ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

India vs England: Virat Kohli gets out for 0, equals MS Dhonis record

ಅಹ್ಮದಾಬಾದ್: ವಿರಾಟ್ ಕೊಹ್ಲಿ ಈ ಕ್ರಿಕೆಟ್ ಯುಗದ ದಾಖಲೆಗಳ ಸರದಾರನಾಗಿ ಕಾಣಿಸುತ್ತಿದ್ದಾರೆ.‌ ಟೀಮ್ ಇಂಡಿಯಾ ನಾಯಕ ಕೊಹ್ಲಿ ಆಡುವ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಾಣ ಆಗಿಯೇ ಆಗುತ್ತದೆ. ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಪಂದ್ಯದಲ್ಲೂ ಕೊಹ್ಲಿ ದಾಖಲೆ ಬರೆದಿದ್ದಾರೆ. ಆದರೆ ಇದು ಒಳ್ಳೆಯ ದಾಖಲೆಯಲ್ಲ, ಕೆಟ್ಟದಾಖಲೆ.

ಒಂದೇ ಓವರ್‌ನಲ್ಲಿ 6 ಸಿಕ್ಸರ್ ಚಚ್ಚಿದ ಕೀರನ್ ಪೊಲಾರ್ಡ್: ವಿಡಿಯೋಒಂದೇ ಓವರ್‌ನಲ್ಲಿ 6 ಸಿಕ್ಸರ್ ಚಚ್ಚಿದ ಕೀರನ್ ಪೊಲಾರ್ಡ್: ವಿಡಿಯೋ

ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬೆನ್ ಸ್ಟೋಕ್ಸ್ ಎಸೆತಕ್ಕೆ ಸೊನ್ನೆಗೆ ನಿರ್ಗಮಿಸಿದರು. ಇದರೊಂದಿಗೆ ಕೊಹ್ಲಿ ಹೆಸರಲ್ಲಿ ದಾಖಲೆ ನಿರ್ಮಾಣವಾಗಿದೆ.

8 ಎಸೆತಗಳಲ್ಲಿ 0 ರನ್

8 ಎಸೆತಗಳಲ್ಲಿ 0 ರನ್

ಅಹ್ಮದಾಬಾದ್ ಟೆಸ್ಟ್ ನಲ್ಲಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೊಹ್ಲಿ 8 ಎಸೆತಗಳನ್ನು ಎದುರಿಸಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಓವರ್‌ನಲ್ಲಿ ಬೆನ್ ಫೋಕ್ಸ್‌ಗೆ ಕ್ಯಾಚಿತ್ತು 0 ರನ್ ಗೆ ನಿರ್ಗಮಿಸಿದರು. ಅದರೊಂದಿಗೆ ಕೊಹ್ಲಿ ಹೆಸರಿಗೆ ಕೆಟ್ಟ ದಾಖಲೆ ನಿರ್ಮಾಣವಾಗಿದೆ.

ಧೋನಿ ಕೆಟ್ಟ ದಾಖಲೆ ಸರಿಸಮ

ಧೋನಿ ಕೆಟ್ಟ ದಾಖಲೆ ಸರಿಸಮ

ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಡಕ್ ಔಟ್ ಅಟಗುತ್ತಿರುವುದು ಇದು ಎರಡನೇ ಸಾರಿ. ಅಷ್ಟೇ ಅಲ್ಲ; ಭಾರತದ ಟೆಸ್ಟ್ ನಾಯಕನಾಗಿ ಕೊಹ್ಲಿ ಇದು 8ನೇ ಬಾರಿ ಡಕ್ ಔಟ್ ಆಗುತ್ತಿದ್ದಾರೆ. ಹೀಗಾಗಿ ಭಾರತದ ಟೆಸ್ಟ್ ನಾಯಕನಾಗಿ 8 ಬಾರಿ 0ಗೆ ಔಟ್ ಆದ ಧೋನಿ ದಾಖಲೆಯನ್ನು ಕೊಹ್ಲಿ ಸರಿದೂಗಿಸಿಕೊಂಡಿದ್ದಾರೆ.

ಕುತೂಹಲಕಾರಿ ಅಂಕಿ-ಅಂಶ

ಕುತೂಹಲಕಾರಿ ಅಂಕಿ-ಅಂಶ

* ಕೊಹ್ಲಿ ತನ್ನ ಟೆಸ್ಟ್ ವೃತ್ತಿ ಬದುಕಿನಲ್ಲಿ ಒಟ್ಟಾರೆ 12 ಸಾರಿ ಡಕ್ ಔಟ್ ಆಗಿದ್ದಾರೆ. ಇದರಲ್ಲಿ 8 ಸಾರಿ ಟೆಸ್ಟ್ ನಾಯಕನಾಗಿ ಔಟ್ ಆಗಿದ್ದು.
* ಇಂಗ್ಲೆಂಡ್ ವಿರುದ್ಧವೇ ಕೊಹ್ಲಿ ಸೊನ್ನೆಗೆ ಔಟ್ ಆಗಿದ್ದು ಇದು 5ನೇ ಸಾರಿ.
* ಕಳೆದ 7 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಇದು 3ನೇ ಸಾರಿ ಡಕ್ ಔಟ್ ಆಗಿದ್ದಾರೆ.

Story first published: Friday, March 5, 2021, 15:31 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X