ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಶತಕಕ್ಕೂ 2001ರ ಸಚಿನ್ ಬಾರಿಸಿದ ಶತಕಕ್ಕೂ ಇದೆ ನಂಟು!

ನ್ಯಾಟಿಂಗ್‌ ಹ್ಯಾಮ್, ಆಗಸ್ಟ್ 22: ಟ್ರೆಂಟ್ ಬ್ರಿಡ್ಜ್‌ ಟೆಸ್ಟ್‌ನ ಗೆಲುವು ಭಾರತ-ಇಂಗ್ಲೆಂಡ್ ಸರಣಿಯನ್ನು ಇನ್ನಷ್ಟು ಕುತೂಹಲಕಾರಿ ಘಟ್ಟಕ್ಕೆ ಕೊಂಡೊಯ್ದಿದೆ. ಸರಣಿಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಈ ಗೆಲುವು ಮಹತ್ವದ್ದಾಗಿತ್ತು.

ಈ ಗೆಲುವಿನೊಂದಿಗೆ ಭಾರತದ ಆಟಗಾರರಲ್ಲಿ ಆತ್ಮವಿಶ್ವಾಸವೂ ವೃದ್ಧಿಯಾಗಿದೆ. ನಾಲ್ಕನೆಯ ಟೆಸ್ಟ್ ಪಂದ್ಯವು ಸೌಥಾಂಪ್ಟನ್‌ನಲ್ಲಿ ಆಗಸ್ಟ್ 30ರಿಂದ ಆರಂಭವಾಗಲಿದ್ದು, ಈ ಪಂದ್ಯವನ್ನೂ ಗೆದ್ದ ಸರಣಿಯಲ್ಲಿ ಸಮಬಲ ಸಾಧಿಸುವ ಉತ್ಸಾಹದಲ್ಲಿದೆ.

ಮೂರನೇ ಟೆಸ್ಟ್ ಅನೇಕ ಕುತೂಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯಿತು. ಸರಣಿಯಲ್ಲಿ ಭಾರತದ ಆರಂಭಿಕರು ಇದೇ ಮೊದಲ ಬಾರಿಗೆ ಅರ್ಧ ಶತಕದ ಜತೆಯಾಟ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಶತಕ ವಂಚಿತರಾಗಿದರೆ, ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಜೀವಮಾನ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು.

ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು?ಅಜರ್ ದಾಖಲೆ ಮುರಿದು, ಕೊಹ್ಲಿ ಮಾಡಿದ ಸಾಧನೆಗಳೇನು?

ಎರಡನೆಯ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಶತಕ ದಾಖಲಿಸಿದರು. ಇಂಗ್ಲೆಂಡ್‌ನ ಜೋಸ್ ಬಟ್ಲರ್ ಚೊಚ್ಚಲ ಶತಕ ಬಾರಿಸಿದರು. ಜಸ್‌ ಪ್ರೀತ್ ಬೂಮ್ರಾ ಐದು ವಿಕೆಟ್ ಪಡೆದರು. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಬೂಮ್ರಾ ಅವರ ನೋಬಾಲ್ ಎಸೆತಕ್ಕೆ ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್ ಔಟಾಗಿದ್ದರು. ಈ ಜೀವದಾನದಿಂದ ಅವರು ಶತಕ ಬಾರಿಸಿ, ಭಾರತದ ಸೋಲಿಗೆ ಕಾರಣರಾಗಿದ್ದರು.

ಈ ಟೆಸ್ಟ್‌ನಲ್ಲಿಯೂ ಬೂಮ್ರಾ ಎಸೆದ ನೋಬಾಲ್‌ಗೆ ರಶೀದ್ ಕ್ಯಾಚ್ ನೀಡಿದ್ದರು. ಹೀಗಾಗಿ ಪಂದ್ಯ ಐದನೆಯ ದಿನದವರೆಗೂ ಉಳಿಯುವಂತಾಯಿತು.

ಈ ಟೆಸ್ಟ್ ಪಂದ್ಯದ ಕೆಲವು ಆಸಕ್ತಿಕರ ಅಂಕಿ ಅಂಶಗಳು ಇಲ್ಲಿವೆ.

