ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಭಾರತ ರವಾನಿಸಿದ 5 ಕಠಿಣ ಸಂದೇಶಗಳಿವು!

India vs England: Team India send 5 tough message to england in 1st match

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಕೊನೆಯ ದಿನ ಮಳೆಗೆ ಆಹುತಿಯಾಗಿದ್ದು ಮಾತ್ರವಲ್ಲದೆ ಇಡೀ ಪಂದ್ಯ ಮಳೆಯಿಂದಾಗಿ ಡ್ರಾ ಫಲಿತಾಂಶ ಪಡೆಯುವಂತಾಗಿತ್ತು. ಪಂದ್ಯದಲ್ಲಿ ಆರಂಭದಿಂದಲೂ ಉತ್ತಮ ಹಿಡಿತ ಹೊಂದಿದ್ದ ಭಾರತ ತಂಡ ಈ ಫಲಿತಾಂಶದಿಂದ ನಿರಾಸೆ ಅನುಭವಿಸಿದೆ. ಗೆಲ್ಲಬಹುದಾಗಿದ್ದ ಪಂದ್ಯದ ಫಲಿತಾಂಶ ಡ್ರಾ ಆಗಿ ಬದಲಾಗಿದ್ದು ಭಾರತೀಯ ತಮಡದ ಪಾಲಿಗೆ ನಿಜಕ್ಕೂ ಬೇಸರದ ಸಂಗತಿ. ಅದರಲ್ಲೂ ಸುದೀರ್ಘ ಕಾಲದಿಂದ ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲುವಿಗೆ ಹಂಬಲಿಸುತ್ತಿರುವ ಭಾರತೀಯ ತಂಡಕ್ಕೆ ಈ ಫಲಿತಾಂಶದಿಂದ ದೊಡ್ಡ ನಿರಾಸೆಯಾಗಿದೆ.

ಹಾಗಿದ್ದರೂ ಸರಣಿಯಲ್ಲಿ ಭಾರತ ತಂಡ ಪಡೆದ ಅದ್ಭುತ ಆರಂಭ ನಿಜಕ್ಕೂ ತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ. ಇಂಗ್ಲೆಂಡ್ ನೆಲದಲ್ಲಿಯೇ ಆತಿಥೆಯ ತಂಡದ ವಿರುದ್ಧ ವಿರಾಟ್ ಕೊಹ್ಲಿ ಸರ್ವಾಂಗೀರ್ಣ ಪ್ರದರ್ಶನ ನೀಡಿದ ರೀತಿಯಿಂದಾಗಿ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಉಳಿದ ಪಂದ್ಯಗಳಿಗೆ ಮುನ್ನ ಭಾರತ ಕೆಲ ಕಠಿಣ ಸಂದೇಶಗಳನ್ನು ರವಾನಿಸಿದೆ.

ತಿಂಗಳ ಕಾಲದ ಸಿದ್ಧತೆಗೆ ಮೊದಲ ಟೆಸ್ಟ್‌ನಲ್ಲಿ ಬೆಲೆ ದೊರೆತಿದೆ: ಕೆಎಲ್ ರಾಹುಲ್ ಹೇಳಿಕೆತಿಂಗಳ ಕಾಲದ ಸಿದ್ಧತೆಗೆ ಮೊದಲ ಟೆಸ್ಟ್‌ನಲ್ಲಿ ಬೆಲೆ ದೊರೆತಿದೆ: ಕೆಎಲ್ ರಾಹುಲ್ ಹೇಳಿಕೆ

ಹಾಗಾದರೆ ಭಾರತ ಇಂಗ್ಲೆಂಡ್‌ಗೆ ನೀಡಿದ ಆ ಕಠಿಣ ಸಂದೇಶಗಳು ಯಾವುದು ಮುಂದೆ ಓದಿ..

ಬ್ಯಾಟಿಂಗ್‌ನಲ್ಲಿ ಮೇಲುಗೈ

ಬ್ಯಾಟಿಂಗ್‌ನಲ್ಲಿ ಮೇಲುಗೈ

ಭಾರತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸವಾಲಿನ ಕಠಿಣ ಪಿಚ್‌ನಲ್ಲಿಯೂ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಭಾರತದ ಪರವಾಗಿ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿದು ಮೊದಲ ಇನ್ನಿಂಗ್ಸ್‌ನಲ್ಲಿ 84 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. ಆತಿಥೇಯ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 183 ರನ್‌ಗಳಿಗೆ ಕುಸಿದಿದ್ದರೂ ಭಾರತ 273 ರನ್‌ಗಳನ್ನು ಪಡೆದು ಮಹತ್ವದ 95 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ಈ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಲು ಭಾರತಕ್ಕೆ ಸಾಧ್ಯವಾಯಿತು.

ಯುವ ಹಾಗೂ ಅನುಭವಿಗಳ ಸಮ್ಮಿಶ್ರಣ

ಯುವ ಹಾಗೂ ಅನುಭವಿಗಳ ಸಮ್ಮಿಶ್ರಣ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಅತ್ಯಂತ ಬಲಿಷ್ಠ ತಂಡವನ್ನೇ ಹೊಂದಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಜಸ್ಪ್ರೀತ್ ಬೂಮ್ರಾ ಅವರಂತಾ ಅನುಭವಿಗಳ ಜೊತೆಗೆ ಮೊಹಮ್ಮದ್ ಸಿರಾಜ್, ರಿಷಬ್ ಪಂತ್, ಶಾರ್ದೂಲ್ ಠಾಕೂರ್ ಅವರಂತಾ ಯುವ ಆಟಗಾರರು ತಂಡದಲ್ಲಿದ್ದು ಅದ್ಭುತವಾದ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಾರಿಯ ಸರಣಿ ಹಿಂದಿನ ಸರಣಿಗಳಿಗಿಂತ ಇಂಗ್ಲೆಂಡ್ ತಂಡಕ್ಕೆ ಕಠಿಣವಾಗಿರಲಿದೆ ಎಂಬುದು ಮೊದಲ ಪಂದ್ಯದಲ್ಲಿಯೇ ಸಾಬೀತಾಗಿದೆ.

