ಇಂಗ್ಲೆಂಡ್ ವಿರುದ್ಧ ಗೆಲ್ಲಲು ಆತ ತಂಡದಲ್ಲಿರಬೇಕಿತ್ತು; ಈಗಿರುವ ಆಟಗಾರರ ಕುರಿತು ಅನುಮಾನ ವ್ಯಕ್ತಪಡಿಸಿದ ಯುವಿ!

ಆಟಗಾರರ ಆಯ್ಕೆ ಯಲ್ಲಿ ಸೋತ ವಿರಾಟ್ ಕೊಹ್ಲಿ | Oneindia Kannada

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭವಾಗಲಿದೆ. ಕಳೆದ ತಿಂಗಳೇ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿತು. ಈ ಪಂದ್ಯದ ನಂತರ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಬೇಕಾದ ತರಬೇತಿಯನ್ನು ನಡೆಸಿದೆ.

ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!ಭಾರತ vs ಇಂಗ್ಲೆಂಡ್: ಈ 3 ಭಾರತೀಯ ಕ್ರಿಕೆಟಿಗರಿಗೆ ಇದೇ ಕೊನೆಯ ಸರಣಿಯಾಗಬಹುದು!

ಅತ್ತ ಕಳೆದ ಬಾರಿ ಭಾರತ ಪ್ರವಾಸ ಕೈಗೊಂಡು ಭಾರತದ ನೆಲದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಇಂಗ್ಲೆಂಡ್ ಈ ಬಾರಿಯ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಸೋಲಿಸುವುದರ ಮೂಲಕ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ. ಇನ್ನು ಕ್ರೀಡಾಭಿಮಾನಿಗಳಿಗೆ ಮಾತ್ರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಈ ಸರಣಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಈ ಸರಣಿಯ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಕೇವಲ ಕ್ರೀಡಾಭಿಮಾನಿಗಳು ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರು ಸಹ ಈ ಸರಣಿಯ ಕುರಿತು ಮಾತನಾಡಿದ್ದು ಇದೀಗ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಯಾರದ್ದು ಮೇಲುಗೈ? ಬಲಿಷ್ಠರಾರು ಗೊತ್ತಾ?ಭಾರತ vs ಇಂಗ್ಲೆಂಡ್: ಟೆಸ್ಟ್ ಇತಿಹಾಸದಲ್ಲಿ ಯಾರದ್ದು ಮೇಲುಗೈ? ಬಲಿಷ್ಠರಾರು ಗೊತ್ತಾ?

ಇಂಗ್ಲೆಂಡ್ ಪಿಚ್‌ಗಳ ಕುರಿತು ಮಾತನಾಡಿರುವ ಯುವರಾಜ್ ಸಿಂಗ್ ಇಂಗ್ಲೆಂಡ್ ನೆಲದಲ್ಲಿ ಪಂದ್ಯಗಳನ್ನು ಗೆಲ್ಲಬೇಕೆಂದರೆ ಭುವನೇಶ್ವರ್ ಕುಮಾರ್ ರೀತಿಯ ಸ್ವಿಂಗ್ ಬೌಲರ್‌ಗಳು ತಂಡದಲ್ಲಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಯುವರಾಜ್ ಸಿಂಗ್ ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಪಿಚ್‌ಗಳಿಗೆ ಭುವನೇಶ್ವರ್ ಕುಮಾರ್ ಸರಿಯಾದ ಬೌಲರ್

