ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗಿದ್ದ ಗೆಲ್ಲುವ ಅವಕಾಶವನ್ನು ಟೀಮ್ ಇಂಡಿಯಾ ಕಸಿದಿದ್ದು ಹೇಗೆ ಗೊತ್ತಾ?

India vs England: VVS Laxman praises lower order fight at Lords
ಗೆಲ್ಲುವ ಅವಕಾಶ ಇಂಗ್ಲೆಂಡ್ ಪರ ಇದ್ದರೂ ಟೀಮ್ ಇಂಡಿಯಾ ಗೆದ್ದಿದ್ದು ಹೇಗೆ? | Oneindia Kannada

ಲಾರ್ಡ್ಸ್ ಅಂಗಳದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಭಾರತ ಅಕ್ಷರಶಃ ಸೋಲಿನ ದವಡೆಯಲ್ಲಿ ಬಂದು ನಿಂತಿತ್ತು. ಗೆಲ್ಲುವ ಮಾತಿರಲಿ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಸಾಕು ಎಂಬ ಭಾವನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿತ್ತು. ಆದರೆ ಅಂತಿಮ ದಿನ ಭಾರತೀಯ ಕ್ರಿಕೆಟ್ ತಂಡದ ಕೆಳ ಕ್ರಮಾಂಕದ ಆಟಗಾರರು ನೀಡಿದ ಪ್ರದರ್ಶನ ಪಂದ್ಯದಲ್ಲಿ ಭಾರತ ತಂಡಕ್ಕೆ ಮತ್ತೆ ಅವಕಾಶವನ್ನು ಸೃಷ್ಟಿಸಿದ್ದರು. ಭಾರತ ಮತ್ತೊಮ್ಮೆ ಗೆಲ್ಲುವ ವಿಶ್ವಾಸವನ್ನು ಪಡೆದುಕೊಂಡಿತ್ತು.

ಜಸ್ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ನೀಡಿದ ಈ ಪ್ರದರ್ಶನ ಟೀಮ್ ಇಂಡಿಯಾವನ್ನು ಸೋಲಿನ ಅಪಾಯದಿಂದಲೂ ಪಾರು ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ 298 ರನ್‌ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಭಾರತ 272 ಮುನ್ನಡೆಯನ್ನು ಪಡೆದುಕೊಂಡಿತು. ಈ ಪ್ರದರ್ಶನ ಇಂಗ್ಲೆಂಡ್ ತಂಡದ ಗೆಲ್ಲುವ ಕನಸನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿತ್ತು.

ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರು ನೀಡಿದ ಈ ಅದ್ಭುತ ಪ್ರದರ್ಶನಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಭಾರತೀಯ ತಂಡದ ಬಾಲಂಗೋಚಿಗಳು ಯಾವ ರೀತಿಯಾಗಿ ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ ಎಂಬುದನ್ನು ಕೂಡ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ಬೌಲರ್‌ಗಳ ಬ್ಯಾಟಿಂಗ್ ಸಾಮರ್ಥ್ಯ

