ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ನೆಲದಲ್ಲಿ ದಾಖಲೆಯ ಜೊತೆಯಾಟವಾಡಿದ ಶಮಿ-ಬೂಮ್ರಾ ಜೋಡಿ

India vs England: Shami and Bumrah record breaking partnership in england

ಲಂಡನ್, ಆಗಸ್ಟ್ 16: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಮೂಡಿಸಿದೆ. ನಾಲ್ಕನೇ ದಿನದಲ್ಲಿ ಬ್ಯಾಟಿಂಗ್‌ನಲ್ಲಿ ಆಘಾತ ಅನುಭವಿಸಿದ ಭಾರತ ಅಂತಿಮ ದಿನ ಮೈದಾನಕ್ಕೆ ಇಳಿದಾಗ ನಂತರ ತನ್ನ ಮತ್ತೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ ಇಂಗ್ಲೆಂಡ್‌ಗೆ ಭಾರತ ಸುಲಭ ಸವಾಲಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂಗ್ಲೆಂಡ್ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದ್ದು ಭಾರತದ ಬಾಲಂಗೋಚಿ ಜೋಡಿಯಾದ ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ. ಭಾರತ ತಂಡ ನಿರೀಕ್ಷಿಸಿರದ ಪ್ರದರ್ಶನ ಲಾರ್ಡ್ಸ್ ಅಂಗಳದಲ್ಲಿ ಇವರಿಬ್ಬರು ನೀಡಿದರು.

ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ನೀಡಿದ ಈ ಪ್ರದರ್ಶನ ಟೀಮ್ ಇಂಡಿಯಾವನ್ನು ಸೋಲಿನ ಅಪಾಯದಿಂದಲೂ ಪಾರು ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ 298 ರನ್‌ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ 272 ಮುನ್ನಡೆಯನ್ನು ಪಡೆದುಕೊಂಡಿತು.

ಇನ್ನು ಈ ಪಂದ್ಯದಲ್ಲಿ 8ನೇ ವಿಕೆಟ್‌ಗೆ ಅಜೇಯ 89 ರನ್‌ಗಳ ಜೊತೆಯಾಟವನ್ನು ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ನೀಡಿದರು. ಈ ಜೊತೆಯಾಟ ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡದ 8 ಕ್ರಮಾಂಕದ ಜೋಡಿ ನೀಡಿದ ಅತಿ ದೊಡ್ಡ ಜೊತೆಯಾಟವಾಗಿದೆ. ಈ ಮೂಲಕ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಲಾರ್ಡ್ಸ್ ಅಂಗಳದಲ್ಲಿ ದಾಖಲೆಯನ್ನು ಬರೆದಿದ್ದಾರೆ.

ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!

ಅರ್ಧ ಶತಕ ಸಿಡಿಸಿದ ಮೊಹಮ್ಮದ್ ಶಮಿ: ಇನ್ನು ಐದನೇ ದಿನದಾಟದ ಆರಂಭದಲ್ಲಿ ಭಾರತದ ಪ್ರಮುಖ ಆಟಗಾರ ರಿಷಭ್ ಪಂತ್ ವಿಕೆಟ್ ಕಳೆದುಕೊಂಡ ನಂತರ ಕ್ರೀಸ್‌ಗಿಳಿದ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ತೋರಿದ ಕೌಶಲ್ಯ ಅದ್ಭುತವಾಗಿತ್ತು. ಭಾರತದ ಬಾಲಂಗೋಚಿಗಳ ಮೇಲೆ ದಾಳಿ ನಡೆಸಲು ಹವಣಿಸುತ್ತಿದ್ದ ಇಂಗ್ಲೆಂಡ್ ಬೌಲರ್‌ಗಳಿಗೆ ಶಮಿ ಮುಟ್ಟಿ ನೋಡಿಕೊಳ್ಳುವಂತೆ ಆಘಾತ ನೀಡಿದರು. ಯಾವುದೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಕಡಿಮೆಯಿಲ್ಲದಂತೆ ಪ್ರದರ್ಶನ ನೀಡಿದರು ಮೊಹಮ್ಮದ್ ಶಮಿ. 70 ಎಸೆತಗಳನ್ನು ಎದುರಿಸಿದ ಭಾರತ ತಂಡದ ಅನುಭವಿ ಆಟಗಾರ ಆಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 56 ರನ್‌ಗಳನ್ನು ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅರ್ಧ ಶತಕ ಸಿಡಿಸಿ ಈ ಇನ್ನಿಂಗ್ಸ್‌ಅನ್ನು ಸ್ಮರಣೀಯ ಗೊಳಿಸಿದರು.

