ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಇಂಗ್ಲೆಂಡ್: ವಿಲಿಯಮ್ಸನ್ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

India vs England: Virat Kohli equals Kane Williamsons record

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ-ಇಂಗ್ಲೆಂಡ್ ತೃತೀಯ ಟಿ20ಐ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಸುಲಭ ಸೋಲನುಭವಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ 2-1ರ ಮುನ್ನಡೆ ಸಾಧಿಸಿದೆ. ಪ್ರವಾಸಿ ಆಂಗ್ಲರೆದುರು ಭಾರತ ಸೋತಿದ್ದು ನಿಜ, ಆದರೆ ಭಾರತದ ನಾಯಕ ವಿರಾಟ್ ಕೊಹ್ಲಿ ಪಂದ್ಯದಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ಭಾರತೀಯನಂತೆ ವಿಶೇಷ ದಾಖಲೆ ಪಟ್ಟಿ ಸೇರಿದ ಇಯಾನ್ ಮಾರ್ಗನ್!ಭಾರತೀಯನಂತೆ ವಿಶೇಷ ದಾಖಲೆ ಪಟ್ಟಿ ಸೇರಿದ ಇಯಾನ್ ಮಾರ್ಗನ್!

ತೃತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಹೋರಾಟ ನಡೆಸಿದ್ದು ವಿರಾಟ್ ಕೊಹ್ಲಿ ಒಬ್ಬರೆ. 46 ಎಸೆತಗಳಲ್ಲಿ ವಿರಾಟ್ ಕೊಹ್ಲಿ ಅಜೇಯ 77 ರನ್ ಬಾರಿಸಿತ್ತು. ಹೀಗಾಗಿ ಮೊದಲು ಇನ್ನಿಂಗ್ಸ್‌ ಆಡಿದ್ದ ಭಾರತ ಎದುರಾಳಿಗೆ 156 ರನ್ ಗುರಿ ನೀಡಲು ಸಾಧ್ಯವಾಗಿತ್ತು.

ಟಿ20ಐನಲ್ಲಿ 3000 ರನ್

ಟಿ20ಐನಲ್ಲಿ 3000 ರನ್

ಟಿ20ಐ ಕ್ರಿಕೆಟ್‌ನಲ್ಲಿ 78 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 3078 ರನ್ ಗಳಿಸಿದ್ದಾರೆ. ಇದರಲ್ಲಿ 27 ಅರ್ಧ ಶತಕಗಳು ಸೇರಿವೆ. ಇನ್ನು 91 ಟೆಸ್ಟ್‌ ಪಂದ್ಯಗಳಲ್ಲಿ 7490 ರನ್, 251 ಏಕದಿನ ಪಂದ್ಯಗಳಲ್ಲಿ 12040 ರನ್, 302 ಟಿ20 ಪಂದ್ಯಗಳಲ್ಲಿ 9650 ರನ್ ದಾಖಲೆ ಹೊಂದಿದ್ದಾರೆ.

ವಿಲಿಯಮ್ಸನ್ ದಾಖಲೆ ಸರಿಸಮ

ವಿಲಿಯಮ್ಸನ್ ದಾಖಲೆ ಸರಿಸಮ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ನಾಯಕರಾಗಿದ್ದುಕೊಂಡು ಅತೀ ಹೆಚ್ಚು ಅರ್ಧ ಶತಕ ಬಾರಿಸಿದ ದಾಖಲೆ ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಅವರ ಹೆಸರಿನಲ್ಲಿತ್ತು. ವಿಲಿಯಮ್ಸನ್ ನಾಯಕರಾಗಿ ಟಿ20ಯಲ್ಲಿ 11 ಅರ್ಧ ಶತಕಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ಕೂಡ ಈ ದಾಖಲೆಯನ್ನು ಸರಿದೂಗಿಸಿದ್ದಾರೆ. ಟಿ20ಐನಲ್ಲಿ ನಾಯಕರಾಗಿ ಕೊಹ್ಲಿ ಒಟ್ಟು 11 ಅರ್ಧಶತಕಗಳನ್ನು ಬಾರಿಸಿದಂತಾಗಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 15, ಇಶಾನ್ ಕಿಶನ್ 4, ನಾಯಕ ವಿರಾಟ್ ಕೊಹ್ಲಿ 77 (46 ಎಸೆತ), ರಿಷಭ್ ಪಂತ್ 25, ಶ್ರೇಯಸ್ ಐಯ್ಯರ್ 9, ಹಾರ್ದಿಕ್ ಪಾಂಡ್ಯ 17 ರನ್ ಸೇರಿಸಿದರು. ಭಾರತ 20 ಓವರ್‌ಗೆ 6 ವಿಕೆಟ್ ಕಳೆದು 156 ರನ್ ಗಳಿಸಿತು.
* ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಜೇಸನ್ ರಾಯ್ 9, ಡೇವಿಡ್ ಮಲಾನ್ 18, ಜೋಸ್ ಬಟ್ಲರ್ ಅಜೇಯ 83, ಜಾನಿ ಬೇರ್ಸ್ಟೋವ್ ಅಜೇಯ 40 ರನ್‌ ಸೇರ್ಪಡೆಯೊಂದಿಗೆ 18.2 ಓವರ್‌ಗೆ 2 ವಿಕೆಟ್‌ ನಷ್ಟದಲ್ಲಿ 158 ರನ್ ಬಾರಿಸಿ ಗೆಲುವನ್ನಾಚರಿಸಿತು.

Story first published: Wednesday, March 17, 2021, 17:00 [IST]
Other articles published on Mar 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X