ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಶ್ವದಾಖಲೆ ಸರಿಗಟ್ಟಿದ ಸ್ಯಾಮ್ ಕರ್ರನ್

India vs England, Sam Curran world record for 8th wicket highest individual score

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಅಂತಿ ಏಕದಿನ ಪಂದ್ಯದಲ್ಲಿ ಭಾರತ ರೋಮಾಂಚನಕಾರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಯುವ ಆಟಗಾರ ಸ್ಯಾಮ್ ಕರ್ರನ್ ಭಾರತದ ಗೆಲುವನ್ನು ಬಹುತೇಕ ಕಸಿದುಕೊಂಡಿದ್ದರು. ಅಂತಿಮ ಕ್ಷಣದಲ್ಲಿ ಭಾರತದ ಗೆಲುವು ಖಾತ್ರಿಯಾಯಿತು. ಈ ಹೋರಾಟದಲ್ಲಿ ಸ್ಯಾಮ್ ಕರ್ರನ್ 95 ರನ್ ಬಾರಿಸಿ ಅಜೇಯವಾಗುಳಿದರು.

ಇದು ಏಕದಿನ ಮಾದರಿಯಲ್ಲಿ 8ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಟಗಾರನೋರ್ವ ದಾಖಲಿಸಿದ ಸಾರ್ವಕಾಲಿಕ ಬೃಹತ್ ಮೊತ್ತವಾಗಿದೆ. ಈ ದಾಖಲೆಯನ್ನು ಸ್ಯಾಮ್ ಕರನ್ ತಮ್ಮದೇ ದೇಶದ ಕ್ರಿಸ್ ವೋಕ್ಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಕ್ರಿಸ್ ವೋಕ್ಸ್ ಕೂಡ 2016ರಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 95 ರನ್‌ಗಳಿಸಿ ಅಜೇಯವಾಗುಳಿದಿದ್ದರು.

8ನೇ ಕ್ರಮಾಂಕದಲ್ಲಿ ಸ್ಯಾಮ್ ಕರ್ರನ್ ಬ್ಯಾಟಿಂಗ್‌ಗೆ ಇಳಿದಾಗ ಇಂಗ್ಲೆಂಡ್ ಸುಲಭವಾಗಿ ಶರಣಾಗಿ ಬಿಡುತ್ತದೆ ಎಂಬ ಲೆಕ್ಕಾಚಾರವಿತ್ತು. ಸ್ವತಃ ಇಂಗ್ಲೆಂಡ್ ಕೂಡ ಎಲ್ಲಾ ಭರವಸೆಗಳನ್ನು ಕಳೆದುಕೊಂಡಾಗಿತ್ತು. ಭಾರತದ ಬೌಲರ್‌ಗಳು ಅಷ್ಟು ಉತ್ತಮ ಲಯದಲ್ಲಿದ್ದರು. ಇಂಗ್ಲೆಂಡ್‌ನ ಅಗ್ರ ಬ್ಯಾಟ್ಸ್‌ಮನ್‌ಗಳೆಲ್ಲಾ ಅದಾಗಲೇ ವಿಕೆಟ್ ಕೈಚೆಲ್ಲಿಯಾಗಿತ್ತು.

ಆದರೆ ಸ್ಯಾಮ್ ಕರನ್ ಮಾತ್ರ ಕೆಚ್ಚೆದೆ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದರು. ಬಾಲಂಗೋಚಿಗಳ ಜೊತೆ ಸೇರಿ ದೊಡ್ಡ ಜೊತೆಯಾಟವನ್ನು ಕಟ್ಟುತ್ತಾ ಸಾಗಿದರು. ಮೊದಲಿಗೆ ಆದಿಲ್ ರಶೀದ್ ಜೊತೆಗೆ 67 ರನ್‌ಗಳ ಜೊತೆಯಾಟವನ್ನು ಆಡಿದ ಸ್ಯಾಮ್ ಬಳಿಕ ಮಾರ್ಕ್ ವುಡ್ ಜೊತೆಗೆ 60 ರನ್‌ಗಳ ಜೊತೆಯಾಟವನ್ನು ಆಡಿದರು. ಸಾಧ್ಯವಾದಷ್ಟು ಎಸೆತಗಳನ್ನು ತಾನೇ ಎದುರಿಸಿ ಇಂಗ್ಲೆಂಡ್ ತಂಡವನ್ನು ಜಯದ ಸಮೀಪಕ್ಕೆ ತಂದು ನಿಲ್ಲಿಸಿದರು. ಈ ಸಂದರ್ಭದಲ್ಲಿ ಆದಿಲ್ ರಶೀದ್ 19 ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ ಮಾರ್ಕ್‌ವುಡ್ 14 ರನ್‌ಗಳಿಸಿ ರನ್‌ಔಟ್ ಆದರು.

ಅಂತಿಮವಾಗಿ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 322 ರನ್‌ ಗಳಸಲಷ್ಟೇ ಶಕ್ತವಾಯಿತು. ಈ ಮೂಲಕ 7 ರನ್‌ಗಳಿಂದ ರೋಚಕ ಸೋಲು ಕಂಡಿತು. ಸ್ಯಾಮ್ ಕರನ್ 83 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 95 ರನ್‌ಗಳಿಸಿ ಅಜೇಯವಾಗಿ ಉಳಿದರು.

ಏಕದಿನ ಕ್ರಿಕೆಟ್‌ನಲ್ಲಿ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಗಳಿಸಿದ ಟಾಪ್ 5 ಸ್ಕೋರ್‌ಗಳು
95* ಸ್ಯಾಮ್ ಕರನ್ vs ಭಾರತ, ಪುಣೆ, 2021
95* ಕ್ರಿಸ್ ವೀಕ್ಸ್ vs ಶ್ರಿಲಂಕಾ, ನಾಟಿಂಗ್‌ಹ್ಯಾಮ್, 2016
92* ಆಂಡ್ರೆ ರಸ್ಸೆಲ್ vs ಭಾರತ, ನಾರ್ಥ್‌ಸೌಂಡ್, 2011
92 ನಥನ್ ಕೌಲ್ಟರ್‌ನೈಲ್ vs ವೆಸ್ಟ್ ಇಂಡೀಸ್, ನಾಟಿಂಗ್‌ಹ್ಯಾಮ್, 2019
86* ರವಿ ರಾಂಪಾಲ್ vs ಭಾರತ, ವೈಜಾಗ್, 2011

Story first published: Monday, March 29, 2021, 18:16 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X