ಇಂಗ್ಲೆಂಡ್ ಪಿಚ್‌ಗಳಿಗೆ ಭುವನೇಶ್ವರ್ ಕುಮಾರ್ ಸರಿಯಾದ ಬೌಲರ್

ಭುವನೇಶ್ವರ್ ಕುಮಾರ್ ಸ್ವಿಂಗ್ ಬೌಲಿಂಗ್ ಇಂಗ್ಲೆಂಡ್ ಪಿಚ್‌ಗಳಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತದೆ, ಡ್ಯೂಕ್ ಬಾಲ್ ಬಳಸಿ ಪಂದ್ಯವನ್ನು ಆಡುವುದರಿಂದ ಸ್ವಿಂಗ್ ಬೌಲರ್‌ಗಳ ಅಗತ್ಯತೆ ತಂಡಕ್ಕೆ ಹೆಚ್ಚಿದೆ. 2014ರಲ್ಲಿ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ನೆಲದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿ ಮಿಂಚಿದ್ದರು. ಹೀಗಾಗಿ ಭುವನೇಶ್ವರ್ ಕುಮಾರ್ ರೀತಿಯ ಸ್ವಿಂಗ್ ಬೌಲರ್‌ಗಳ ಅಗತ್ಯತೆ ತಂಡಕ್ಕಿದೆ ಎಂದು ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮೊಹಮ್ಮದ್ ಶಮಿ, ಬೂಮ್ರಾ ಮತ್ತು ಇಶಾಂತ್ ಶರ್ಮಾ ಇದ್ದಾರೆ ಆದರೆ ಭುವನೇಶ್ವರ್ ಇರಬೇಕಿತ್ತು!

ಮೊಹಮ್ಮದ್ ಶಮಿ, ಬೂಮ್ರಾ ಮತ್ತು ಇಶಾಂತ್ ಶರ್ಮಾ ಇದ್ದಾರೆ ಆದರೆ ಭುವನೇಶ್ವರ್ ಇರಬೇಕಿತ್ತು!

ಇನ್ನೂ ಮುಂದುವರೆದು ಮಾತನಾಡಿರುವ ಯುವರಾಜ್ ಸಿಂಗ್ ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಬೌಲರ್‌ಗಳ ಬಗ್ಗೆಯೂ ಮಾತನಾಡಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿರುವ ಮೊಹಮ್ಮದ್ ಶಮಿ ಬುಮ್ರಾ ಮತ್ತು ಇಶಾಂತ್ ಶರ್ಮಾ ವೇಗದ ಬೌಲರ್‌ಗಳಾಗಿದ್ದು ಇಂಗ್ಲೆಂಡ್ ಪಿಚ್‌ಗಳಲ್ಲಿ ವಿಕೆಟ್ ಪಡೆಯುವುದು ಕಷ್ಟವೆನಿಸಬಹುದು. ಆದರೆ ಭುವನೇಶ್ವರ್ ಕುಮಾರ್ ತಂಡದಲ್ಲಿ ಇದ್ದಿದ್ದರೆ ಇಂಗ್ಲೆಂಡ್ ಪಿಚ್‌ಗಳಲ್ಲಿ ವಿಕೆಟ್ ಪಡೆಯುವುದು ಸುಲಭವಾಗುತ್ತಿತ್ತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಭುವನೇಶ್ವರ್ ಫಿಟ್ ಆಗಿದ್ದು, ತಂಡದಲ್ಲಿ ಸ್ಥಾನ ನೀಡಬೇಕು

ಭುವನೇಶ್ವರ್ ಫಿಟ್ ಆಗಿದ್ದು, ತಂಡದಲ್ಲಿ ಸ್ಥಾನ ನೀಡಬೇಕು

ಭುವನೇಶ್ವರ್ ಕುಮಾರ್ ಅಗತ್ಯತೆ ಇಂಗ್ಲೆಂಡ್ ಸರಣಿಯಲ್ಲಿ ಹೆಚ್ಚಿದೆ ಎಂದು ಹೇಳಿಕೆ ನೀಡಿದ ಯುವರಾಜ್ ಸಿಂಗ್ ಟೀಮ್ ಇಂಡಿಯಾದಲ್ಲಿ ಭುವನೇಶ್ವರ್ ಕುಮಾರ್‌‌ಗೆ ಸ್ಥಾನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿಗಷ್ಟೆ ಶ್ರೀಲಂಕಾ ಪ್ರವಾಸದಲ್ಲಿ ಭಾಗವಹಿಸಿದ್ದ ಭುವನೇಶ್ವರ್ ಕುಮಾರ್ ಫಿಟ್ ಆಗಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನವನ್ನು ನೀಡಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು ಹೀಗಾಗಿ ಯಾವುದೇ ಸಮಯದಲ್ಲಿ ಬೇಕಾದರೂ ಭುವನೇಶ್ವರ್ ಕುಮಾರ್‌‌ಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಯುವರಾಜ್ ಸಿಂಗ್ ತಮ್ಮ ಅನಿಸಿಕೆ ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, August 3, 2021, 19:35 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X