ಧವನ್/ರಾಹುಲ್, ಚಾಹರ್/ಭುವನೇಶ್ವರ್, ಶ್ರೇಯಸ್/ಸೂರ್ಯರಲ್ಲಿ ಆಡೋದ್ಯಾರು?!

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3-1 ಅಭೂತಪೂರ್ವ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಮುಂದೆ ಪ್ರವಾಸಿಗರ ವಿರುದ್ಧ 5 ಪಂದ್ಯಗಳ ಟಿ20ಐ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಸಮಸ್ಯೆಯೊಂದು ಎದುರಾಗಿದೆ. ಇಂಗ್ಲೆಂಡ್-ಭಾರತ ಟಿ20ಐ ಸರಣಿ ಎರಡೂ ತಂಡಗಳಿಗೂ ಪ್ರಮುಖವಾದುದೆ. ಯಾಕೆಂದರೆ ಈ ವರ್ಷದ ಕೊನೆಯಲ್ಲಿ ಪುರುಷರ ವಿಭಾಗದ ಟಿ20ಐ ವಿಶ್ವಕಪ್‌ ನಡೆಯಲಿದೆ.

ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!

ಹೀಗಾಗಿ ಆಟಗಾರರ ಪ್ರದರ್ಶನ ಗಮನಿಸಿ ಬಲಿಷ್ಠ ತಂಡ ರೂಪುಗೊಳಿಸುವತ್ತ ಆಯಾ ತಂಡಗಳ ನಿರ್ವಹಣಾ ಸಮಿತಿ ನಿಗಾ ಇಟ್ಟಿವೆ. ಭಾರತ-ಇಂಗ್ಲೆಂಡ್ ಟಿ20ಐ ಸರಣಿಗಾಗಿ ಭಾರತ ತಂಡದಲ್ಲಿ 19 ಜನರನ್ನು ಹೆಸರಿಸಲಾಗಿದೆ. ಟಿ20ಐ ಸರಣಿ ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆ ಬಳಿಕ 2021ರ ಐಪಿಎಲ್ ಏಪ್ರಿಲ್ 9ರಿಂದ ಆರಂಭಗೊಳ್ಳಲಿದೆ.

ಇಂಗ್ಲೆಂಡ್ ವಿರುದ್ಧದ ಟಿ20ಐಗೆ 19 ಜನರನ್ನು ಹೆಸರಿಸಲಾಗಿದೆ. ಹಾಗಾದರೆ ಪ್ಲೇಯಿಂಗ್ XI ಆರಿಸುವಾಗ ಯಾರಿಗೆ ಆದ್ಯತೆ ನೀಡಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಆರಂಭಿರಲ್ಲಿ ಶಿಖರ್ ಧವನ್-ಕೆಎಲ್ ರಾಹುಲ್, ವೇಗಿಗಳಲ್ಲಿ ದೀಪಕ್ ಚಾಹರ್-ಭುವನೇಶ್ವರ್ ಕುಮಾರ್, ಮಧ್ಯಮ ಕ್ರಮಾಂಕದ ಬ್ಯಾಡ್ಸ್‌ಮನ್‌ಗಳಲ್ಲಿ ಶ್ರೇಯಸ್ ಐಯ್ಯರ್-ಸೂರ್ಯಕುಮಾರ್ ಯಾದವ್ ಇವರಲ್ಲಿ ಯಾರಿಗೆ ಅವಕಾಶ ನೀಡುತ್ತಾರೆ.

WTC ಫೈನಲ್ ಬಳಿಕ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲಿ ಉಳಿಯಲಿದೆ ಟೀಮ್ ಇಂಡಿಯಾ: ವರದಿ

ಆಯಾ ವಿಭಾಗಗಳಲ್ಲಿ ಎರಡೂ ಆಟಗಾರರೂ ಪ್ರತಿಭಾನ್ವಿತರೆ. ಹಾಗಾದರೆ ಇಂಗ್ಲೆಂಡ್ ವಿರುದ್ಧದ ಟಿ20ಐಗೆ ಇಬ್ಬರಲ್ಲಿ ಒಬ್ಬರಿಗೆ ಹೇಗೆ ಅವಕಾಶ ನೀಡುತ್ತಾರೆ? ಉದಾಹರಣೆಗೆ; ತಂಡದಲ್ಲಿ ಹೆಸರಿಸಲಾದ ವೇಗಿಗಳಲ್ಲಿ ಒಬ್ಬ ಗಾಯಕ್ಕೀಡಾದರೆ ಮತ್ತೊಬ್ಬನಿಗೆ ಅವಕಾಶ ದೊರೆಯಬಹುದು. ಇಬ್ಬರೂ ಫಿಟ್ ಇರುವಾಗ ಆಯ್ಕೆ ಹೇಗೆ? ಕಾದು ನೋಡಬೇಕು.

ಇಂಗ್ಲೆಂಡ್ ವಿರುದ್ಧದ ಟಿ20ಐಗೆ ಭಾರತ ತಂಡ

ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿಸಿ), ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆ), ಯುಜುವೇಂದ್ರಚಾಹಲ್, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 8, 2021, 22:07 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X