ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು

India vs England: When it starts spinning, the world starts crying Nathan Lyon on pitch critics

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಎರಡನೇ ದಿನದಲ್ಲೇ ಅಂತ್ಯವಾದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಆಟಗಾರರು ಈ ಬಗ್ಗೆ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸದಿದ್ದರೂ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರು ಅಹ್ಮದಾಬಾದ್ ಒಇಚ್ ಗುಣಮಟ್ಟದ ಬಗ್ಗೆ ಟೀಕಿಸಿದ್ದಾರೆ. ಆದರೆ ಈ ಟೀಕೆಗಳಿಗೆ ಆಸ್ಟ್ರೇಲಿಯಾದ ಅನುಭವಿ ಸ್ಪಿನ್ನರ್ ನಥನ್ ಲಿಯೋನ್ ತಿರುಗೇಟು ನೀಡಿದ್ದಾರೆ.

"ಪಿಚ್ ಸ್ಪಿನ್ನರ್‌ಗಳಿಗೆ ಬೆಂಬಲವನ್ನು ನೀಡುತ್ತಿದೆ ಎಂದಾಗ ಎಲ್ಲರೂ ಬರುತ್ತಾರೆ" ಎಂದು ಲಿಯೋನ್ ಪ್ರತಿಕ್ರಿಯಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸ್ಪಿನ್ನರ್‌ಗಳು ಪರಾಕ್ರಮ ಮೆರೆಯುತ್ತಿರುವುದನ್ನು ರಾತ್ರಿಯಿಡೀ ವೀಕ್ಷಿಸುತ್ತಾ ಸಂತಸಪಟ್ಟಿದ್ದೇನೆ ಎಂದು ನಥನ್ ಲಿಯೀನ್ ಹೇಳಿಕೆಯನ್ನು ನೀಡಿದ್ದಾರೆ.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

ಇನ್ನು ಅಹ್ಮದಾಬಾದ್‌ನ ಪಿಚ್ ಬಗ್ಗೆ ಕೇಳಿ ಬಂದಿರುವ ಟೀಕೆಗಳ ಬಗ್ಗೆಯೂ ಲಿಯೋನ್ ಕಟುವಾಗಿ ಪ್ರತಿಕ್ರಿಯಿಸಿದರು. "ಪಿಚ್ ಸ್ಪಿನ್ನರ್‌ಗಳಿಗೆ ಬೆಂಬಲವನ್ನು ನೀಡುತ್ತಿದೆ ಎಂದಾಗ ಎಲ್ಲರೂ ಅಳಲು ಆರಂಭಿಸುತ್ತಾರೆ. ಆದರೆ ವೇಗದ ಬೌಲಿಂಗ್‌ ಪರಿಸ್ಥಿತಿಯಲ್ಲಿ ತಂಡವೊಂದು ಸುಲಭಕ್ಕೆ ವಿಕೆಟ್ ಒಪ್ಪಿಸಿದಾಗ ಯಾರೂ ಕೂಡ ಏನನ್ನೂ ಆಡುವುದಿಲ್ಲ" ಎಂದು ಹೇಳಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗರಾದ ಮೈಕಲ್ ವಾನ್, ಅಲೆಸ್ಟರ್ ಕುಕ್ ಮತ್ತು ಆಂಡ್ರೋ ಸ್ಟ್ರಾಸ್ ಆಹ್ಮದಾಬಾದ್‌ನ ಸ್ಪಿನ್ ಪಿಚ್ ಬಗ್ಗೆ ಆಕ್ಷೇಪವನ್ನು ಎತ್ತಿದ್ದರು. ಅದರಲ್ಲೂ ಮೈಕಲ್ ವಾನ್ ಈ ಪಿಚ್ ಐದು ದಿನಗಳ ಟೆಸ್ಟ್ ಆಡಲು ಪೂರಕವಾದ ಪಿಚ್ ಅಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಆಸಿಸ್ ಸ್ಪಿನ್ನರ್‌ ನಥನ್ ಲಿಯೋನ್ ಪ್ರತಿಕ್ರಿಯಿಸಿದರು.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

"ನಾವು ವಿಶ್ವಾದ್ಯಂತ ಸೀಮಿಂಗ್ ಪಿಚ್‌ಗಳಲ್ಲಿ ಆಡಿದ್ದೇವೆ, ಹಾಗೂ 47, 60 ರನ್‌ಗಳಿಗೆ ಆಲೌಟ್ ಆಗಿದ್ದೂ ಇದೆ. ಆದರೆ ಆಗ ಯಾರೂ ಮಾತನಾಡಿಲ್ಲ. ಆದರೆ ಪಿಚ್ ಬೇಗನೆ ಸ್ಪಿನ್ ಆಗಲು ಆರಂಭವಾದರೆ ವಿಶ್ವದ ಎಲ್ಲರೂ ಅಳಲು ಆರಂಭಿಸುತ್ತಾರೆ. ನನಗೆ ಇದು ಅರ್ಥವೇ ಆಗುತ್ತಿಲ್ಲ. ನಾನು ಇದನ್ನು ಗಮನಿಸುತ್ತೇನೆ. ಇದೊಂತರಾ ಮಜಾ ಇದೆ" ಎಂದು ನಥನ್ ಲಿಯೋನ್ ವ್ಯಂಗ್ಯವಾಡಿದ್ದಾರೆ.

Story first published: Sunday, February 28, 2021, 11:20 [IST]
Other articles published on Feb 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X