ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗ್ರೇಮ್‌ಸ್ಮಿತ್ ದಾಖಲೆ ಸರಿಗಟ್ಟಿದ ಭಾರತದ ನಾಯಕ ವಿರಾಟ್ ಕೊಹ್ಲಿ

India vs England: Virat Kohli surpasses Graeme Smith in elite list of ODI captains

ಪೂಣೆ: ಪ್ರತೀ ಪಂದ್ಯಗಳಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಾ ಸಾಗುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ-ಇಂಗ್ಲೆಂಡ್ ದ್ವಿತೀಯ ಏಕದಿನ ಪಂದ್ಯದಲ್ಲೂ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ತಂಡಕ್ಕೆ ಅರ್ಧ ಶತಕದ ಕೊಡುಗೆ ನೀಡಿದ ವಿರಾಟ್, ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ಕುತೂಹಲಕಾರಿ ಟಿ20ಐ ಸರಣಿಗೆ ಸಾಕ್ಷಿಯಾಗಲಿವೆ ಭಾರತ-ಪಾಕಿಸ್ತಾನ!ಕುತೂಹಲಕಾರಿ ಟಿ20ಐ ಸರಣಿಗೆ ಸಾಕ್ಷಿಯಾಗಲಿವೆ ಭಾರತ-ಪಾಕಿಸ್ತಾನ!

ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 26) ನಡೆದ ಭಾರತ-ಇಂಗ್ಲೆಂಡ್ ದ್ವಿತೀಯ ಏಕದಿನ ಪಂದ್ಯದಲ್ಲಿ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್ ಕೊಹ್ಲಿ 79 ಎಸೆತಗಳಲ್ಲಿ 66 ರನ್ ಬಾರಿಸಿದ್ದರು. ಇದರೊಂದಿಗೆ ಕೊಹ್ಲಿ ಹೆಸರಿನಲ್ಲಿ ಮೈಲಿಗಲ್ಲು ಸ್ಥಾಪನೆಯಾಗಿದೆ.

10000 ರನ್ ದಾಖಲೆ

10000 ರನ್ ದಾಖಲೆ

ಪೂಣೆ ಪಂದ್ಯದಲ್ಲೇ ಕೊಹ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವೇಗವಾಗಿ 10000 ರನ್ ಬಾರಿಸಿದ ದಾಖಲೆ ಪೂರೈಸಿದ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 62ನೇ ಅರ್ಧ ಶತಕ ಕೂಡ ದಾಖಲಿಸಿದ್ದರು. ಅಷ್ಟೇ ಅಲ್ಲ, ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿದ್ದು ಅತೀ ಹೆಚ್ಚು ರನ್ ಬಾರಿಸಿದ ದಾಖಲೆಗಾಗಿ ಸ್ಮಿತ್ ಹೆಸರಿನಲ್ಲಿದ್ದ ದಾಖಲೆ ಮೀರಿಸಿದ್ದಾರೆ.

5ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ

5ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ

ಏಕದಿನ ತಂಡಕ್ಕೆ ನಾಯಕನಾಗಿದ್ದು ಗ್ರೇಮ್ ಸ್ಮಿತ್ 5,416 ರನ್ ಬಾರಿಸಿದ್ದರು. ಆದರೆ ಕೊಹ್ಲಿ ಈಗ ಏಕದಿನ ನಾಯಕನಾಗಿ 5441 ರನ್ ಬಾರಿಸಿದ್ದಾರೆ. ಹೀಗಾಗಿ ನಾಯಕನಾಗಿ ಅತ್ಯಧಿಕ ಏಕದಿನ ರನ್ ಬಾರಿಸಿದ್ದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ 5ನೇ ಸ್ಥಾನದಲ್ಲಿದ್ದರು. ಈಗ ಕೊಹ್ಲಿ 5ನೇ ಸ್ಥಾನಕ್ಕೇರಿ ಸ್ಮಿತ್ ಅವರನ್ನು 6ನೇ ಸ್ಥಾನಕ್ಕೆ ತಳ್ಳಿದ್ದಾರೆ.

ಅಗ್ರ ಸ್ಥಾನಗಳಲ್ಲಿ ಪಾಂಟಿಂಗ್, ಧೋನಿ

ಅಗ್ರ ಸ್ಥಾನಗಳಲ್ಲಿ ಪಾಂಟಿಂಗ್, ಧೋನಿ

ಈ ದಾಖಲೆ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 234 ಪಂದ್ಯಗಳಲ್ಲಿ 8497 ರನ್ ಬಾರಿಸಿದ್ದಾರೆ. ನಂ.2ರಲ್ಲಿರುವ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ನಾಯಕನಾಗಿ 200 ಏಕದಿನ ಪಂದ್ಯಗಳಲ್ಲಿ 6641 ರನ್ ಬಾರಿಸಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಸ್ಟೀಫಲ್ ಫ್ಲೆಮಿಂಗ್ ಮತ್ತು ಶ್ರೀಲಂಕಾದ ಅರ್ಜುನ ರಣತುಂಗ ಕ್ರಮವಾಗಿ 3, 4ನೇ ಸ್ಥಾನದಲ್ಲಿದ್ದಾರೆ.

Story first published: Friday, March 26, 2021, 17:39 [IST]
Other articles published on Mar 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X