ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರಿಶ್ ನೆಲದಲ್ಲಿ ಭಾರತಕ್ಕೆ ಚುಟುಕು ಕ್ರಿಕೆಟ್ ಸವಾಲು: ಮೊದಲ ಪಂದ್ಯ ಇಂದು

ಡುಬ್ಲಿನ್, ಜೂನ್ 27: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಗ್ನಿಪರೀಕ್ಷೆಗೂ ಮುನ್ನ ಭಾರತದ ಕ್ರಿಕೆಟಿಗರು ಪಕ್ಕದ ಐರಿಶ್ ನೆಲದಲ್ಲಿ ತಾಲೀಮು ನಡೆಸಲಿದ್ದಾರೆ.

ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಟಿ 20 ಸರಣಿಯನ್ನು ಆಡುತ್ತಿರುವ ಭಾರತಕ್ಕೆ ಇದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ದೊರಕಿರುವ ಅಭ್ಯಾಸ ಪಂದ್ಯದಂತೆ.

ಭಾರತದಿಂದ ಐರ್ಲೆಂಡ್ ಪ್ರವಾಸ 2018, ಟಿ20 ಪಂದ್ಯಗಳ ವೇಳಾಪಟ್ಟಿ ಭಾರತದಿಂದ ಐರ್ಲೆಂಡ್ ಪ್ರವಾಸ 2018, ಟಿ20 ಪಂದ್ಯಗಳ ವೇಳಾಪಟ್ಟಿ

ಆದರೆ, ಅಷ್ಟೇನೂ ಖ್ಯಾತನಾಮ ಆಟಗಾರರಿರುವ ಐರ್ಲೆಂಡ್ ತಂಡವನ್ನು ದುರ್ಬಲ ಎಂದು ಕಡೆಗಣಿಸುವಂತಿಲ್ಲ. ಐಪಿಎಲ್ ಆರಂಭವಾದಾಗಿನಿಂದ ಭಾರತದ ನೆಲದಲ್ಲಿಯೇ ಆಡಿರುವ ಇಲ್ಲಿನ ಆಟಗಾರರು ಅಲ್ಲಿನ ವಾತಾವರಣದಲ್ಲಿ ಆಡುವುದು ಸುಲಭವಲ್ಲ. ಅಲ್ಲದೆ, ಎದುರಾಳಿ ತಂಡಗಳಿಗೆ ಆಘಾತ ನೀಡುವ ಸಾಮರ್ಥ್ಯವುಳ್ಳ ಆಟಗಾರರು ಐರ್ಲೆಂಡ್ ತಂಡದಲ್ಲಿದ್ದಾರೆ.

ಕುತ್ತಿಗೆ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಅನುಭವಿಗಳು ಮತ್ತು ಹೊಸ ಆಟಗಾರರ ಸಮ್ಮಿಶ್ರಣವಾಗಿರುವ ಭಾರತ ತಂಡ ಎಲ್ಲ ಹಂತಗಳಲ್ಲಿಯೂ ಹೆಚ್ಚು ಪ್ರಬಲವಾಗಿದೆ.

ನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರನವೆಂಬರ್ 11ಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಸಮರ

ಟಿ 20 ranking ನಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಐರ್ಲೆಂಡ್ 17ನೇ ಸ್ಥಾನದಲ್ಲಿದೆ. ಇತ್ತೀಚೆಗೆ ಹೆಚ್ಚು ಟಿ 20 ಸರಣಿಗಳನ್ನು ಆಡಿರುವ ಐರ್ಲೆಂಡ್, ಭಾರತಕ್ಕೆ ಪೈಪೋಟಿ ನೀಡುವ ಉತ್ಸಾಹದಲ್ಲಿದೆ.

ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧವಾರ ನಡೆಯಲಿದ್ದು, ಇನ್ನೊಂದು ಪಂದ್ಯ ಶುಕ್ರವಾರ ನಡೆಯಲಿದೆ.

