ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಭಾರತದ ದಾಖಲೆ ಬರೆದ ರಿಷಭ್ ಪಂತ್- ರವೀಂದ್ರ ಜಡೇಜಾ ಜೋಡಿ

India vs England test: Rishabh Pant and Ravindra Jadeja break the record with 222-run partnership

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ತ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದರೂ ನಂತರ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಮೊದಲ ದಿನದಾಟದ ಗೌರವ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಅಗ್ರ ಕ್ರಮಾಂಕದ ದಾಂಡಿಗರು ಸಂಪೂರ್ಣ ವಿಫಲವಾಗುವ ಮೂಲಕ ಕನಿಷ್ಠ ಮೊತ್ತಕ್ಕೆ ಕುಸಿಯವ ಭೀತಿಯನ್ನು ಎದುರಿಸಿತ್ತು ಭಾರತ. ಆದರೆ ರಿಷಬ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿಯಿಂದ ಭಾರತಕ್ಕೆ ನಿರ್ಣಾಯಕ ಜೊತೆಯಾಟ ಲಭ್ಯವಾಗಿದೆ. ಇಬ್ಬರು ಆಟಗಾರರು ಕೂಡ ಪಂದ್ಯದ ಬಹುತೇಕ ಅವಧಿಯನ್ನು ಭಾರತದ ಪರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತದ ಪರವಾಗಿ ದಾಖಲೆಯೊಂದನ್ನು ಬರೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದ ನಾಯಕರಾಗಿ ನೇಮಕಗೊಂಡ 8 ಆಟಗಾರರ ಪಟ್ಟಿ

222 ರನ್‌ಗಳ ಜೊತೆಯಾಟ ನೀಡಿದ ಪಂತ್-ಜಡ್ಡು

222 ರನ್‌ಗಳ ಜೊತೆಯಾಟ ನೀಡಿದ ಪಂತ್-ಜಡ್ಡು

ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜೇಮ್ಸ್ ಆಂಡರ್ಸನ್ ದಾಳಿಗೆ ಆಘಾತ ಅನುಭವಿಸಿದ ಭಾರತ ತಂಡ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತ್ತು. 28 ಓವರ್‌ಗಳ ಅಂತ್ಯಕ್ಕೆ 98 ರನ್‌ಗಳಿಗೆ ಭಾರತ ತಂಡ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇಂಗ್ಲೆಂಡ್ ಬೌಲರ್‌ಗಳು ಮತ್ತೆ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಆರನೇ ವಿಕೆಟ್‌ಗೆ ಈ ಜೋಡಿ ಬರೊಬ್ಬರಿ 222 ರನ್‌ಗಳ ಜೊತೆಯಾಟ ನೀಡಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ದಾಖಲೆ

ಇಂಗ್ಲೆಂಡ್ ನೆಲದಲ್ಲಿ ದಾಖಲೆ

ಎಡ್ಸ್‌ಬಾಸ್ಟನ್ ಟೆಸ್ಟ್‌ನಲ್ಲಿ 222 ರನ್‌ಗಳ ಜೊತೆಯಾಟ ನೀಡಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಜೋಡಿ ಇಂಗ್ಲೆಂಡ್ ನೆಲದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. 6ನೇ ವಿಕೆಟ್‌ಗೆ ಭಾರತದ ಜೋಡು ಇಂಗ್ಲೆಂಡ್‌ನಲ್ಲಿ ಬಾರಿಸಿದ ಅತಿ ಹೆಚ್ಚಿನ ಮೊತ್ತ ಎನಿಸಿಕೊಂಡಿದೆ. ಅಲ್ಲದೆ ಈ ಜೊತೆಯಾಟ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚಿನ ಜೊತೆಯಾಟ ಎನಿಸಿಕೊಂಡಿದೆ.

146 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಪಂತ್

146 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಪಂತ್

ಇನ್ನು ಭಾರತದ ಪರವಾಗಿ ಈ ಜೋಡಿ ಮತ್ತಷ್ಟು ಹೆಚ್ಚಿನ ರನ್‌ಗಳಿಸುವ ಉದ್ದೇಶದಲ್ಲಿದ್ದದ್ದು ಸ್ಪಷ್ಟವಾಗಿತ್ತು. ಆದರೆ ಈ ಸಂದರ್ಭದಲ್ಲಿ ಜೋ ರೂಟ್ ಎಸೆತದಲ್ಲಿ ರಿಷಬ್ ಪಂತ್ ಎಡವಿದರು. 150 ರನ್‌ಗಳಿಸುವ ಸನಿಹದಲ್ಲಿದ್ದ ಪಂತ್ ವೇಗವಾಗಿ ಈ ಮೈಲಿಗಲ್ಲನ್ನು ದಾಟುವ ದಾಖಲೆ ಮಾಡಲು 4 ರನ್‌ಗಳ ಅಂತರದಿಂದ ವಿಫಲವಾಗಿ ನಿರ್ಗಮಿಸಿದರು. ಪಂತ್ 146 ರನ್‌ಗಳಿಸಿ ತಮ್ಮ ಅಮೋಘ ಇನ್ನಿಂಗ್ಸ್ ಅಂತ್ಯಗೊಳಿಸಿದರು.

ಇನ್ನು ಮೊದಲ ದಿನದಾಟದ ಅಂತ್ಯದಲ್ಲಿ ಭಾರತ 338 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಕ್ರಿಸ್ ಕಾಯ್ದಿರಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ 83 ರನ್‌ಗಳಿಸಿದ್ದು ಶತಕದ ಸನಿಹದಲ್ಲಿದ್ದರೆ ಶಮಿ ಅವರಿಗೆ ಸಾಥ್ ನೀಡುತ್ತಿದ್ದಾರೆ.

ಪಂತ್ ಈಸ್ ಬ್ಯಾಕ್: ಪತ್ರಕರ್ತನ ಪ್ರಶ್ನೆಗೆ ಪಂತ್ ಕೊಟ್ಟ ಉತ್ತರ ಫುಲ್ ವೈರಲ್ | Oneindia Kannada
ಆಡುವ ಬಳಗ

ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಫೋಕ್ಸ್, ಕ್ರೇಗ್ ಓವರ್ಟನ್, ಜೇಮೀ ಓವರ್ಟನ್, ಹ್ಯಾರಿ ಬ್ರೂಕ್

ಭಾರತ ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ನಾಯಕ)
ಬೆಂಚ್: ಉಮೇಶ್ ಯಾದವ್, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್

Story first published: Saturday, July 2, 2022, 10:11 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X