ರಾಹುಲ್ ಏಳು ಕ್ಯಾಚ್

ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಕ್ಯಾಚ್ ಹಿಡಿದಿದ್ದ ಕೆ.ಎಲ್. ರಾಹುಲ್, ಎರಡನೆಯ ಇನ್ನಿಂಗ್ಸ್‌ನಲ್ಲಿ ನಾಲ್ಕು ಕ್ಯಾಚ್‌ಗಳನ್ನು ಹಿಡಿತಕ್ಕೆ ಪಡೆದುಕೊಂಡರು. ಇಂಗ್ಲೆಂಡ್‌ನಲ್ಲಿ ಇದುವರೆಗೆ ನಡೆದ ಒಟ್ಟು 518 ಟೆಸ್ಟ್ ಪಂದ್ಯಗಳಲ್ಲಿ ಏಳು ಕ್ಯಾಚ್‌ಗಳನ್ನು ಹಿಡಿದ ಮೊದಲ ಫೀಲ್ಡರ್ ಎನಿಸಿಕೊಂಡರು.

1977ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಯಜುವೇಂದ್ರ ಸಿಂಗ್ ತಮ್ಮ ಪಾದಾರ್ಪಣೆಯ ಪಂದ್ಯದಲ್ಲಿಯೇ ಒಟ್ಟು ಏಳು ಕ್ಯಾಚ್‌ಗಳನ್ನು ಹಿಡಿದಿದ್ದರು. ಈ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು.

ವಿಕೆಟ್ ಕೀಪಿಂಗ್‌ನಲ್ಲಿಯೂ ದಾಖಲೆ ನಿರ್ಮಿಸಿದ ರಿಷಬ್ ಪಂತ್

ಐದಕ್ಕೂ ಹೆಚ್ಚು ಕ್ಯಾಚ್

ಐದಕ್ಕೂ ಹೆಚ್ಚು ಕ್ಯಾಚ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಪಂದ್ಯವೊಂದರಲ್ಲಿ ಒಂದೇ ತಂಡದ ಇಬ್ಬರು ಫೀಲ್ಡರ್‌ಗಳು ಐದಕ್ಕೂ ಹೆಚ್ಚು ಕ್ಯಾಚ್ ಹಿಡಿದಿದ್ದು ಇದೇ ಮೊದಲು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಐದು ಕ್ಯಾಚ್‌ಗಳನ್ನು ಹಿಡಿದಿದ್ದ ವಿಕೆಟ್ ಕೀಪರ್ ರಿಷಬ್ ಪಂತ್, ಎರಡನೆಯ ಇನ್ನಿಂಗ್ಸ್‌ನಲ್ಲಿ ಎರಡು ಕ್ಯಾಚ್‌ಗಳನ್ನು ಪಡೆದರು. ರಾಹುಲ್ ಮತ್ತು ಪಂತ್ ಇಬ್ಬರೂ ಒಂದೇ ಪಂದ್ಯದಲ್ಲಿ ತಲಾ ಏಳು ಕ್ಯಾಚ್‌ಗಳನ್ನು ಹಿಡಿದ ದಾಖಲೆ ಬರೆದರು.

ಕಾಕತಾಳೀಯ ದಾಖಲೆ!

ಕೆಲವು ಘಟನೆಗಳು ಕಾಕತಾಳೀಯವಾಗಿ ನಡೆಯುತ್ತವೆ ಎನ್ನುವುದಕ್ಕೆ ಈ ಪಂದ್ಯ ಉದಾಹರಣೆಯಾಯಿತು. ಎರಡನೆಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 23ನೇ ಶತಕ ದಾಖಲಿಸಿದು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ 58ನೇ ಶತಕ. 2001ರಲ್ಲಿ ಸಚಿನ್ ತಮ್ಮ 58ನೇ ಶತಕ ಗಳಿಸಿದ್ದರು.