ಅನುಭವಿಗಳ ಬಲಿಷ್ಠ ಪಡೆ

ಅನುಭವಿಗಳ ಬಲಿಷ್ಠ ಪಡೆ

ಭಾರತದ ಬ್ಯಾಟಿಂಗ್ ಪಡೆ ಹೆಚ್ಚು ಬಲವಾಗಿದೆ. ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂ.ಎಸ್. ಧೋನಿ, ಮನೀಶ್ ಪಾಂಡೆ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಟಿ 20 ಪರಿಣತರು ತಂಡದಲ್ಲಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕಾಣಿಕೆ ನೀಡಬಲ್ಲರು. ಭುವನೇಶ್ವರ್ ಕುಮಾರ್ ನೇತೃತ್ವದಲ್ಲಿ ಬೌಲಿಂಗ್ ವಿಭಾಗವೂ ಶಕ್ತಿಯುತವಾಗಿದೆ. ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ ಕೌಲ್, ಯಜುರ್ವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಏಕದಿನ ಹಾಗೂ ಟಿ 20ಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ವಿಲ್ಸನ್‌ಗೆ ದೊಡ್ಡ ಸವಾಲು

ವಿಲ್ಸನ್‌ಗೆ ದೊಡ್ಡ ಸವಾಲು

ಇತ್ತೀಚೆಗಷ್ಟೇ ನಾಯಕತ್ವದ ಹೊಣೆ ವಹಿಸಿಕೊಂಡಿರುವ ಐರ್ಲೆಂಡ್ ನಾಯಕ ಗ್ಯಾರಿ ವಿಲ್ಸನ್‌ ಬಲಿಷ್ಠ ತಂಡದ ಎದುರು ಆಡುವ ಸವಾಲಿಗೆ ಒಡ್ಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದರ್ಶನ ನೀಡಿರುವ ಆಂಡ್ರೂ ಬಾಲ್‌ಬ್ರೈನ್, ಜಾರ್ಜ್ ಡಾಕ್ರೆಲ್, ಅನುಭವಿ ಆಟಗಾರ ಕೆವಿನ್ ಓಬ್ರಿಯನ್, ವಿಲಿಯಮ್ ಪೋರ್ಟರ್‌ಫೀಲ್ಡ್, ಪಾಲ್ ಸ್ಟಿರ್ಲಿಂಗ್ ಮೇಲುಗೈ ತಂದುಕೊಡಬಲ್ಲರು. ಕೆವಿನ್ ಓಬ್ರಿಯನ್, ಪೋರ್ಟರ್‌ಫೀಲ್ಡ್ ಮತ್ತು ಸ್ಟಿರ್ಲಿಂಗ್ ಈ ಹಿಂದೆ ಭಾರತದ ವಿರುದ್ಧ ಆಡಿರುವ ಅನುಭವ ಹೊಂದಿದ್ದಾರೆ.

ಮೊದಲ ದ್ವಿಪಕ್ಷೀಯ ಸರಣಿ

ಮೊದಲ ದ್ವಿಪಕ್ಷೀಯ ಸರಣಿ

ಇದೇ ಮೊದಲ ಬಾರಿಗೆ ಭಾರತ ಮತ್ತು ಐರ್ಲೆಂಡ್ ಟಿ 20 ಸರಣಿ ಆಡುತ್ತಿವೆ. ಇದುವರೆಗೂ ಉಭಯ ತಂಡಗಳು ಟಿ 20ಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ. 2009ರ ವಿಶ್ವಕಪ್ ಟಿ 20ಯಲ್ಲಿ ಭಾರತ ತಂಡವು ಐರ್ಲೆಂಡ್ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ದಾಖಲಿಸಿತ್ತು.

