ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಗಿಲ್‌ಕ್ರಿಸ್ಟ್- ಹೇಡನ್ ದಾಖಲೆ ಹಿಂದಿಕ್ಕಿದ ರೋಹಿತ್-ಧವನ್

India vs England: Rohit Sharma-Shikhar Dhawan 17th-century partnership

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮೊದಲಿಗೆ ಬ್ಯಾಟಿಂಗ್‌ಗೆ ಇಳಿದಿದ್ದು ಉತ್ತಮ ಆರಂಭವನ್ನು ಪಡೆದಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿದ್ದಾರೆ. ಈ ಮೂಲಕ ಶತಕದ ಜೊತೆಯಾಟದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಆರಂಭಿಕರಾದ ಮ್ಯಾಥ್ಯೂ ಹೇಡನ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ಜೋಡಿಯನ್ನು ಹಿಂದಿಕ್ಕಿದ್ದಾರೆ.

ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಇಂದು 17 ನೇ ಶತಕದ ಜೊತೆಯಾಟವನ್ನು ನೀಡಿದ್ದಾರೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ಜೋಡಿ 16 ಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಆರಂಭಿಕ ಆಟಗಾರರಾಗಿ ಎರಡನೇ ಅತಿ ಹೆಚ್ಚು ಶತಕದ ಜೊತೆಯಾಟದಲ್ಲಿ ಭಾಗಿಯಾದ ಜೋಡಿ ಎನಿಸಿದ್ದಾರೆ.

ಭಾರತ vs ಇಂಗ್ಲೆಂಡ್: 3ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XIಭಾರತ vs ಇಂಗ್ಲೆಂಡ್: 3ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XI

ಸಚಿನ್-ಗಂಗೂಲಿ ಹೆಸರಿನಲ್ಲಿದೆ ದೊಡ್ಡ ದಾಖಲೆ

ಸಚಿನ್-ಗಂಗೂಲಿ ಹೆಸರಿನಲ್ಲಿದೆ ದೊಡ್ಡ ದಾಖಲೆ

ಆರಂಭಿಕ ಆಟಗಾರರಲ್ಲಿ ಭಾರತದ ದಿಗ್ಗಜ ಜೋಡಿಯಾದ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜೋಡಿ 26 ಶತಕದ ಜೊತೆಯಾಟವನ್ನು ನೀಡಿ ಅತಿ ಹೆಚ್ಚಿನ ಬಾರಿ ಈ ಸಾಧನೆ ಮಾಡಿದ ಜೋಡಿ ಎನಿಸಿದೆ. ಒಟ್ಟಾರೆ ಶತಕದ ಜೊತೆಯಾಟವನ್ನು ನೀಡಿದ ಪಟ್ಟಿಯಲ್ಲಿ ಶರ್ಮಾ-ಧವನ್ ಜೋಡಿ 3ನೇ ಸ್ಥಾನದಲ್ಲಿದ್ದಾರೆ. ಸಚಿನ್ ಹಾಗೂ ಗಂಗೂಲಿ ಜೋಡಿ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದ್ದಾರೆ. ಶರ್ಮಾ-ಕೊಹ್ಲಿ ಜೋಡಿ 18 ಶತಕದ ಜೊತೆಯಾಟವನ್ನು ನೀಡಿದೆ.

ಉತ್ತಮ ಆರಂಭ ನೀಡಿದ ಆರಂಭಿಕ ಜೋಡಿ

ಉತ್ತಮ ಆರಂಭ ನೀಡಿದ ಆರಂಭಿಕ ಜೋಡಿ

ಇಂಗ್ಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ 103 ರನ್‌ಗಳ ಕೊಡುಗೆ ನೀಡಿದರು. ಆದಿಲ್ ರಶೀದ್‌ಗೆ ಬೌಲ್ಡ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ರೋಹಿತ್ ಶರ್ಮಾ 37 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಈ ಪಂದ್ಯದಲ್ಲಿ ಮತ್ತೊಂದು ಅರ್ಧ ಶತಕವನ್ನು ಬಾರಿಸಿದ್ದು 67 ರನ್‌ಗಳಿಸಿ ಔಟಾದರು.

ಭಾರತದ ಪರ ದೀರ್ಘ ಕಾಲದಿಂದ ಆರಂಭಿಕರು

ಭಾರತದ ಪರ ದೀರ್ಘ ಕಾಲದಿಂದ ಆರಂಭಿಕರು

ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬಳಿಕ ನಿರಂತರವಾಗಿ ಭಾರತದ ಪರವಾಗಿ ಆರಂಭಿಕರಾಗಿ ಕಣಕ್ಕಿಳಿದಿರುವ ಈ ಜೋಡಿ ಸಾಕಷ್ಟು ಅದ್ಭುತವಾದ ಇನ್ನಿಂಗ್ಸ್‌ಅನ್ನು ಭಾರತಕ್ಕೆ ನೀಡಿದೆ. ಈ ಮೂಲಕ ಹಲವಾರು ಭಾರತದ ಗೆಲುವುಗಳಿಗೆ ಈ ಜೋಡಿ ಬುನಾದಿ ಒದಗಿಸಿದೆ.

Story first published: Monday, March 29, 2021, 8:11 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X