ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡಿರುವುದು ಆತ್ಮವಿಶ್ವಾಸ ಮೂಡಿಸಿದೆ: ತೆವಾಟಿಯಾ

India vs England: Rahul Tewatia exited for maiden India call-up

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಂತರ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಹಾಗೂ ರಾಹುಲ್ ತೆವಾಟಿಯಾ ಭಾರತೀಯ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಬಗ್ಗೆ ರಾಹುಲ್ ತೆವಾಟಿಯಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ಈವರೆಗೆ ನಾವು ವಿರಾಟ್ ಕೊಹ್ಲಿ ವಿರುದ್ಧ ಐಪಿಎಲ್‌ನಲ್ಲಿ ಆಡಿದ್ದೆ. ಈಗ ನಾನು ಅವರೊಂದಿಗೆ ಆಡಲಿದ್ದೇನೆ. ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದೇನೆ. ಅವರೊಂದಿಗೆ ಹಾಗೂ ಭಾರತೀಯ ಕ್ರಿಕೆಟ್‌ನ ಕೆಲ ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚುವುದನ್ನು ಕಾಯಲು ಸಾಧ್ಯವಿಲ್ಲ" ಎಂದಿದ್ದಾರೆ ತೆವಾಟಿಯಾ.

"ಈ ಶ್ರೇಷ್ಠ ಆಟಗಾರರಿಂದ ಕಲಿಯಲು ನನಗೆ ಉತ್ತಮವಾದ ಸಂದರ್ಭವಾಗಿದೆ. ಕ್ರಿಕೆಟ್ ಲೋಕದಲ್ಲಿ ಅವರು ಯಾವ ರೀತಿ ಆಡುತ್ತಾರೆ, ಯಾವ ರೀತಿ ಸ್ಪರ್ಧೆಯನ್ನು ಎದುರಿಸುತ್ತಾರೆ ಹಾಗೂ ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು" ಎಂದು ತೆವಾಟಿಯಾ ಟಿ20 ತಂಡಕ್ಕೆ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ್ದಾರೆ.

"ಐಪಿಎಲ್‌ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಆಡಲು ಬರುತ್ತಾರೆ. ಅವರ ವಿರುದ್ಧ ನೀವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾದರೆ ಅದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಮ್ಯಾಚ್‌ವಿನ್ನಿಂಗ್ ಪ್ರದರ್ಶನ ನೀಡಬಹುದು ಎಂದು ವಿಶ್ವಾಸವನ್ನು ಹೊಂದಿದ್ದೇನೆ" ಎಂದಿದ್ದಾರೆ ರಾಹುಲ್ ತೆವಾಟಿಯಾ.

ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಹುಲ್ ತೆವಾಟಿಯ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸುವುದರ ಜೊತೆಗೆ ಬ್ಯಾಟಿಂಗ್‌ನಲ್ಲಿ ಮಿಂಚಿ ತಂಡಕ್ಕೆ ಕೆಲ ಗೆಲುವನ್ನು ತಂದುಕೊಟ್ಟಿದ್ದರು. ಅದರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅವರು ಒಂದು ಓವರ್‌ನಲ್ಲಿ ಐದು ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು.

Story first published: Monday, February 22, 2021, 8:03 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X