ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ಹಿಂದಿಕ್ಕಿ ವಿಶ್ವ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ!

India vs England: Virat Kohli on the verge of breaking Sachin Tendulkars record

ಲೀಡ್ಸ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡ ಆಗಸ್ಟ್ 25ರಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯ ಆಡಲಿದ್ದು, ಇದರಲ್ಲಿ ವಿಶ್ವ ದಾಖಲೆ ಬರೆಯಲು ಕೊಹ್ಲಿಗೆ ಅವಕಾಶವಿದೆ. ಲೀಡ್ಸ್‌ನ ಹೆಡಿಂಗ್ಲಿಯಲ್ಲೇ ನಡೆಯುವ ಪಂದ್ಯದಲ್ಲಿ ಕೊಹ್ಲಿ ಕೇವಲ 63 ರನ್ ಬಾರಿಸಿದರೂ ಸಾಕು ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆ ಬದಿಗೆ ಸರಿಯಲಿದೆ.

ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!ಐಪಿಎಲ್‌ಗೂ ಮುನ್ನ ಅತೀ ದುಬಾರಿ ವಾಚ್ ಕೊಂಡ ಹಾರ್ದಿಕ್, ಬೆಲೆಯೆಷ್ಟು ಗೊತ್ತಾ?!

ಲೀಡ್ಸ್‌ನಲ್ಲಿ ನಡೆಯುವ ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ 63 ರನ್ ಬಾರಿಸಿದರೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 500ಕ್ಕೂ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 23,000 ರನ್ ಬಾರಿಸಿದ ದಾಖಲೆಗೆ ಕಾರಣರಾಗಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದಲ್ಲಿ 23,000+ ರನ್ ಬಾರಿಸಿದ ದಾಖಲೆ ಈಗ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ.

ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿಯೋದು ಬಹುತೇಕ ಖಚಿತ

ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿಯೋದು ಬಹುತೇಕ ಖಚಿತ

ಲೀಡ್ಸ್‌ನಲ್ಲಿ ನಡೆಯಲಿರುವ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಏನಾದರೂ 63 ರನ್ ಬಾರಿಸಿದರೆ 500 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಿಗೂ ಮುನ್ನ 23,000 ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ದಾಖಲೆ ಕೊಹ್ಲಿ ಪಾತ್ರರಾಗಲಿದ್ದಾರೆ. ಈಗ 487 ಅಂತಾರಾಷ್ಟ್ರೀಯ ಇನ್ನಿಂಗ್ಸ್ ಆಡಿರುವ ಕೊಹ್ಲಿ 22,937 ರನ್ ದಾಖಲೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 23,000 ರನ್ ಬಾರಿಸಲು 522 ಇನ್ನಿಂಗ್ಸ್‌ ಬಳಸಿಕೊಂಡಿದ್ದರು. ಹೀಗಾಗಿ ವಿರಾಟ್ ಮುಂದಿನ 12 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 63 ರನ್ ಬಾರಿಸಿದರೂ ಸಾಕು, 500 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳೊಳಗೆ 23,000 ರನ್ ಬಾರಿಸಿದ ದಾಖಲೆಗಾಗಿ ತೆಂಡೂಲ್ಕರ್ ಅವರನ್ನು ಕೊಹ್ಲಿ ಮೀರಿಸಲಿದ್ದಾರೆ. ಮುಂದಿನ 12 ಇನ್ನಿಂಗ್ಸ್‌ಗಳಲ್ಲಿ 63 ರನ್ ಬಾರಿಸೋದು ಕಷ್ಟದ ಮಾತೇನೂ ಅಲ್ಲ. ಆದ್ದರಿಂದ ಸಚಿನ್ ಹಿಂದಿಕ್ಕಿ ಕೊಹ್ಲಿ ದಾಖಲೆ ನಿರ್ಮಿಸೋದು ಬಹುತೇಕ ಖಚಿತ. ಇದೇ ಭಾರತ vs ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲೇ ವಿರಾಟ್‌ಗೆ ಈ ವಿಶೇಷ ದಾಖಲೆ ನಿರ್ಮಿಸಲು ಅವಕಾಶವಿದೆ. ಕೊಹ್ಲಿ ಈಗಾಗಲೇ ಸಚಿನ್ ಹೆಸರಿನಲ್ಲಿರುವ ಬಹಳಷ್ಟು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ದಾಖಲೆಯಿರುವುದು ತೆಂಡೂಲ್ಕರ್ ಹೆಸರಿನಲ್ಲಿ ಮಾತ್ರ. ಆದರೆ ಆ ದಾಖಲೆಯನ್ನೂ ಮೀರಿಸಬಲ್ಲ ಒಬ್ಬ ಬ್ಯಾಟ್ಸ್‌ಮನ್‌ ಇದ್ದರೆ ಅದು ವಿರಾಟ್ ಕೊಹ್ಲಿ ಎಂದು ಕ್ರಿಕೆಟ್ ಜಗತ್ತು ಹೇಳುತ್ತಿದೆ. ಕೊಹ್ಲಿ ಇಲ್ಲೀವರೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 70 ಶತಕ ಮತ್ತು 7 ದ್ವಿಶತಕಗಳನ್ನು ಬಾರಿಸಿದ್ದಾರೆ.

