Ind vs Ire: ಟಿ20 ಸರಣಿಗೂ ಮುನ್ನ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿದ್ದೇನು?

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಕೇವಲ ನೈಸರ್ಗಿಕ ಪ್ರತಿಭೆ ಹೊಂದಿದ್ದ ಅಜಾಗರೂಕ ಆಟಗಾರನಿಂದ ಪ್ರಬುದ್ಧ ನಾಯಕನಾಗಿ ಮಾರ್ಪಾಡಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಐಪಿಎಲ್ 2022 ಪ್ರಾರಂಭವಾಗುವ ಮೊದಲು ಹಾರ್ದಿಕ್ ಪಾಂಡ್ಯ ