ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು 9ನೇ ಬಾರಿಗೆ ಔಟ್ ಮಾಡಿದ ಮೊಯೀನ್ ಅಲಿ

India vs England: Virat Kohli dismissed by Moeen Ali for 9th time in international cricket

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸ್ಪಿನ್ನರ್ ಮೊಯೀನ್ ಅಲಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದ್ದಾರೆ. ಈ ಮೂಲಕ ಇಂಗ್ಲೆಂಡ್ ಆಲ್‌ರೌಂಡರ್‌ಗೆ ಕೊಹ್ಲಿ 9ನೇ ಬಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊಹ್ಲಿ ವಿಕೆಟ್ ಪಡೆಯುವಲ್ಲಿ 2ನೇ ಯಶಸ್ವಿ ಬೌಲರ್ ಎನಿಸಿದ್ದಾರೆ ಮೊಯೀನ್ ಅಲಿ.

7 ರನ್‌ಗಳಿಸಿದ್ದ ವಿರಾಟ್ ಕೊಹ್ಲಿ ಮೊಯೀನ್ ಅಲಿ ಎಸೆತವನ್ನು ಬಾರಿಸಲು ವಿಫಲ ಯತ್ನವನ್ನು ನಡೆಸಿದರು. ಆ ಎಸೆತ ನೇರವಾಗಿ ವಿಕೆಟ್‌ಗೆ ಬಡಿಯುವ ಮೂಲಕ ಭಾರತದ ನಾಯಕನ ಆಟವನ್ನು ಮುಗಿಸಿತ್ತು. ಈ ಮೂಲಕ ಭಾರತ 121 ರನ್‌ಗಳಿಗೆ 3ನೇ ವಿಕೆಟ್ ಕಳೆದುಕೊಂಡಿತು.

ಭಾರತ vs ಇಂಗ್ಲೆಂಡ್: 3ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XIಭಾರತ vs ಇಂಗ್ಲೆಂಡ್: 3ನೇ ಏಕದಿನ, Live ಸ್ಕೋರ್, ಪ್ಲೇಯಿಂಗ್ XI

ಗಮನಾರ್ಹ ಸಂಗತಿಯೆಂದರೆ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೊಯೀನ್ ಅಲಿ ರನ್ ಖಾತೆ ತೆರೆಯುವ ಮುನ್ನವೇ ಶೂನ್ಯಕ್ಕೆ ಬೌಲ್ಡ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ವಿರಾಟ್ ಕೊಹ್ಲಿಯನ್ನು ಸುದೀರ್ಘ ಮಾದರಿಯಲ್ಲಿ ಶೂನ್ಯಕ್ಕೆ ಔಟ್ ಮಾಡಿದ ಪ್ರಥಮ ಸ್ಪಿನ್ ಬೌಲರ್ ಎನಿಸಿದ್ದರು.

ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಅತಿ ಹೆಚ್ಚಿನ ಬಾರಿಗೆ ಔಟ್ ಮಾಡಿದ ದಾಖಲೆಯನ್ನು ಇಂಗ್ಲೆಂಡ್ ವೇಗಿ ಟಿಮ್ ಸೌಥಿ ಹೊಂದಿದ್ದಾರೆ. ಸೌಥಿ ಭಾರತದ ನಾಯಕನನ್ನು 10 ಬಾರಿ ಬಲಿ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಮೊಯೀನ್ ಅಲಿಯ ಸ್ಪಿನ್ ಜೊತೆಗಾರ ಆದಿಲ್ ರಶೀದ್ ಇದ್ದು ಅವರು ಕೂಡ 9 ಬಾರಿ ಕೊಹ್ಲಿ ವಿಕೆಟ್ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗೇಮ್ ಸ್ವಾನ್, ಟೆಸ್ಟ್ ಸ್ಪೆಶಲಿಸ್ಟ್ ಜೇಮ್ಸ್ ಆಂಡರ್ಸನ್, ಹಾಗೂ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ 8 ಬಾರಿ ಕೊಹ್ಲಿ ವಿಕೆಟ್ ಪಡೆದಿದ್ದಾರೆ.

ಭಾರತ vs ಇಂಗ್ಲೆಂಡ್: ಭಾರತ ತಂಡದ ನಾಯಕನಾಗಿ ವಿಶೇಷ ಪಟ್ಟಿಗೆ ಸೇರಿಕೊಂಡ ವಿರಾಟ್ ಕೊಹ್ಲಿಭಾರತ vs ಇಂಗ್ಲೆಂಡ್: ಭಾರತ ತಂಡದ ನಾಯಕನಾಗಿ ವಿಶೇಷ ಪಟ್ಟಿಗೆ ಸೇರಿಕೊಂಡ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 330 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ಗೆ ನೀಡಿದೆ. ಅಂತಿಮ ಹಂತದಲ್ಲಿ ಕುಸಿತವನ್ನು ಕಂಡ ಭಾರತ ಮತ್ತಷ್ಟು ದೊಡ್ಡ ಮೊತ್ತದ ಗುರಿಯನ್ನು ಎದುರಾಳಿಗೆ ನೀಡುವ ಅವಕಾಶವನ್ನು ಕಳೆದುಕೊಂಡಿತು.

Story first published: Monday, March 29, 2021, 8:10 [IST]
Other articles published on Mar 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X