ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಬೃಹತ್ ಮೈಲಿಗಲ್ಲು ಸ್ಥಾಪಿಸಲು ಅಶ್ವಿನ್‌ಗೆ ಬೇಕು 6 ವಿಕೆಟ್!

 India vs england: R Ashwin verge of joining 400 wicket takers club

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಬಳಿಕ ಅಶ್ವಿನ್ ಇಂಗ್ಲೆಂಡ್ ವಿರುದ್ಧವೂ ತಮ್ಮ ಅತ್ಯುತ್ತಮ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಈಗ ಬೌಲಿಂಗ್‌ನಲ್ಲಿ ಬೃಹತ್ ಮಥಲಿಗಲ್ಲೊಂದನ್ನು ಸ್ಥಾಪಿಸುವ ಸನಿಹದಲ್ಲಿದ್ದಾರೆ ಆರ್ ಅಶ್ವಿನ್.

ಹೌದು, ಚೆನ್ನೈ ಮೂಲಕ ಸ್ಪಿನ್ನರ್ ಆರ್ ಅಶ್ವಿನ್ 400ನೇ ವಿಕೆಟ್‌ನ ಸಮೀಪದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಆರ್ ಅಶ್ವಿನ್ ಈ ಸಾಧನೆಯನ್ನು ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಗುರಿ ತಲುಪಲು ಆರ್ ಅಶ್ವಿನ್ ಇನ್ನು ಆರು ವಿಕೆಟ್‌ಗಳನ್ನು ಕಬಳಿಸಬೇಕಿದೆ. ಸದ್ಯ ಆರ್ ಅಶ್ವಿನ್ 394 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ

ಮೊಟೇರಾ ಪಿಚ್ ಕೂಡ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಹೀಗಾಗಿ ಆರ್ ಅಶ್ವಿನ್ 400 ವಿಕೆಟ್ ಪಡೆದ ಬೌಲರ್‌ಗಳ ವಿಶೇಷ ಪಟ್ಟಿಯಲ್ಲಿ ಯಾವುದೇ ಸಂದರ್ಭದಲ್ಲಾದರೂ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು.

ಮುಂದಿನ ಪಂದ್ಯದಲ್ಲಿ ಆರ್ ಅಶ್ವಿನ್ 6 ವಿಕೆಟ್ ಪಡೆದರೆ ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್ ನಂತರ 80 ಪಂದ್ಯಗಳಿಗೂ ಮುನ್ನವೇ ಈ ಸಾಧನೆಯನ್ನು ಮಾಡಿದ ಎರಡನೇ ಆಟಗಾರ ಎನಿಸಲಿದ್ದಾರೆ. 400 ವಿಕೆಟ್‌ಗಳನ್ನು ಪಡೆದ ವಿಶ್ವದ 16ನೇ ಬೌಲರ್ ಎನಿಸಲಿದ್ದಾರೆ ಆರ್ ಅಶ್ವಿನ್. ಭಾರತೀಯ ಆಟಗಾರರ ಪೈಕಿ ಈ ಸಾಧನೆ ಮಾಡಿದ 4ನೇ ಆಟಗಾರನಾಗಲಿದ್ದಾರೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಹಾಗೂ ಕಪಿಲ್‌ದೇವ್ ಈ ಸಾಧನೆ ಮಾಡಿದ ಉಳಿದ ಮೂವರು ಬೌಲರ್‌ಗಳು.

ಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ

ಆರ್ ಅಶ್ವಿನ್ ಈವರೆಗೆ 76 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ 394 ವಿಕೆಟ್ ಪಡೆದಿರುವ ಆರ್ ಅಶ್ವಿನ್ ಅವರ ಬೆಸ್ಟ್ ಬೌಲಿಂಗ್ ಸಾಧನೆ 7/59. 29 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವ ಆರ್ ಅಶ್ವಿನ್ 7 ಬಾರಿ 10 ವಿಕೆಟ್‌ಗಳ ಗೊಂಚಲು ಪಡೆದು ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್‌ನಲ್ಲೂ ಗಮನಾರ್ಹ ಸಾಧನೆ ಮಾಡಿರುವ ಆರ್ ಅಶ್ವಿನ್ 11 ಅರ್ಧ ಶತಕ ಹಾಗೂ 5 ಶತಕಗಳನ್ನು ಬಾರಿಸಿದ್ದಾರೆ.

Story first published: Tuesday, February 23, 2021, 8:17 [IST]
Other articles published on Feb 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X