ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಪಂದ್ಯದಲ್ಲಿ ಎರಡು ಅರ್ಧ ಶತಕ ಸಿಡಿಸಿದ ಶಫಾಲಿ ವರ್ಮ

India vs England Women: Shafali Verma hits her second half-century on debut.

ಭಾರತ ಮಹಿಳೆಯರ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡ ಟೆಸ್ಟ್ ಪಂದ್ಯದಲ್ಲಿ ಸೆಣೆಸಾಡುತ್ತಿದೆ. ಈ ಪಂದ್ಯದಲ್ಲಿ 17ರ ಹರೆಯದ ಭಾರತೀಯ ಆಟಗಾರ್ತಿ ಶಫಾಲಿ ವರ್ಮ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚುಹರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿದ ಶಫಾಲಿ ವರ್ಮ ಕೇವಲ 4 ರನ್‌ಗಳಿಂದ ಶತಕ ವಂಚಿತರಾಗಿದ್ದರು.

ಈಗ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶಫಾಲಿ ವರ್ಮ ತಮ್ಮ ಶ್ರೇಷ್ಠ ಆಟವನ್ನು ಮುಂದುವರಿಸಿದ್ದಾರೆ. ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಶಫಾಲಿ ಅರ್ಧ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಭಾರತೀಯ ತಂಡದ ಪರವಾಗಿ ಮತ್ತೊಂದು ಸುಂದರ ಇನ್ನಿಂಗ್ಸ್ ಕಟ್ಟುತ್ತಾ ಮುನ್ನುಗ್ಗಿದ್ದಾರೆ.

WTC Final: ಒಂದೂ ಎಸೆತ ಕಾಣದೆ ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿWTC Final: ಒಂದೂ ಎಸೆತ ಕಾಣದೆ ಐತಿಹಾಸಿಕ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿ

ಮೊದಲ ಇನ್ನಿಂಗ್ಸ್‌ನಲ್ಲಿ ಶಫಾಲಿ ಆರಂಭಿಕ ಜೊತೆಗಾರ್ತಿ ಸ್ಮೃತಿ ಮಂಧಾನ ಜೊತೆಗೆ 167 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 152 ಎಸೆತಗಳನ್ನು ಎದುರಿಸಿದ್ದ ಶಫಾಲಿ 13 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು.

ಇನ್ನು ಈ ಮೂಲಕ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಮೊದಲ ಸ್ಥಾನದಲ್ಲಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲಿ ಒಟ್ಟು 187 ರನ್‌ಗಳಿಸಿದ್ದರು. ಎರಡನೇ ಸ್ಥಾನದಲ್ಲಿ ರೋಹಿತ್ ಶರ್ಮಾ(177 ರನ್) ಹಾಗೂ ಮೂರನೇ ಸ್ಥಾನದಲ್ಲಿ 156 ರನ್‌ಗಳಿಸಿದ (38 ಹಾಗೂ 118) ಲಾಲಾ ಅಮರನಾಥ್ ಇದ್ದಾರೆ.

ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 396 ರನ್‌ಗಳನ್ನು ಗಳಿಸಿದ ನಂತರ ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರವಾಗಿ ಶಫಾಲಿ ಹಾಗೂ ಮಂಧಾನ ಜೋಡಿ ನೀಡಿದ ಶ್ರೇಷ್ಠ ಜೊತೆಯಾಟ ನೀಡಿ ಬೇರ್ಪಟ್ಟ ಬಳಿಕ ಹಠಾತ್ ಕುಸಿತ ಕಂಡಿತು. ಮಿಥಾಲಿ ರಾಜ್, ಪೂನಮ್ ರಾವತ್ ಹಾಗೂ ಶಿಖಾ ಪಾಂಡೆ ಶೀಘ್ರವಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದ್ದರು. ಎರಡನೇ ದಿನದಂತ್ಯಕ್ಕೆ ಭಾರತ 187 ರನ್‌ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನವೂ ಈ ಕುಸಿತ ಮುಂದಿವರಿದು 231 ರನ್‌ಗಳಿಗೆ ಆಲೌಟ್‌ ಆಯಿತು.

165 ರನ್‌ಗಳ ಮುನ್ನಡೆಯನ್ನು ಪಡೆದ ಇಂಗ್ಲೆಂಡ್ ಭಾರತ ತಂಡಕ್ಕೆ ಫಾಲೋ ಆನ್ ಹೇರಿತು. ಹೀಗಾಗಿ ಭಾರತ ಮತ್ತೆ ಬ್ಯಾಟಿಂಗ್‌ಗೆ ಇಳಿದಿದೆ. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 8 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿದ್ದಾರೆ. ಆದರೆ ನಂತರ ಬಂದ ದೀಪ್ತಿ ಶರ್ಮಾ ಜೊತೆಗೆ ಶಫಾಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಮಳೆಯಿಂದಾಗಿ ಮೂರನೇ ದಿನದಾಟ ಸ್ಥಗಿತವಾಗಿದ್ದು ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 83 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು 82 ರನ್‌ಗಳ ಹಿನ್ನೆಡೆಯನ್ನು ಅನುಭವಿಸುತ್ತಿದೆ. ಶಫಾಲಿ 55 ರನ್‌ಗಳಿಸಿದ್ದರೆ ದೀಪ್ತಿ ಶರ್ಮಾ 18 ರನ್‌ಗಳಿಸಿ ಅಂತಿಮ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.

Story first published: Saturday, June 19, 2021, 9:38 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X