ಇಂಗ್ಲೆಂಡ್ ದಾಂಡಿಗರಿಗೆ ಎಚ್ಚರಿಗೆ

ಇಂಗ್ಲೆಂಡ್ ದಾಂಡಿಗರಿಗೆ ಎಚ್ಚರಿಗೆ

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡಿದ್ದರೂ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಪಡೆ ಭಾರತದ ಬೌಲಿಂಗ್ ದಾಳಿಯ ಮುಂದೆ ಸಂಪೂರ್ಣವಾಗಿ ನೆಲಕಚ್ಚಿತ್ತು. ಭಾರತದ ಬೌಲಿಂಗ್ ದಾಳಿಯ ವಿರುದ್ಧ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಸಮರ್ಥವಾಗಿ ಪ್ರತಿರೋಧವನ್ನು ಒಡ್ಡಲು ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗಕ್ಕೆ ಸಾಧ್ಯತವಾಗಲಿಲ್ಲ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾತ್ರವೇ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಏಕಾಂಗಿ ಹೋರಾಟವನ್ನು ನಡೆಸಿದ್ದಾರೆ. ಇದು ಭಾರತ ಇಂಗ್ಲೆಂಡ್ ತಂಡಕ್ಕೆ ರವಾನಿಸಿದ ಪ್ರಮುಖ ಸಂದೇಶವಾಗಿದೆ.

ಶೀಘ್ರವಾಗಿ ಪಿಚ್ ಅರ್ಥಮಾಡಿಕೊಳ್ಳಬಲ್ಲ ಬೌಲರ್‌ಗಳು

ಶೀಘ್ರವಾಗಿ ಪಿಚ್ ಅರ್ಥಮಾಡಿಕೊಳ್ಳಬಲ್ಲ ಬೌಲರ್‌ಗಳು

ಭಾರತೀಯ ಬೌಲರ್‌ಗಳು ಇಂಗ್ಲೆಂಡ್‌ನ ಪಿಚ್‌ಅನ್ನು ಮೊದಲ ಪಂದ್ಯದಲ್ಲಿ ಶೀಘ್ರವಾಗಿ ಅರ್ಥೈಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ಆರಂಭದಿಂದಲೇ ಯಶಸ್ಸು ಕಾಣಲು ಆರಂಭಿಸಿತ್ತು. ಇಂಗ್ಲೆಂಡ್ ಬೌಲರ್‌ಗಳಿಗೆ ಪೂರಕವಾಗಿ ನಿರ್ಮಿಸಿರುವ ಪಿಚ್‌ನಲ್ಲಿ ಭಾರತೀಯ ವೇಗಿಗಳು ಅದನ್ನು ಅದ್ಭುತ ರೀತಿಯಲ್ಲಿ ಬಳಸಿಕೊಂಡು ಆತಿಥೇಯರಿಗಿಂತಲೂ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಇದು ಇಂಗ್ಲೆಂಡ್ ತಂಡಕ್ಕೆ ಭಾರತ ನೀಡಿದ ಮತ್ತೊಂದು ಎಚ್ಚರಿಕೆಯಾಗಿದೆ.

ನೀರಜ್ ಚೋಪ್ರಾ ಮತ್ತು ಅದಿತಿ ಅಶೋಕ್ ಗೆ KSRTC ಇಂದ ಬಂಪರ್ ಗಿಫ್ಟ್ | Oneindia Kannada
ಭಾರತದ ಆಕ್ರಮಣಕಾರಿ ಬೌಲಿಂಗ್

ಭಾರತದ ಆಕ್ರಮಣಕಾರಿ ಬೌಲಿಂಗ್

ಭಾರತದ ಬೌಲರ್‌ಗಳ ಆಕ್ರಮಣಕಾರಿ ಪ್ರದರ್ಶನ ಇಂಗ್ಲೆಂಡ್ ದಾಂಡಿಗರಿಗೆ ಸವಾಲಾಗಿದೆ. ಜಸ್ಪ್ರೀತ್ ಬೂಮ್ರಾ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿರುವುದು ಭಾರತದ ಪಾಲಿಗೆ ಅತ್ಯಂತ ದೊಡ್ಡ ಸಕಾರಾತ್ಮಕ ಸಂಗತಿಯಾಗಿದೆ. ಇನ್ನು ಮೊಹಮ್ಮದ್ ಶಮಿ ಕೂಡ ಮೊನಚು ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಸ್ವಿಂಗ್ ದಾಳಿಯ ಜೊತೆಗಿನ ಆಕ್ರಮಣಕಾರಿ ಆಟ ಇಂಗ್ಲೆಂಡ್ ದಾಂಡಿಗರನ್ನು ಕಂಗೆಡಿಸಿದೆ. ಇದು ಮುಂದಿನ ಪಂದ್ಯಗಳಲ್ಲಿಯೂ ಆತಿಥೇಯರಿಗೆ ಸವಾಲಾಗಿರುವುದರಲ್ಲಿ ಆಶ್ಚರ್ಯವಿಲ್ಲ.

Story first published: Monday, August 9, 2021, 14:02 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X