ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಶ್ರೇಯಾಂಕ: ಒಂದೇ ಪಂದ್ಯದಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕೊಹ್ಲಿ

India Vs England: Virat Kohli loses top spot in ICC Test rankings after flop show in Lords Test

ದುಬೈ, ಆಗಸ್ಟ್ 14: ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಒಂದೇ ಪಂದ್ಯದಲ್ಲಿ ಆ ಸ್ಥಾನ ಕಳೆದುಕೊಂಡಿದ್ದಾರೆ.

ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ ವಿರಾಟ್ ಕೊಹ್ಲಿ, ಎರಡನೆಯ ಸ್ಥಾನಕ್ಕೆ ಕುಸಿದಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧ ಅನುಭವಿಸುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಪುನಃ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

ಟೆಸ್ಟ್ ಸರಣಿಯಿಂದ ಇಂಗ್ಲೆಂಡಿನ ಪ್ರಮುಖ ಆಟಗಾರ ಔಟ್!ಟೆಸ್ಟ್ ಸರಣಿಯಿಂದ ಇಂಗ್ಲೆಂಡಿನ ಪ್ರಮುಖ ಆಟಗಾರ ಔಟ್!

ಮೊದಲ ಟೆಸ್ಟ್‌ನ ಇನ್ನಿಂಗ್ಸ್‌ಗಳಲ್ಲಿ ಶತಕ ಹಾಗೂ ಅರ್ಧ ಶತಕ ದಾಖಲಿಸಿದ್ದ ಕೊಹ್ಲಿ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೆ ಏರಿದ್ದರು. ಎರಡನೆಯ ಟೆಸ್ಟ್‌ನಲ್ಲಿ ಭಾರತ ತಂಡ ಕ್ರಮವಾಗಿ 107 & 130 ಸ್ಕೋರ್ ಮಾಡಿದ್ದರೆ, ಕೊಹ್ಲಿ 23 ಹಾಗೂ 17 ರನ್ ಗಳಿಸಿದ್ದರು.

ಆದರೆ, ರವಿಚಂದ್ರನ್ ಅಶ್ವಿನ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಹತ್ತು ಸ್ಥಾನ ಮೇಲೇರಿದ್ದಾರೆ. ಲಾರ್ಡ್ಸ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಪರ ಅತ್ಯಧಿಕ ರನ್ (29 & 33*) ಗಳಿಸಿದ್ದ ಅಶ್ವಿನ್, 67ನೇ ಸ್ಥಾನದಿಂದ 57ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ನಾಟಿಂಗ್ಹ್ಯಾಮ್ ಟೆಸ್ಟ್ ಗೆ ಸಂಪೂರ್ಣ ಚೇತರಿಸಿಕೊಳ್ಳುವೆ: ಕೊಹ್ಲಿ ವಿಶ್ವಾಸನಾಟಿಂಗ್ಹ್ಯಾಮ್ ಟೆಸ್ಟ್ ಗೆ ಸಂಪೂರ್ಣ ಚೇತರಿಸಿಕೊಳ್ಳುವೆ: ಕೊಹ್ಲಿ ವಿಶ್ವಾಸ

ಅಲ್ಲದೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೆರ್ನನ್ ಫಿಲಾಂಡರ್ ಅವರನ್ನು ಹಿಂದಿಕ್ಕಿ ಅಶ್ವಿನ್ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ 25 ಸ್ಥಾನಗಳಷ್ಟು ಮೇಲೇರಿದ್ದು, 74ನೇ ಶ್ರೇಯಾಂಕ ಪಡೆದಿದ್ದಾರೆ.

ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್, 38 ವರ್ಷಗಳಲ್ಲಿಯೇ ಇಂಗ್ಲೆಂಡ್ ಪರ 900 ಅಂಕಗಳನ್ನು ಕ್ರಮಿಸಿದ ಮೊದಲ ಹಾಗೂ ಒಟ್ಟಾರೆಯಾಗಿ ಇಂಗ್ಲೆಂಡ್‌ನ ಏಳನೇ ಬೌಲರ್ ಎನಿಸಿಕೊಂಡಿದ್ದಾರೆ. ಆಂಡರ್ಸನ್ ಈಗ ಟೆಸ್ಟ್ ಶ್ರೇಯಾಂಕದ ಅಗ್ರ ಕ್ರಮಾಂಕ ಪಡೆದುಕೊಂಡಿದ್ದಾರೆ.

ಕ್ರಿಕೆಟ್ ಟೆಸ್ಟ್ ಟ್ವಿಟ್ಟರ್ ತಮಾಷೆ: ಧೈರ್ಯವಿದ್ದರೆ ಭಾರತಕ್ಕೆ ಬಂದು ಆಡಿ!ಕ್ರಿಕೆಟ್ ಟೆಸ್ಟ್ ಟ್ವಿಟ್ಟರ್ ತಮಾಷೆ: ಧೈರ್ಯವಿದ್ದರೆ ಭಾರತಕ್ಕೆ ಬಂದು ಆಡಿ!

ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡ 21 ಕಡಿಮೆ ಅಂಕಗಳನ್ನು ಪಡೆದು ಎರಡನೆಯ ಸ್ಥಾನದಲ್ಲಿದ್ದಾರೆ. ಲಾರ್ಡ್ಸ್ ಪಂದ್ಯದಲ್ಲಿ ಶತಕ ಬಾರಿಸಿದ್ದ ಕ್ರಿಸ್ ವೋಕ್ಸ್, ಬ್ಯಾಟಿಂಗ್ ವಿಭಾಗದಲ್ಲಿ 34ನೇ ಸ್ಥಾನ ಪಡೆದುಕೊಂಡಿದ್ದರೆ, ಬೌಲಿಂಗ್ ವಿಭಾಗದಲ್ಲಿ 32ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಲ್‌ರೌಂಡರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ 93 ರನ್ ಗಳಿಸಿದ್ದ ಜಾನಿ ಬೈರ್‌ಸ್ಟೋ ಟಾಪ್ ಟೆನ್ ಒಳಗೆ ಮತ್ತೆ ಪ್ರವೇಶ ಪಡೆದಿದ್ದು, 9ನೇ ಸ್ಥಾನದಲ್ಲಿದ್ದಾರೆ.

Story first published: Tuesday, August 14, 2018, 9:25 [IST]
Other articles published on Aug 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X