ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಟ್‌ನೆಸ್ ಟೆಸ್ಟ್‌ನಲ್ಲಿ ಫೇಲ್ ಆದ ತೆವಾಟಿಯಾ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅನುಮಾನ!

India vs England: Rahul Tewatia fails fitness test for maiden T20I series

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಇದೇ ಮೊದಲ ಬಾರಿಗೆ ಕಳೆದ ಬಾರಿಯ ಐಪಿಎಲ್‌ನಲ್ಲಿ ಮಿಂಚಿದ್ದ ಆಟಗಾರ ರಾಹುಲ್ ತೆವಾಟಿಯಾ ಆಯ್ಕೆಯಾಗಿದ್ದಾರೆ. ಆದರೆ ಈ ಅವಕಾಶ ರಾಹುಲ್ ತೆವಾಟಿಯಾ ಅವರ ಕೈತಪ್ಪುವ ಪರಿಸ್ಥಿತಿ ಉಂಟಾಗಿದೆ. ಫಿಟ್‌ನೆಸ್ ಪರೀಕ್ಷೆಯಲ್ಲಿ ರಾಹುಲ್ ತೆವಾಟಿಯಾ ವಿಫಲವಾಗಿದ್ದು ತಂಡವನ್ನು ಕೂಡಿಕೊಳ್ಳುವ ಬಗ್ಗೆ ಅನುಮಾನಗಳು ಎದ್ದಿದೆ.

ದಿ ಟೆಲಿಗ್ರಾಫ್ ವರದಿ ಮಾಡಿದಂತೆ ರಾಹುಲ್ ತೆವಾಟಿಯಾ ಮತ್ತು ವರುಣ್ ಚಕ್ರವರ್ತಿ ಫಿಟ್‌ನೆಸ್ ಟೆಸ್ಟ್‌ನಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ತಂಡದ ಆಟಗಾರರಿಗೆ ನಿಗದಿ ಪಡಿಸಿದ ಮಾನದಂಡಕ್ಕಿಂತ ಈ ಇಬ್ಬರು ಆಟಗಾರರ ಫಿಟ್‌ನೆಸ್ ಸಾಮರ್ಥ್ಯ ಕೆಳಮಟ್ಟದಲ್ಲಿದೆ ಎಂದು ತಿಳಿದುಬಂದಿದೆ. ವರುಣ್ ಚಕ್ರವರ್ತಿ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲವಾಗಿರುವುದು ಈ ಮೊದಲು ಬಹಿರಂಗವಾಗಿತ್ತು.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆಟಗಾರರು ಯೋ-ಯೋ ಪರೀಕ್ಷೆಯಲ್ಲಿ 17:1 ಅಂಕವನ್ನು ಪಡೆದಿರಬೇಕು ಅಥವಾ 2 ಕಿಲೋ ವೀಟರ್ ಅಂತರವನ್ನು 8.3 ನಿಮಿಷಗಳ ಒಳಗೆ ತಲುಪಿರಬೇಕು. ಹಾಗಾದಲ್ಲಿ ಮಾತ್ರವೇ ಟೀಮ್ ಇಂಡಿಯಾವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆ.

ಆದರೆ ರಾಹುಲ್ ತೆವಾಟಿಯಾ ಹಾಗೂ ವರುಣ್ ಚಕ್ರವರ್ತಿಗೆ ರಾಷ್ಟ್ರೀಯ ತಂಡವನ್ನು ಪ್ರತಿಧಿಸುವ ಅವಕಾಶ ಇಲ್ಲಿಗೇ ಅಂತ್ಯವಾಗುವುದಿಲ್ಲ. ಅವರಿಗೆ ಮತ್ತೊಮ್ಮೆ ಅವಕಾಶವನ್ನು ನೀಡಲಾಗುತ್ತದೆ. ಆಗ ಅವರು ತಮ್ಮ ನಿಗದಿತ ಮಾನದಂಡಗಳನ್ನು ಪೂರೈಸಿದರೆ ತಂಡವನ್ನು ಪ್ರವೇಶಿಸಲು ಅವಕಾಶ ಪಡೆಯುತ್ತಾರೆ.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

ರಾಷ್ಟ್ರೀಯ ತಂಡದ ಆಯ್ಕೆಗಾರರು ಹಾಗೂ ತಂಡದ ಮ್ಯಾನೇಜ್‌ಮೆಂಟ್ ಈ ಆಟಗಾರರ ಲಭ್ಯತೆಯ ಬಗ್ಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮಾಹಿತಿಯ ಮೇರೆಗೆ ನಿರ್ಣಯವನ್ನು ತೆಗೆದುಕೊಳ್ಳಲಿದೆ. ಭಾರತೀಯ ಕ್ರಿಕೆಟ್‌ನಲ್ಲಿ ಅಪರಿಚಿತವಾಗಿದ್ದ ರಾಹುಲ್ ತೆವಾಟಿಯಾ ಕಳೆದ ಐಪಿಎಲ್‌ನಲ್ಲಿ ನಿಡಿದ ಕೆಲ ಅದ್ಭುತ ಪ್ರದರ್ಶನಗಳಿಂದಾಗಿ ರಾಷ್ಟ್ರೀಯ ತಂಡದಲ್ಲಿ ಅವಕಾಶವನ್ನು ಪಡೆಯುವಂತೆ ಮಾಡಿದೆ.

Story first published: Wednesday, March 3, 2021, 17:27 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X