ಈ ಇಬ್ಬರೂ ತಮ್ಮ 58ನೇ ಶತಕ ಗಳಿಸಿದ್ದು ಇಂಗ್ಲೆಂಡ್ ವಿರುದ್ಧ. ಅದಕ್ಕಿಂತಲೂ ವಿಶೇಷವೆಂದರೆ ಸಚಿನ್ ಮತ್ತು ವಿರಾಟ್ ಇಬ್ಬರೂ ಗಳಿಸಿದ್ದು 103 ರನ್‌ಗಳನ್ನು. ಎದುರಿಸಿದ್ದು ಸರಿಯಾಗಿ 197 ಎಸೆತಗಳನ್ನು. ಕೊಹ್ಲಿ ಟ್ರೆಂಟ್ ಬ್ರಿಡ್ಜ್‌ನಲ್ಲಿ ಈ ಸಾಧನೆ ಮಾಡಿದ್ದರೆ, ಸಚಿನ್ ಅಹಮದಾಬಾದ್‌ನಲ್ಲಿ ಶತಕ ದಾಖಲಿಸಿದ್ದರು.

ಇಬ್ಬರೂ ನಾಲ್ಕನೆಯ ಕ್ರಮಾಂಕದಲ್ಲಿ ಆಡಿದ್ದರು ಎನ್ನುವುದು ಗಮನಾರ್ಹ. ಅಲ್ಲದೆ, ಇಬ್ಬರೂ ಬೌಂಡರಿ ಬಾರಿಸಿಯೇ ಮೂರಂಕಿ ಗಡಿ ತಲುಪಿದ್ದರು. ಸಚಿನ್ ಅವರ ಜತೆ ಶತಕದ ಜತೆಯಾಟ ನೀಡಿದ್ದ ವಿವಿಎಸ್ ಲಕ್ಷ್ಮಣ ಅರ್ಧಶತಕ ಗಳಿಸಿದ್ದರೆ, ಕೊಹ್ಲಿ ಜತೆ ಶತಕದ ಜತೆಯಾಟ ನೀಡಿದ ಚೇತೇಶ್ವರ ಪೂಜಾರ ಕೂಡ ಅರ್ಧಶತಕ ಗಳಿಸಿದ್ದರು.

ಕೊಹ್ಲಿಗೆ 22ನೇ ಗೆಲುವು

38 ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿಗೆ ಇದು 22ನೇ ಗೆಲುವು. ಭಾರತದ ಪರ ಮಹೇಂದ್ರ ಸಿಂಗ್ ಧೋನಿ 27 (60 ಟೆಸ್ಟ್) ಅತಿ ಹೆಚ್ಚು ಪಂದ್ಯ ಗೆದ್ದ ನಾಯಕ ಎನಿಸಿಕೊಂಡಿದ್ದಾರೆ. ಸೌರವ್ ಗಂಗೂಲಿ 49 ಪಂದ್ಯಗಳಲ್ಲಿ 21 ಮತ್ತು ಮಹಮ್ಮದ್ ಅಜರುದ್ದೀನ್ 47 ಪಂದ್ಯಗಳಲ್ಲಿ 14 ಗೆಲುವುಗಳನ್ನು ಕಂಡ ನಾಯಕರಾಗಿದ್ದಾರೆ.

ಸೋತು ಗೆದ್ದವರು

ಸೋತು ಗೆದ್ದವರು

ಇನ್ನಿಂಗ್ಸ್ ಮತ್ತು 150ಕ್ಕೂ ಹೆಚ್ಚು ರನ್‌ಗಳಿಂದ ಸೋಲು ಅನುಭವಿಸಿದ ಮುಂದಿನ ಟೆಸ್ಟ್‌ನಲ್ಲಿ ಜಯಗಳಿಸಿದ ಕೆಲವು ಪಂದ್ಯಗಳ ಮಾಹಿತಿ ಇಲ್ಲಿದೆ.
ಇಂಗ್ಲೆಂಡ್ Vs ಆಸ್ಟ್ರೇಲಿಯಾ, ಸಿಡ್ನಿ, 1954 (38 ರನ್)
ವೆಸ್ಟ್ ಇಂಡೀಸ್ Vs ಆಸ್ಟ್ರೇಲಿಯಾ, ಪರ್ತ್, 1997 (10 ವಿಕೆಟ್)
ಆಸ್ಟ್ರೇಲಿಯಾ Vs ಭಾರತ, ಬೆಂಗಳೂರು, 1998 (8 ವಿಕೆಟ್)
ಭಾರತ Vs ಶ್ರೀಲಂಕಾ, ಗಾಲ್ಲೆ, 2008 (107 ರನ್)
ವೆಸ್ಟ್ ಇಂಡೀಸ್ Vs ಇಂಗ್ಲೆಂಡ್, ಲೀಡ್ಸ್, 2017 (5 ವಿಕೆಟ್)
ಭಾರತ ಇಂಗ್ಲೆಂಡ್ Vs ಟ್ರೆಂಟ್ ಬ್ರಿಡ್ಜ್, 2018 (203 ರನ್)