ಭಾರತದ ಹೆಸರಿನಲ್ಲಿ ದಾಖಲೆ ನಿರ್ಮಾಣ ಸಾಧ್ಯತೆ

ಭಾರತದ ಹೆಸರಿನಲ್ಲಿ ದಾಖಲೆ ನಿರ್ಮಾಣ ಸಾಧ್ಯತೆ

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಗಿದಿವೆ. ಆರಂಭಿಕ ಪಂದ್ಯದಲ್ಲಿ ಭಾರತ ಗೆಲ್ಲುವ ಸಾಧ್ಯತೆ ಇತ್ತಾದರೂ ಮಳೆಯಿಂದಾಗಿ ಪಂದ್ಯ ಡ್ರಾ ಅನ್ನಿಸಿತು. ಆದರೆ ದ್ವಿತೀಯ ಪಂದ್ಯದಲ್ಲಿ ವೀರೋಚಿತ ಆಟ ನೀಡಿದ ವಿರಾಟ್ ಕೊಹ್ಲಿ ಪಡೆ ಪಂದ್ಯವನ್ನು ರೋಚಕ ರೀತಿಯಲ್ಲಿ ಗೆದ್ದಿತ್ತು. ಬ್ಯಾಟ್ಸ್‌ಮನ್‌ಗಳು, ಬೌಲರ್‌ಗಳು ಒಗ್ಗಟ್ಟಾಗಿ ಪಂದ್ಯ ಗೆಲ್ಲಲೇ ಬೇಕನ್ನೋ ಛಲದಲ್ಲಿ ಆಡಿದಂತಿತ್ತು. ಅಸಲಿಗೆ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಯಾಕೆಂದರೆ ಆರಂಭಿಕ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 27 ರನ್ ಮುನ್ನಡೆಯೂ ಪಡೆದಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಆಡಿದ ರೀತಿ ವಿಶ್ವಕ್ಕೆ ಹೊಸ ಸಂದೇಶ ಸಾರುವ ರೀತಿಯಲ್ಲಿತ್ತು. ಅಂದ್ಹಾಗೆ, ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಈ ಟೆಸ್ಟ್‌ ಸರಣಿ ಗೆದ್ದರೆ ವಿರಾಟ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಲಿದೆ. ಭಾರತೀಯ ತಂಡಕ್ಕೂ ಮತ್ತೊಂದು ಹಿರಿಮೆಯ ಗರಿ ಸೇರಿಕೊಳ್ಳಲಿದೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಗೆದ್ದ ಭಾರತೀಯ ಕ್ಯಾಪ್ಟನ್‌ಗಳ ಪಟ್ಟಿ

ಲಾರ್ಡ್ಸ್ ಟೆಸ್ಟ್‌ನಲ್ಲಿ ಗೆದ್ದ ಭಾರತೀಯ ಕ್ಯಾಪ್ಟನ್‌ಗಳ ಪಟ್ಟಿ

ಕ್ರಿಕೆಟ್ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿದ ಅಪರೂಪದ ದಾಖಲೆ ಪಟ್ಟಿಗೆ ನಾಯಕ ವಿರಾಟ್ ಕೊಹ್ಲಿ ಕೂಡ ಸೇರ್ಡೆಯಾಗಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯ ನಡೆದಿದ್ದು ಲಂಡನ್‌ನ ಲಾರ್ಡ್ಸ್‌ನಲ್ಲಿ. ಈ ಪಂದ್ಯದಲ್ಲೇ ಭಾರತೀತ ತಂಡ ಆಡಿ ಅದ್ಭುತ ರೀತಿಯಲ್ಲಿ ಗೆಲುವು ತನ್ನದಾಗಿಸಿಕೊಂಡಿತ್ತು. ಅಂದ್ಹಾಗೆ ಲಾರ್ಡ್ಸ್ ಸ್ಟೇಡಿಯಂನಲ್ಲಿ ಭಾರತೀಯ ತಂಡ ಪಂದ್ಯ ಗೆದ್ದ ದಾಖಲೆಗಳೇ ಕಮ್ಮಿ. ಈವರೆಗೆ ಮೂವರು ನಾಯಕರ ನಾಯಕತ್ವದಲ್ಲಿ ಮಾತ್ರ ದೇಶಿ ತಂಡ ಈ ಸ್ಟೇಡಿಯಂನಲ್ಲಿ ಗೆಲುವು ದಾಖಲಿಸಿದೆ. ಹೀಗಾಗಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ಟೆಸ್ಟ್‌ ಪಂದ್ಯದ ಗೆದ್ದ ಭಾರತೀಯ ನಾಯಕರ ಈ ಅಪರೂಪದ ದಾಖಲೆ ಪಟ್ಟಿಯಲ್ಲಿ ಈವರೆಗೆ ಕೇವಲ ಮೂವರು ನಾಯಕರು ಮಾತ್ರ ಕಾಣಿಸಿಕೊಂಡಿದ್ದಾರೆ ಅವರೆಂದರೆ.
* 1986ರಲ್ಲಿ ಕಪಿಲ್ ದೇವ್
* 2014ರಲ್ಲಿ ಎಂಎಸ್ ಧೋನಿ
* 2021ರಲ್ಲಿ ವಿರಾಟ್ ಕೊಹ್ಲಿ

