವಿರ ರನ್ ದಾಟಿದ್ದರು.

ವಿರಾಟ್ ಕೊಹ್ಲಿ, ಭಾರತ- 56 ಪಂದ್ಯ
ಬ್ರೆಂಡನ್ ಮೆಕಲಂ, ನ್ಯೂಜಿಲೆಂಡ್- 66 ಪಂದ್ಯ
ಮಾರ್ಟಿನ್ ಗುಪ್ಟಿಲ್, ನ್ಯೂಜಿಲೆಂಡ್- 68 ಪಂದ್ಯ
ಶೋಯೆಬ್ ಮಲಿಕ್, ಪಾಕಿಸ್ತಾನ- 92 ಪಂದ್ಯ

ಒಂದೇ ದಿನ ಎರಡು ಶತಕ

ಒಂದೇ ದಿನ ನಡೆದ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಶತಕಗಳು ದಾಖಲಾಗಿದ್ದು ಇದು ಎರಡನೆಯ ಬಾರಿ. ಈ ಎರಡೂ ಉದಾಹರಣೆಗಳಲ್ಲಿ ಕೆ.ಎಲ್. ರಾಹುಲ್ ಭಾಗಿಯಾಗಿದ್ದಾರೆ ಎನ್ನುವುದು ವಿಶೇಷ.

ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ನಡೆದ ಪಂದ್ಯದಲ್ಲಿ ವಿಂಡೀಸ್‌ನ ಎವಿನ್ ಲೆವಿಸ್ ಶತಕ ಗಳಿಸಿದ್ದರೆ, ಅದೇ ಪಂದ್ಯದಲ್ಲಿ ರಾಹುಲ್ ಶತಕ ಗಳಿಸಿದ್ದರು.

ಎವಿನ್ ಲೆವಿಸ್ (ವೆಸ್ಟ್ ಇಂಡೀಸ್) -100 ಮತ್ತು ಕೆ.ಎಲ್. ರಾಹುಲ್ 110* - 2016, ಆಗಸ್ಟ್ 27
ಆರೋನ್ ಫಿಂಚ್ (ಆಸ್ಟ್ರೇಲಿಯಾ)- 172 ಮತ್ತು ಕೆ.ಎಲ್. ರಾಹುಲ್ 101* - 2018, ಜುಲೈ 3

ಭಾರತದ ಪರ ಐದನೇ ಶತಕ

ಭಾರತದ ಪರ ಐದನೇ ಶತಕ

118 ರೋಹಿತ್ ಶರ್ಮಾ Vs ಶ್ರೀಲಂಕಾ, 2017
110* ಕೆ.ಎಲ್. ರಾಹುಲ್ Vs ವೆಸ್ಟ್ ಇಂಡೀಸ್, 2016
106 ರೋಹಿತ್ ಶರ್ಮಾ Vs ದಕ್ಷಿಣ ಆಫ್ರಿಕಾ, 2015
101 ಸುರೇಶ್ ರೈನಾ Vs ದಕ್ಷಿಣ ಆಫ್ರಿಕಾ, 2010
101* ಕೆ.ಎಲ್. ರಾಹುಲ್ Vs ಇಂಗ್ಲೆಂಡ್, 2018

ಮೂರನೇ ಭಾರತೀಯ ಬೌಲರ್

ಮೂರನೇ ಭಾರತೀಯ ಬೌಲರ್

ಕುಲದೀಪ್ ಯಾದವ್ ಟಿ20 ಪಂದ್ಯವೊಂದರಲ್ಲಿ ಐದು ವಿಕೆಟ್ ಕಬಳಿಸಿದ ಭಾರತದ ಮೂರನೇ ಬೌಲರ್ ಎಂದೆನಿಸಿಕೊಂಡರು.

ಇದಕ್ಕೂ ಮೊದಲು ಯಜುರ್ವೇಂದ್ರ ಚಾಹಲ್ ಮತ್ತು ಭುವನೇಶ್ವರ್ ಕುಮಾರ್ ಐದು ವಿಕೆಟ್ ಪಡೆದಿದ್ದರು. 2017ರಲ್ಲಿ ಯುಜುರ್ವೇಂದ್ರ ಚಾಹಲ್ ಇಂಗ್ಲೆಂಡ್ ವಿರುದ್ಧ 27 ರನ್ ನೀಡಿ 6 ವಿಕೆಟ್ ಪಡೆದಿದ್ದರು. 2018ರ ಫೆಬ್ರುವರಿಯಲ್ಲಿ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧ 24 ರನ್ ನೀಡಿ 5 ವಿಕೆಟ್ ಪಡೆದಿದ್ದರು.

Story first published: Wednesday, July 4, 2018, 11:28 [IST]
Other articles published on Jul 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X