ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಶತಕದ ಸಮೀಪದಲ್ಲಿ ಎಡವಿದ ಹಿಟ್‌ಮ್ಯಾನ್ ರೋಹಿತ್

India vs England: Rohit Sharma misses century as James Anderson provides breakthrough

ಲಂಡನ್: ಭಾರತದ ಅನುಭವಿ ಬ್ಯಾಟ್ಸ್‌ಮನ್‌, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಶತಕದ ಸಮೀಪದಲ್ಲಿ ಎಡವಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಜೊತೆಗೆ ಬಂದಿದ್ದ ರೋಹಿತ್ 145 ಎಸೆತಗಳಲ್ಲಿ 83 ರನ್ ಬಾರಿಸಿ ನಿರ್ಗಮಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಆರಂಭಿಕ ಜೊತೆಯಾಟಕ್ಕಾಗಿ ರೋಹಿತ್ ಮತ್ತು ರಾಹುಲ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿದೆ.

'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್

ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಎರಡನೇ ಪಂದ್ಯವಿದು. ಈ ಪಂದ್ಯದ ಮೂಲಕ 41ನೇ ಟೆಸ್ಟ್ ಪಂದ್ಯ ಆಡಿದ್ದ ರೋಹಿತ್ ಭಾರತಕ್ಕೆ ರನ್ ಬಲ ತುಂಬಿ ಜೇಮ್ಸ್ ಆ್ಯಂಡರ್ಸನ್‌ ವಿಕೆಟ್‌ ನೀಡಿದ್ದಾರೆ.

ಭಾರತ vs ಇಂಗ್ಲೆಂಡ್, 2ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49713
ಶತಕದ ಸಮೀಪದಲ್ಲಿ ನಿರಾಸೆ ಅನುಭವಿಸಿದ ರೋಹಿತ್

ಶತಕದ ಸಮೀಪದಲ್ಲಿ ನಿರಾಸೆ ಅನುಭವಿಸಿದ ರೋಹಿತ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಇತ್ತೀಚೆಗೆ ಅಂಥ ಪ್ರದರ್ಶನ ನೀಡಿಲ್ಲ. ಮುಖ್ಯವಾಗಿ ರೋಹಿತ್ ಶತಕ ಬಾರಿಸದೆ ಬಹಳ ಸಮಯವಾಗಿದೆ. ಈ ಪಂದ್ಯದಲ್ಲಾದರೂ ರೋಹಿತ್‌ಗೆ ಶತಕ ಬಾರಿಸಲು ಅವಕಾಶವಿತ್ತು. ಆದರೆ 43.4ನೇ ಓವರ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ ಎಸೆತಕ್ಕೆ ರೋಹಿತ್ ಬೌಲ್ಡ್ ಆಗಿ ನಿರ್ಗಮಿಸಿದರು. ಈ ವೇಳೆ ರೋಹಿತ್ ಬ್ಯಾಟಿಂಗ್ 11 ಫೋರ್ಸ್, 1 ಸಿಕ್ಸರ್ ಸಿಡಿದಿತ್ತು. 57.24 ಸ್ಟ್ರೈಕ್‌ ರೇಟ್‌ನಲ್ಲಿ ರೋಹಿತ್ 83 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೂಡ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಹೀಗಾಗಿ ಇಬ್ಬರ ಹೆಸರಿನಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ನಿರ್ಮಾಣವಾಗಿದೆ. ಅತ್ಯುತ್ತಮ ಆರಂಭಿಕ ಜೊತೆಯಾಟ ನೀಡಿದ್ದಕ್ಕಾಗಿ ದಾಖಲೆ ಪಟ್ಟಿಗೆ ರಾಹುಲ್ ಮತ್ತು ರೋಹಿತ್ ಸೇರಿಕೊಂಡಿದ್ದಾರೆ.

ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹೆಸರಿನಲ್ಲಿ ದಾಖಲೆ

ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹೆಸರಿನಲ್ಲಿ ದಾಖಲೆ

ಇಂಗ್ಲೆಂಡ್‌ಗೆ ಪ್ರವಾಸ ಬಂದು ಟೆಸ್ಟ್ ಪಂದ್ಯ ಆಡುವಾಗ ಮೊದಲ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚಿಗೆ ಆರಂಭಿಕ ಜೊತೆಯಾಟ ನೀಡಿದ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಗುರುತಿಸಿಕೊಂಡಿದ್ದಾರೆ. 126 ರನ್ ಸಾಧನೆಯೊಂದಿಗೆ ರೋಹಿತ್, ರಾಹುಲ್ ಈ ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಮತ್ತು ಮಾರ್ಕ್ ಟೇಲರ್ ಇದ್ದಾರೆ. 1993ರಲ್ಲಿ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 128 ರನ್ ಗಳಿಸಿದ್ದರು.

ಇಂಗ್ಲೆಂಡ್‌ಗೆ ಪ್ರವಾಸ ಬಂದು ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಜೊತೆಯಾಟ ದಾಖಲೆ

ಇಂಗ್ಲೆಂಡ್‌ಗೆ ಪ್ರವಾಸ ಬಂದು ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಜೊತೆಯಾಟ ದಾಖಲೆ

* 128 ರನ್, ಮೈಕಲ್ ಸ್ಲೇಟರ್ - ಮಾರ್ಕ್ ಟೇಲರ್, ಆಸ್ಟ್ರೇಲಿಯಾ, ಓಲ್ಡ್ ಟ್ರಾಫರ್ಡ್, 1993
* 126 ರನ್, ರೋಹಿತ್ ಶರ್ಮಾ - ಕೆಎಲ್ ರಾಹುಲ್, ಭಾರತ, ಲಾರ್ಡ್ಸ್ ಸ್ಟೇಡಿಯಂ, 2021*
* 120 ರನ್, ಮಾರ್ಟಿನ್ ಕೆಂಟ್ - ಗ್ರೇಮ್ ವುಡ್, ಆಸ್ಟ್ರೇಲಿಯಾ, ದ ಓವಲ್ ಸ್ಟೇಡಿಯಂ, 1981
* 120 ರನ್, ಅಲ್ವಿನ್ ಪೀಟರ್ಸನ್ - ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾ, ಲೀಡ್ಸ್ ಸ್ಟೇಡಿಯಂ, 2012

ಕ್ರಿಕೆಟ್ ಕಾಶಿ ಎಂದು ಕರೆಸಿಕೊಳ್ಳುವ Lord's ಸ್ಟೇಡಿಯಂ | The Home of Cricket | Oneindia Kannada
ಇಂಗ್ಲೆಂಡ್ ಪ್ಲೇಯಿಂಗ್ XI / ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI / ಭಾರತ ಪ್ಲೇಯಿಂಗ್ XI

ಇಂಗ್ಲೆಂಡ್ ಪ್ಲೇಯಿಂಗ್ XI: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್, ಜೋ ರೂಟ್ (ಸಿ), ಜಾನಿ ಬೈರ್‌ಸ್ಟೊ, ಜೋಸ್ ಬಟ್ಲರ್ (ಡಬ್ಲ್ಯೂ), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಬೆಂಚ್: ಝ್ಯಾಕ್ ಕ್ರಾಲಿ, ಡೇನಿಯಲ್ ಲಾರೆನ್ಸ್, ಕ್ರೇಗ್ ಓವರ್‌ಟನ್, ಸಾಕಿಬ್ ಮಹಮೂದ್, ಓಲ್ಲಿ ಪೋಪ್, ಜ್ಯಾಕ್ ಲೀಚ್.
ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ಡಬ್ಲ್ಯೂ), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಬೆಂಚ್: ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ.

Story first published: Thursday, August 12, 2021, 20:57 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X