ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ನಾಯಕನಿಗೆ ಶಾಕ್ ನೀಡಿದ ಕೊರೊನಾ: ರೋಹಿತ್ ಸ್ಥಾನದಲ್ಲಿ ಕಣಕ್ಕಿಳಿಯಬಲ್ಲ 3 ಆಟಗಾರರು

India vs England: These 3 cricketers can replace Rohit Sharma as opener

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನಾಡಲು ಇಂಗ್ಲೆಂಡ್‌ಗೆ ತೆರಳಿರುವ ಭಾರತ ತಂಡಕ್ಕೆ ಕೋವಿಡ್ ಆಘಾತ ನೀಡಿದೆ. ತಂಡದ ನಾಯಕ ರೋಹಿತ್ ಶರ್ಮಾ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ಕೋವಿಡ್19ಗೆ ತುತ್ತಾಗಿರುವುದು ದೃಡಪಟ್ಟಿದೆ. ಹೀಗಾಗಿ ರೋಹಿತ್ ಶರ್ಮಾ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಯಕ ರೋಹಿತ್ ಶರ್ಮಾ ಕೊರೊನಾವೈರಸ್‌ಗೆ ತುತ್ತಾಗಿರುವ ಕಾರಣ ಜುಲೈ 1ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನವೆನಿಸಿದೆ. ಇದು 2-1 ಅಂತರದಿಂದ ಮುನ್ನಡೆಯಲಿದ್ದು ಸರಣಿ ವಶಕ್ಕೆ ಪಡೆಯುವ ಗುರಿಯಿಟ್ಟುಕೊಂಡಿರುವ ಭಾರತ ತಂಡಕ್ಕೆ ಆಘಾತ ನೀಡಿದೆ. ಈಗಾಗಲೇ ಗಾಯದ ಕಾರಣದಿಂದಾಗಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಪಂದ್ಯಕ್ಕೆ ಅಲಭ್ಯವಾಗಿದ್ದು ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಕೂಡ ಅಲಭ್ಯವಾದಲ್ಲ ತಂಡಕ್ಕೆ ಭಾರೀ ಹಿನ್ನಡೆಯಾಗಲಿದೆ.

IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆIND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ

ಹಾಗಾದರೆ ಜುಲೈ 1ರಿಂದ ಆರಂಬವಾಗಲಿರುವ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯಲು ಸಾಧ್ಯವಾಗದಿದ್ದಲ್ಲಿ ಆ ಸ್ಥಾನವನ್ನು ತುಂಬಬಲ್ಲ ಆಟಗಾರ ಯಾರು? ಮೂವರು ಸಮರ್ಥ ಆಟಗಾರರು ಈ ಸ್ಥಾನವನ್ನು ತುಂಬಲು ಸಿದ್ಧವಾಗಿದ್ದು ಆ ಬಗ್ಗೆ ಮಾಹಿತಿ ಇಲ್ಲಿದೆ..

ಚೇತೇಶ್ವರ್ ಪೂಜಾರ

ಚೇತೇಶ್ವರ್ ಪೂಜಾರ

ಭಾರತದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. 0, ಹಾಗೂ 22 ರನ್ ಮಾತ್ರವೇ ಪೂಜಾರ ಬ್ಯಾಟಿಂಗ್‌ನಿಂದ ಬಂದಿದೆ. ಆದರೆ ಇಂಗ್ಲೆಂಡ್‌ನಲ್ಲಿ ನಡೆದ ಕೌಂಟಿ ಟೂರ್ನಿಯಲ್ಲಿ ಪೂಜಾರ ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ಸಸೆಕ್ಸ್ ಪರವಾಗಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ ಪೂಜಾರ 720 ರನ್‌ಗಳಿಸಿದ್ದಾರೆ. 120ರ ಸರಾಸರಿಯಲ್ಲಿ ಪೂಜಾರ ಬ್ಯಾಟಿಂಗ್ ಮಾಡಿದ್ದು ನಾಲ್ಕು ಶತಕ ಸಿಡಿಸಿದ್ದಾರೆ. ಈ ಪ್ರದರ್ಶನವೇ ಅವರು ಭಾರತ ತಂಡಕ್ಕೆ ಮರಳಲು ಕಾರಣವಾಗಿದೆ. ಒಂದು ತುದಿಯಲ್ಲಿ ಶುಬ್ಮನ್ ಗುಲ್ ಹಣಕ್ಕಿಳಿಯುವ ಕಾರಣ ಅನುಭವಿ ಆಟಗಾರನ ಅಗತ್ಯವಿದೆ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದರೆ ಪೂಜಾರ ಆರಂಬಿಕನಾಗಿ ರೋಹಿತ್ ಶರ್ಮಾ ಸ್ಥಾನ ತುಂಬಲಿದ್ದಾರೆ.

ಕೆಎಸ್ ಭರತ್

ಕೆಎಸ್ ಭರತ್

ಲಿಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆಎಎಸ್ ಭರತ್ ಅದ್ಭುತವಾಗಿ ಬ್ಯಾಟಿಂಗ್ ನಡೆಸುವ ಮೂಲಕ ತನ್ನ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ. ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಯಾವ ದಾಂಡಿಗರು ಕೂಡ 40 ರನ್‌ಗಳಿಗಿಂತ ಅಧಿಕ ರನ್ ಬಾರಿಸಲು ವಿಫಲವಾಗಿದ್ದಾಗ ಭರತ್ 70 ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಎರಡನೇ ಇನ್ನಿಂಗ್ಸ್‌ನಲ್ಲಿಯೂ 43 ರನ್‌ಗಳ ಕೊಡುಗೆ ನೀಡಿದ್ದಾರೆ ಭರತ್. ಹೀಗಾಗಿ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಅವಕಾಶ ಪಡೆದು ಆರಂಭಿಕನಾಗಿ ಕಣಕ್ಕಿಳಿದರೆ ಅಚ್ಚರಿಯಿಲ್ಲ.

ಹನುಮ ವಿಹಾರಿ

ಹನುಮ ವಿಹಾರಿ

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಆರಂಭಿಕನಾಗಿ ಕಣಕ್ಕಿಲಿಯಲು ಮತ್ತೊಂದು ಉತ್ತಮ ಆಯ್ಕೆಯೆಂದರೆ ಅದು ಹನುಮ ವಿಹಾರಿ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಬಾರಿ ಭಾರತ ತಂಡದ ಆರಂಭಿಕನಾಗಿ ಕಣಕ್ಕಿಳಿದಿರುವ ಅನುಭವ ಹೊಂದಿದ್ದಾರೆ ವಿಹಾರಿ. 2018ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿಹಾರಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ ಆರಂಭಿಕನಾಗಿ ಉತ್ತಮ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿತವಾಗಿ ಪ್ರದರ್ಶನ ನೀಡುತ್ತಿರುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ ವಿಹಾರಿ. ಹೀಗಾಗಿ ಮತ್ತೊಮ್ಮೆ ಆರಂಭಿಕ ಸ್ಥಾನದ ಅವಕಾಶವನ್ನು ಹನುಮ ವಿಹಾರಿಗೆ ನೀಡಿದರೆ ಅಚ್ಚರಿಯಿಲ್ಲ.

ಭಾರತದ ಸ್ಕ್ವಾಡ್ ಹೀಗಿದೆ

ಭಾರತದ ಸ್ಕ್ವಾಡ್ ಹೀಗಿದೆ

ಟೆಸ್ಟ್ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ

Story first published: Monday, June 27, 2022, 10:30 [IST]
Other articles published on Jun 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X