ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿಗಾಗಿ ಟೀಮ್ ಇಂಡಿಯಾ ಸ್ಕ್ವಾಡ್ ಸೇರಿಕೊಂಡ ಶ್ರೇಯಸ್ ಐಯ್ಯರ್, ಶಿಖರ್ ಧವನ್

 India vs England: Shikhar Dhawan and Shreyas Iyer join Team India squad for t20 series

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾದ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿಗಾಗಿ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಇನ್ನಷ್ಟೇ ಆರಂಭವಾಗಬೇಕಿದ್ದು ಅದಕ್ಕೂ ಮೊದಲೇ ತಂಡವನ್ನು ಈ ಆಟಗಾರರು ಕೂಡಿಕೊಂಡಿದ್ದಾರೆ.

ಮಾರ್ಚ್ 12ರಿಂದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಎಲ್ಲಾ ಪಂದ್ಯಗಳು ಕೂಡ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಹೀಗಾಗಿ ಈ ಇಬ್ಬರು ಕೂಡ ಅಹ್ಮದಾಬಾದ್ ತಲುಪಿದ್ದಾರೆ.

ವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾವಿರಾಟ್ ಕೊಹ್ಲಿ ಆಧುನಿಕ ದಿನಗಳ ಹೀರೋ ಇದ್ದಂತೆ: ಸ್ಟೀವ್ ವಾ

ಮಂಗಳವಾರ ಶಿಖರ್ ಧವನ್ ಟ್ವಿಟ್ಟರ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು "ಪ್ಲೇಯಿಂಗ್ ಕೂಲ್ ವಿದ್ ಮಿಸ್ಟರ್ ಐಯ್ಯರ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವುದು ಶ್ರೇಷ್ಠ ಅನುಭವ ಎಂದಿದ್ದಾರೆ.

ಪ್ರಸಕ್ತ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದ್ದರು. ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಧವನ್ 118 ಎಸೆತಗಳಲ್ಲಿ 153 ರನ್ ಬಾರಿಸಿದ್ದರು. ಐಯ್ಯರ್ ಮುಂಬೈ ಪರವಾಗಿ ಕಣಕ್ಕಿಳಿದು ಎರಡು ಶತಕ ಸಿಡಿಸಿದ್ದಾರೆ.

ಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿಮೈದಾನದ ಹೊರಗೊಂದು ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ

ಟೀಮ್ ಇಂಡಿಯಾ ಟಿ20 ಸ್ಕ್ವಾಡ್:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಯುಜುವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ಆಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್, ಶಾರ್ದುಲ್ ಠಾಕೂರ್.

Story first published: Tuesday, March 2, 2021, 16:24 [IST]
Other articles published on Mar 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X