ತಿರುಗೇಟು ನೀಡಿದ ಬೂಮ್ರಾ: ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡದ ತಂಡದ ಆಟಗಾರರು ಜಸ್ಪ್ರಿತ್ ಬೂಮ್ರಾ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಪ್ರಯತ್ನ ನಡೆಸಿದ್ದು ಸ್ಪಷ್ಟವಾಗಿತ್ತು. ಜೇಮ್ಸ್ ಆಂಡರ್ಸನ್ ಅವರಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಎಸೆದ ಕಠಿಣ ಓವರ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ತಂಡ ದಾಲಿ ನಡೆಸಲು ಸಜ್ಜಾಗಿತ್ತು. ಆದರೆ ಜಸ್ಪ್ರೀತ್ ಬೂಮ್ರಾ ಇಂಗ್ಲೆಂಡ್ ತಂಡದ ಈ ದಾಳಿಯನ್ನು ಅದ್ಭುತವಾಗಿ ಎದುರಿಸಿದರು. ಈ ಸಂದರ್ಭದಲ್ಲಿ ಎರಡು ಎಸೆತಗಳು ಬೂಮ್ರಾ ಹೆಲ್ಮೆಟ್‌ಗೆ ಬಡಿದಿತ್ತು. ಬೂಮ್ರಾ ಈ ಅಜೇಯ ಆಟದಲ್ಲಿ 64 ಎಸೆತಗಳನ್ನು ಎದುರಿಸಿ 34 ರನ್‌ ಬಾರಿಸಿದ್ದಾರೆ. ಈ ಮೂಲಕ ಭಾರತ ತಂಡ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಗುರಿ ನೀಡಲು ಕಾರಣರಾದರು.

ಮತ್ತೆ ಭಾರತದ ಪರ ತಿರುಗಿದ ಪಂದ್ಯ: ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಎರಡು ತಂಡಗಳ ನಡುವಿನ ಜಿದ್ದಾಜಿದ್ದಿನ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಆರಂಭದ ದಿನದಿಂದಲೂ ಒಮ್ಮೆ ಭಾರತ ತಂಡ ಹಿಡಿತ ಸಾಧಿಸಿದರೆ ಬಳಿಕ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿತ್ತು. ಆದರೆ ನಾಲ್ಕನೇ ದಿನದಂತ್ಯಕ್ಕಾಗುವಾಗ ಪಂದ್ಯ ಸಂಪೂರ್ಣ ಇಂಗ್ಲೆಂಡ್ ಪರವಾಗಿತ್ತು. ಅಂತಿಮ ದಿನ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಭಾರತ ಕನಿಷ್ಠ ಡ್ರಾ ಮಾಡಿಕೊಂಡರೂ ದೊಡ್ಡ ಸಾಧನೆಯಾಗಲಿದೆ ಎಂಬ ಭಾವನೆ ಸ್ವತಃ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಂದಿತ್ತು. ಆದರೆ ಅಂತಿಮ ದಿನ ಬೂಮ್ರಾ ಹಾಗೂ ಶಮಿ ನಿಡಿದ ಪ್ರದರ್ಶನ ಈ ಎಲ್ಲಾ ಅಭಿಪ್ರಾಯಗಳನ್ನು ಬದಲಿಸಿತ್ತು. ಭಾರತದ ಮೇಲಿದ್ದ ಒತ್ತಡ ಇಂಗ್ಲೆಂಡ್ ತಂಡಕ್ಕೆ ವಾಲಿತ್ತು.

Story first published: Monday, August 16, 2021, 19:29 [IST]
Other articles published on Aug 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X