ವಿರಾಟ್ ಅಂದ್ರೆ ಮಲಾನ್ ಗೆ ತುಂಬಾ ಇಷ್ಟ! | Oneindia Kannada
ದ್ವಿತೀಯ ಟೆಸ್ಟ್‌ ಪಂದ್ಯದ ಸ್ಕೋರ್‌ಕಾರ್ಡ್

ದ್ವಿತೀಯ ಟೆಸ್ಟ್‌ ಪಂದ್ಯದ ಸ್ಕೋರ್‌ಕಾರ್ಡ್

ಭಾರತ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 83, ಕೆಎಲ್ ರಾಹುಲ್ 129, ಚೇತೇಶ್ವರ್ ಪೂಜಾರ 9, ವಿರಾಟ್ ಕೊಹ್ಲಿ 42, ಅಜಿಂಕ್ಯ ರಹಾನೆ 1, ರಿಷಭ್ ಪಂತ್ 37, ರವೀಂದ್ರ ಜಡೇಜಾ 40, ಮೊಹಮ್ಮದ್ ಶಮಿ ೦, ಇಶಾಂತ್ ಶರ್ಮಾ 8 ರನ್‌ ಬಾರಿಸಿದರು. ಭಾರತ 126.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 364 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ 5, ರೋಹಿತ್ ಶರ್ಮಾ 21, ಚೇತೇಶ್ವರ್ 45, ನಾಯಕ ವಿರಾಟ್ ಕೊಹ್ಲಿ 20, ಅಜಿಂಕ್ಯ ರಹಾನೆ 61, ರವೀಂದ್ರ ಜಡೇಜಾ 3, ರಿಷಭ್ ಪಂತ್ 22, ಇಶಾಂತ್ ಶರ್ಮಾ 16, ಮೊಹಮ್ಮದ್ ಶಮಿ 56, ಜಸ್‌ಪ್ರೀತ್‌ ಬೂಮ್ರಾ 34 ರನ್‌ನೊಂದಿಗೆ 109.3 ಓವರ್‌ಗೆ 8 ವಿಕೆಟ್ ಕಳೆದು 298 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 272 ರನ್ ಗುರಿ ನೀಡಲಾಗಿತ್ತು.
ಇಂಗ್ಲೆಂಡ್: ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 49, ಡೊಮಿನಿಕ್ ಸಿಬ್ಲಿ 11, ಹಸೀಬ್ ಹಮೀದ್ 0, ಜೋ ರೂಟ್ 180, ಜಾನಿ ಬೈರ್‌ಸ್ಟೊವ್ 57, ಜೋಸ್ ಬಟ್ಲರ್ 23, ಮೊಯೀನ್ ಅಲಿ 27, ಸ್ಯಾಮ್ ಕರನ್ , ಒಲ್ಲಿ ರಾಬಿನ್ಸನ್ 6, ಮಾರ್ಕ್ ವುಡ್ 5 ರನ್ ಬಾರಿಸಿದರು. ಇಂಗ್ಲೆಂಡ್ 128 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 391 ರನ್ ಗಳಿಸಿ 27 ರನ್ ಮುನ್ನಡೆ ಪಡೆದುಕೊಂಡಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 0, ಡೊಮಿನಿಕ್ ಸಿಬ್ಲಿ 0, ಹಸೀಬ್ ಹಮೀದ್ 9, ಜೋ ರೂಟ್ 33, ಜಾನಿ ಬೈರ್‌ಸ್ಟೊ 2, ಜೋಸ್ ಬಟ್ಲರ್ 25, ಮೊಯೀನ್ ಅಲಿ 13, ಸ್ಯಾಮ್ ಕರನ್ 0, ಒಲ್ಲಿ ರಾಬಿನ್ಸನ್ 9, ಮಾರ್ಕ್ ವುಡ್ 0, ಜೇಮ್ಸ್ ಆ್ಯಂಡರ್ಸನ್ 0 ರನ್ ಗಳಿಸಿದರು. ಇಂಗ್ಲೆಂಡ್ 51.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 120 ರನ್ ಬಾರಿಸಿ 151 ರನ್‌ನಿಂದ ಶರಣಾಯ್ತು.

Story first published: Wednesday, August 25, 2021, 13:59 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X