ಮತ್ತೊಂದು ದಾಖಲೆಗೆ ಕೊಹ್ಲಿ ಸಜ್ಜು

ಮತ್ತೊಂದು ದಾಖಲೆಗೆ ಕೊಹ್ಲಿ ಸಜ್ಜು

ಇನ್ನು 17 ರನ್ ಬಾರಿಸಿದರೆ ವಿರಾಟ್ ಕೊಹ್ಲಿ ಪುರುಷರ ಟಿ 20ಯಲ್ಲಿ 2000 ರನ್ ಗಡಿ ದಾಟಿದ ಭಾರತದ ಮೊದಲ ಮತ್ತು ವಿಶ್ವದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಮುಂದಿನ ಒಂಬತ್ತು ಪಂದ್ಯಗಳ ಒಳಗೆ ಈ ಗುರಿ ತಲುಪಿದರೆ ಅತಿ ವೇಗದಲ್ಲಿ 2000 ರನ್ ಗಳಿಸಿದ ಆಟಗಾರನಾಗಲಿದ್ದಾರೆ.

ಮೊದಲು 2000 ರನ್ ಗಡಿ ದಾಟಿರುವ ಬ್ರೆಂಡನ್ ಮೆಕಲಂ ಅದಕ್ಕಾಗಿ 67 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಮಾರ್ಟಿನ್ ಗುಪ್ಟಿಲ್ 73 ಪಂದ್ಯಗಳಲ್ಲಿ ಈ ದಾಖಲೆ ಮಾಡಿದ್ದಾರೆ. 53 ಪಂದ್ಯಗಳಿಂದ 1983 ರನ್ ಗಳಿಸಿರುವ ಕೊಹ್ಲಿ, ಅತಿ ವೇಗದ 1000 ರನ್‌ಗಳನ್ನು ಗಳಿಸಿರುವ ಕೀರ್ತಿಗೆ ಭಾಜನರಾಗಿದ್ದಾರೆ.

67 ಪಂದ್ಯಗಳಿಂದ ಸಿಗದ ಅವಕಾಶ

67 ಪಂದ್ಯಗಳಿಂದ ಸಿಗದ ಅವಕಾಶ

ಉಮೇಶ್ ಯಾದವ್ ಅವರಿಗೆ ಅಂತಿಮ ಹನ್ನೊಂದರ ತಂಡದಲ್ಲಿ ಆಡಲು ಅವಕಾಶ ಸಿಕ್ಕರೆ, ಟಿ 20ಯಲ್ಲಿ 67 ಪಂದ್ಯಗಳ ಬಳಿಕ ಮತ್ತೆ ಆಡಿದಂತೆ ಆಗುತ್ತದೆ. ಇದು ಅತಿ ಹೆಚ್ಚು ಪಂದ್ಯಗಳ ಅಂತರದ ಬಳಿಕ ಆಡುವ ಜಗತ್ತಿನ ನಾಲ್ಕನೆಯ ಮತ್ತು ಭಾರತದ ಮೊದಲ ಆಟಗಾರ ಎಂದಾಗಲಿದೆ. ಅವರು ಟಿ 20ಯಲ್ಲಿ ಕೊನೆಯ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದು 2012ರಲ್ಲಿ.

ಪಂದ್ಯದ ವಿವರ

ಪಂದ್ಯದ ವಿವರ

ಸ್ಥಳ: ದಿ ವಿಲೇಜ್, ಮಲಹೈಡ್, ಡುಬ್ಲಿನ್ (ಐರ್ಲೆಂಡ್)
ಸಮಯ: ರಾತ್ರಿ 8.30 (ಭಾರತೀಯ ಕಾಲಮಾನ)
ಪ್ರಸಾರ: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ (ಎಸ್ ಪಿಎನ್). ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್ ಡಿ (ಇಂಗ್ಲಿಷ್) ಸೋನಿ ಟೆನ್ 3 ಹಾಗೂ ಎಚ್ ಡಿ (ಹಿಂದಿ)
ಎರಡನೆಯ ಪಂದ್ಯ: ಶುಕ್ರವಾರ (ಜೂನ್ 29)

Story first published: Wednesday, June 27, 2018, 12:35 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X