ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ನೆಟ್ ಅಭ್ಯಾಸಕ್ಕೆ ಮುನ್ನ ಸ್ಪೂರ್ತಿಯ ಮಾತುಗಳನ್ನಾಡಿದ ರವಿ ಶಾಸ್ತ್ರಿ

India vs England: Ravi Shastri welcomes India players to 1st training session

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಇನ್ನು ಕೇವಲ ಎರಡು ದಿನವಷ್ಟೇ ಬಾಕಿಯಿದೆ. ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್‌ ಆಟಗಾರರು ತಮ್ಮ ಹೋಟೆಲ್ ಕ್ವಾರಂಟೈನ್ ಅವಧಿಯನ್ನು ಪೂರೈಸಿದ್ದು ಮಂಗಳವಾರ ತಮ್ಮ ಮೊದಲ ದಿನದ ನೆಟ್ ಅಭ್ಯಾಸಕ್ಕೆ ಇಳಿದರು.

ಈ ನೆಟ್ ಅಭ್ಯಾಸಕ್ಕೆ ಮುನ್ನ ಟೀಮ್ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನ್ನಾಡಿದ್ದಾರೆ. ಪ್ರತಿಯೊಬ್ಬ ಆಟಗಾರನನ್ನು ಉದ್ದೇಶಿಸಿ ಮಾತನಾಡಿದ ರವಿ ಶಾಸ್ತ್ರಿ ಸ್ಪೂರ್ತಿಯ ಮಾತುಗಳನ್ನು ಮಾಡಿದ್ದಾರೆ. ಈ ಮೂಲಕ ಮತ್ತೊಂದು ಹೈವೋಲ್ಟೇಜ್ ಟೆಸ್ಟ್ ಸರಣಿಗೆ ತಂಡದ ಆಟಗಾರರಿಗೆ ಉತ್ಸಾಹವನ್ನು ತುಂಬಿದ್ದಾರೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಹೊರಾಂಗಣ ಅಭ್ಯಾಸ ಶುರುಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾದ ಹೊರಾಂಗಣ ಅಭ್ಯಾಸ ಶುರು

ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ರವಿ ಶಾಸ್ತ್ರಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ಎರಡು ಫೋಟೋಗಳನ್ನು ಹಂಚಿಕೊಂಡಿದೆ. " ಚೆನ್ನೈನಲ್ಲಿ ನಮ್ಮ ಮೊದಲ ದಿನದ ನೆಟ್ ಸೆಶನ್, ಮುಖ್ಯ ಕೋಚ್ ರವಿ ಶಾಸ್ತ್ರಿ ತಮ್ಮ ಪ್ರಚೋದನಾತ್ಮಕ ಮಾತುಗಳಿಂದ ತಂಡವನ್ನು ಸ್ವಾಗತಿಸಿದ್ದಾರೆ" ಎಂದು ಈ ಫೋಟೋಗೆ ಬರಹವನ್ನು ನೀಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಸರಣಿ ಗೆಲುವಿನ ಬಳಿಕ ರವಿ ಶಾಸ್ತ್ರಿ ಈಗ ಮತ್ತೊಂದು ಸರಣಿಗೆ ಸ್ಪೂರ್ತಿಯನ್ನು ನೀಡಿದ್ದಾರೆ. ಆಸಿಸ್ ನೆಲದಲ್ಲಿ ಟೀಮ್ ಇಂಡಿಯಾ ಭಾರೀ ಗಾಯದ ಸಮಸ್ಯೆಯಿಂದಾಗಿ ಪ್ರಮುಖ ಆಟಗಾರರ ಅಲಭ್ಯತೆಯ ಮಧ್ಯೆಯೂ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭರ್ಜರಿಯಾಗಿ ಆಡಿ 2-1 ಅಂತರದಿಂದ ಗೆದ್ದುಕೊಂಡಿತ್ತು. ಇದೇ ಹುರುಪಿನಲ್ಲಿರುವ ಟೀಮ್ ಇಂಡಿಯಾ ತವರಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಟವನ್ನು ನಡೆಸಲಿದೆ.

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಕ್ಕೆ ಎಚ್ಚರಿಸಿದ ಕಿರಣ್ ಮೋರೆಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಕ್ಕೆ ಎಚ್ಚರಿಸಿದ ಕಿರಣ್ ಮೋರೆ

ಮತ್ತೊಂದೆಡೆ ಇಂಗ್ಲೆಂಡ್ ತಂಡದ ಆಟಗಾರರು ಕೂಡ ತಮ್ಮ ಹೋಟೆಲ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಸೋಮವಾರ ನಡೆದ ಕೊರೊನಾ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರು ನೆಗೆಟಿವ್ ವರದಿ ಪಡೆದುಕೊಂಡಿದ್ದು ಮಂಗಳವಾರದಿಂದ ಇಂಗ್ಲೆಂಡ್ ತಂಡದ ಎಲ್ಲಾ ಆಟಗಾರರು ಕೂಡ ಅಭ್ಯಾಸಕ್ಕೆ ಇಳಿದಿದ್ದಾರೆ.

Story first published: Tuesday, February 2, 2021, 12:54 [IST]
Other articles published on Feb 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X