ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಐರ್ಲೆಂಡ್: ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಈ 3 ಆಟಗಾರರಿಗೆ ಅಂತಿಮ ಅವಕಾಶ!

India vs Ireland T20: Last chance for these 3 cricketers to impress selectors for t20 world cup

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಅಂತ್ಯವಾದ ಬಳಿಕ ಈಗ ಭಾರತ ತಂಡ ಐರ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರತ ತಂಡ ಈ ಪ್ರವಾಸವನ್ನು ಕೈಗೊಳ್ಳುತ್ತಿದ್ದು ತಂಡದ ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹಿನ್ನೆಲೆಯಲ್ಲಿ ಆ ಸರಣಿಯಲ್ಲಿ ಭಾಗಿಯಾಗುವ ಆಟಗಾರರ ಐರ್ಲೆಂಡ್ ಸರಣಿಗೆ ಲಭ್ಯವಿಲ್ಲ. ಹೀಗಾಗಿ ಈ ಸರಣಿ ಭಾರತದ ಯುವ ಆಟಗಾರರಿಗೆ ಉತ್ತಮ ಅವಕಾಶ ಎಂದು ಹೇಳಲಾಗುತ್ತಿದ್ದು ಈ ಸರಣಿಯಲ್ಲಿ ಯಾವೆಲ್ಲಾ ಆಟಗಾರರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜನೆಯಾಗಲಿರುವ ಕಾರಣ ಈ ಪ್ರತಿಷ್ಟಿತ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿರುವ ಆಟಗಾರರಿಗೆ ಇದು ಮತ್ತೊಂದು ಅವಕಾಶವಾಗಿದೆ. ಅದರಲ್ಲೂ ಭಾರತ ತಂಡದ ಮೂವರು ಪ್ರತಿಭಾನ್ವಿತ ಆಟಗಾರರಿಗೆ ಐರ್ಲೆಂಡ್ ಪ್ರವಾಸ ಅತ್ಯಂತ ಪ್ರಮುಖವಾಗಿದ್ದು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನಿಡಿದರೆ ಮಾತ್ರವೇ ಟಿ20 ವಿಶ್ವಕಪ್‌ಗೆ ಟಿಕೆಟ್ ಪಡೆಯಲಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್‌ಗೆ ಅವಕಾಶ ಸಿಗುತ್ತಾ? ರಾಹುಲ್ ದ್ರಾವಿಡ್ ಉತ್ತರ

ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್

ಭಾರತ ತಂಡಲ್ಲಿ ಈಗಾಗಲೇ ವಿಕೆಟ್ ಕೀಪರ್ ಬ್ಯಾಟರ್‌ಗಳ ಮಧ್ಯೆ ಪೈಪೋಟಿ ಜೋತಾಗಿ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರತಿಭಾನ್ವುತ ಯುವ ಆಟಗಾರ ಸಂಜು ಸ್ಯಾಮ್ಸನ್ ಕೂಡ ಇದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನಿಡಿ ಮಿಂಚಿದ್ದಾರೆ. ಆದರೆ ಸಂಜು ಅಸ್ಥಿರ ಪ್ರದರ್ಶನ ಅವರಿಗೆ ಹಿನ್ನಡೆಯುಂಟು ಮಾಡಿದೆ. ರಾಷ್ಟ್ರೀಯ ತಂಡದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಂಜು ಹೆಚ್ಚಿನ ಸಂದರ್ಭದಲ್ಲಿ ವಿಫಲವಾಗಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ದೊರೆಯುವ ಅವಕಾಶವನ್ನು ಸಂಜು ಸಮರ್ಥವಾಗಿ ಬಳಸಿಕೊಂಡರೆ ಈ ಪೈಪೋಟಿಯನ್ನು ಮುಂದುವರಿಸುವ ಅವಕಾಶ ದೊರೆಯಲಿದೆ. ಇಲ್ಲವಾದಲ್ಲಿ ಸಂಜು ವಿಶ್ವಕಪ್ ಕನಸನ್ನು ಭಗ್ನಗೊಳಿಸಲಿದ್ದಾರೆ.

ಋತುರಾಜ್ ಗಾಯಕ್ವಾಡ್

ಋತುರಾಜ್ ಗಾಯಕ್ವಾಡ್

ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಪ್ರತಿಭೆ ಎಂಥಾದ್ದು ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಬಿಡಿಸಿ ಹೇಳಬೇಕಿಲ್ಲ. ಕ್ರೀಸ್‌ನಲ್ಲಿ ನೆಲೆಯೂರಿದರೆ ಎದುರಾಳಿ ಎಂಥಾದ್ದೇ ಬೌಲರ್ ಆಗಿದ್ದರೂ ದಂಡಿಸಲು ಋತು ಹಿಂದೇಟು ಹಾಕುವುದಿಲ್ಲ. ಆದರೆ ಭಾರತೀಯ ತಂಡದಲ್ಲಿ ಋತುರಾಜ್ ಗಾಯಕ್ವಾಡ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದು ಬಹಳ ಕಡಿಮೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎಲ್ಲಾ ಪಂದ್ಯದಲ್ಲಿಯೂ ಆಡಿರುವ ಋತು ಒಂದು ಅರ್ಧ ಶತಕವನ್ನು ಮಾತ್ರವೇ ಗಳಿಸಿದರು. ಹೀಗಾಗಿ ಈ ಯುವ ಆಟಗಾರ ಕೂಡ ಐರ್ಲೆಂಡ್ ವಿರುದ್ಧದ ಸರಣಿಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ವೆಂಕಟೇಶ್ ಐಯ್ಯರ್

ವೆಂಕಟೇಶ್ ಐಯ್ಯರ್

2021ರ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನಿಡಿ ಮಿಂಚಿದ್ದ ವೆಂಕಟೇಶ್ ಐಯ್ಯರ್ ನಂತರ ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಭಾರತೀಯ ತಂಡದಲ್ಲಿಯೂ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ವೆಂಕಟೇಶ್ ಐಯ್ಯರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಐಯ್ಯರ್ ಗಮನ ಸೆಳೆಯುವಲ್ಲಿ ವಿಫಲವಾದರು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಅಮೋಘ ಪ್ರದರ್ಶನದೊಂದಿಗೆ ಕಮ್‌ಬ್ಯಾಕ್ ಮಾಡಿದ್ದು ಐರ್ಲೆಂಡ್ ವಿರುದ್ಧದ ಸರಣಿಗೆ ನಾಯಕತ್ವ ಕೂಡ ವಹಿಸಿಕೊಂಡಿದ್ದಾರೆ. ಹೀಗಾಗಿ ವೆಂಕಟೇಶ್ ಐಯ್ಯರ್ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದರೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಜೊತೆಗೆ ಸ್ಥಿರ ಪ್ರದರ್ಶನ ಕೂಡ ನೀಡಬೇಕಿದೆ.

ಟೆಸ್ಟ್ ಸರಣಿ ರೋಹಿತ್ ಪಾಲಿಗೆ ದೊಡ್ಡ ಸವಾಲು | *Cricket | OneIndia Kannada
ಐರ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ತಂಡ ಹೀಗಿದೆ

ಐರ್ಲೆಂಡ್ ಪ್ರವಾಸ ಕೈಗೊಳ್ಳುವ ಭಾರತ ತಂಡ ಹೀಗಿದೆ

ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್

Story first published: Monday, June 20, 2022, 18:06 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X