ಮೊದಲು ಸೋತು ಗೆದ್ದ ಲೆಕ್ಕ

ಮೊದಲು ಸೋತು ಗೆದ್ದ ಲೆಕ್ಕ

ಭಾರತ ಸರಣಿಯ ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿ ಬಳಿಕ ಗೆಲುವು ಕಂಡ ಕೆಲವು ನಿದರ್ಶನಗಳು ಇಲ್ಲಿವೆ.
ವೆಸ್ಟ್ ಇಂಡೀಸ್ ವಿರುದ್ಧ, ಕೋಲ್ಕತಾ, 1974-75 (85 ರನ್)
ಆಸ್ಟ್ರೇಲಿಯಾ ವಿರುದ್ಧ, ಮೆಲ್ಬರ್ನ್, 1977-78 (222 ರನ್)
ಆಸ್ಟ್ರೇಲಿಯಾ ವಿರುದ್ಧ, ಪರ್ತ್, 2008 (72 ರನ್)
ದಕ್ಷಿಣ ಆಫ್ರಿಕಾ ವಿರುದ್ಧ, ಜೊಹಾನ್ಸ್ ಬರ್ಗ್, 2018 (63 ರನ್)
ಇಂಗ್ಲೆಂಡ್ ವಿರುದ್ಧ, ಟ್ರೆಂಟ್ ಬ್ರಿಡ್ಜ್, 2018 (203 ರನ್)

ಇಂಗ್ಲೆಂಡ್ ವಿರುದ್ಧ ದೊಡ್ಡ ಜಯ

ಇಂಗ್ಲೆಂಡ್ ವಿರುದ್ಧ ದೊಡ್ಡ ಜಯ

ಇಂಗ್ಲೆಂಡ್ ವಿರುದ್ಧ ಭಾರತವು ರನ್‌ ಆಧಾರದಲ್ಲಿ ಗೆದ್ದ ಅತಿ ದೊಡ್ಡ ಗೆಲುವುಗಳ ಮಾಹಿತಿ ಇಲ್ಲಿದೆ.
279, ಲೀಡ್ಸ್, 1986
246, ವಿಶಾಖಪಟ್ಟಣ, 2016
203, ಟ್ರೆಂಟ್ ಬ್ರಿಡ್ಜ್, 2018
187, ಕೋಲ್ಕತಾ, 1961/62

ಟೆಸ್ಟ್‌ನಲ್ಲಿ ವೇಗಿಗಳ ಸಾಧನೆ

ಟೆಸ್ಟ್‌ನಲ್ಲಿ ವೇಗಿಗಳ ಸಾಧನೆ

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ವೇಗಿಗಳು ಅಧಿಕ ವಿಕೆಟ್ ಪಡೆದ ಎರಡನೆಯ ಉದಾಹರಣೆ ಇದು.
20 Vs ದಕ್ಷಿಣ ಆಫ್ರಿಕಾ, ಜೊಹಾನ್ಸ್‌ಬರ್ಗ್, 2018
19 Vs ಇಂಗ್ಲೆಂಡ್, ಟ್ರೆಂಟ್ ಬ್ರಿಡ್ಜ್, 2018
18 Vs ದಕ್ಷಿಣ ಆಫ್ರಿಕಾ, ಡರ್ಬನ್, 1996
18 Vs ವೆಸ್ಟ್ ಇಂಡೀಸ್, ಬ್ರಿಡ್ಜ್‌ಟೌನ್, 1997
18 Vs ಶ್ರೀಲಂಕಾ, ಕ್ಯಾಂಡಿ, 2001

Story first published: Wednesday, August 22, 2018, 17:16 [IST]
Other articles published on Aug 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X