ಬೌಲರ್‌ಗಳ ಬ್ಯಾಟಿಂಗ್ ಸಾಮರ್ಥ್ಯ

ಭಾರತ ತಂಡ ಇಂದಿನ ಆಟದಲ್ಲಿ ಬ್ಯಾಟಿಂಗ್‌ನಲ್ಲಿ ಸಾಧಿಸಿದ ಯಶಸ್ಸಿಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ಹಾಗೂ ಎಲ್ಲಾ ಕೆಳ ಕ್ರಮಾಂಕದ ಆಟಗಾರರಿಗೆ ಶ್ರೇಯಸ್ಸನ್ನು ಸಲ್ಲಿಸಬೇಕು. ಇಶಾಂತ್ ಶರ್ಮಾ ತುಂಬಾ ಉತ್ತಮವಾಗಿ ಬ್ಯಾಟಿಂಗ್ ನಡೆಸಬಲ್ಲವರಾಗಿದ್ದಾರೆ. ನಾನು ಅವರೊಂದಿಗೆ ಕೆಲ ಇನ್ನಿಂಗ್ಸ್‌ಗಳಲ್ಲಿ ಜೊತೆಯಾಟವಾಡಿದ ಅನುಭವಹೊಂದಿದ್ದೇನೆ. ಶಮಿ ಕೂಡ ಬ್ಯಾಟಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಬಲ್ಲವರಾಗಿದ್ದಾರೆ. ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವ ಕಲೆ ಅವರಿಗೆ ತಿಳಿಸಿದೆ. ಇನ್ನು ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ಇಲ್ಲದ ಉಮೇಶ್ ಯಾದವ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಶತಕವನ್ನು ಕೂಡ ಬಾರಿಸಿದ್ದಾರೆ. ಬೂಮ್ರಾ ಅವರಲ್ಲಿರುವ ಬ್ಯಾಟಿಂಗ್ ಸಾಮರ್ಥ್ಯವನ್ನು ನೀವು ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅರಿತುಕೊಂಡಿದ್ದೀರಿ. ಇನ್ನು ಸಿರಾಜ್ ಹೈದರಾಬಾದ್ ಮೂಲದವರಾಗಿರುವ ಕಾರಣ ಅವರ ಬ್ಯಾಟಿಂಗ್ ಸಾಮರ್ಥ್ಯ ಕೂಡ ನನಗೆ ಅರಿವಿದೆ" ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ನೆಟ್‌ನಲ್ಲಿ ಶಾರ್ಟ್ ಎಸೆತಗಳ ಅಭ್ಯಾಸ

ನೆಟ್‌ನಲ್ಲಿ ಶಾರ್ಟ್ ಎಸೆತಗಳ ಅಭ್ಯಾಸ

ಇನ್ನು ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರು ಇಂಗ್ಲೆಂಡ್ ಬೌಲರ್‌ಗಳನ್ನು ಎದುರಿಸಲು ನೆಟ್‌ನಲ್ಲಿ ವಿಶೇಷವಾಗಿ ತಯಾರಿ ನಡೆಸಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ. "ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಅವರು ನಡೆಸಿದ ತಯಾರಿ ನಿಜಕ್ಕೂ ಅದ್ಭುತ. ಭಾರತ ತಂಡದ ಥ್ರೋ ಡೌನ್ ಸ್ಪೆಶಲಿಸ್ಟ್ ರಾಘು ಈ ಕೆಳ ಕ್ರಮಾಂಕದ ಆಟಗಾರರಿಗೆ ಶಾರ್ಟ್ ಪಿಚ್ ಎದುರಿಸಲು ಅನುಕೂಲವಾಗುವಂತೆ ಸಾಕಷ್ಟು ಎಸೆತಗಳನ್ನು ಎಸೆದಿದ್ದಾರೆ. ಪಕ್ಕೆಲುಬಿನ ಹಂತಕ್ಕೆ ಬರುವ ಎಸೆತಗಳಿಗೆ ಉತ್ತರವನ್ನು ನೀಡಲು ಇದರಿಂದಾಗಿ ಈ ಆಟಗಾರರಿಗೆ ಸಾಕಷ್ಟು ಸಹಾಯವಾಗಿದೆ." ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಭಾರತ ತಂಡದ ಬೌಲರ್‌ಗಳ ಈ ಅಭ್ಯಾಸದ ಕಾರಣದಿಂದಾಗಿ ಇಂಗ್ಲೆಂಡ್ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಭಾರತದ ಪರವಾಗಿ ಫಲಿತಾಂಶ ಬರುವಂತಾಗಿದೆ.

ಅದ್ಭುತ ಜಯ ಸಾಧಿಸಿದ ಟೀಮ್ ಇಂಡಿಯಾ

ಅದ್ಭುತ ಜಯ ಸಾಧಿಸಿದ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಅಂತಿಮ ದಿನ ಅದ್ಭುತ ಪ್ರದರ್ಶನ ನೀಡುವ ಮೂಲಕ ರೋಚಕ ಜಯ ಸಾಧಿಸಿದೆ. ಭಾರತದ ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ನೀಡಿದ ಪ್ರದರ್ಶನದ ನಂತರ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ದಾಂಡಿಗರನ್ನು ವೇಗವಾಗಿ ಫೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಗೆಲುವು ಸಾಧಿಸಿದೆ.

Story first published: Tuesday, August 17, 2021, 10:09 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X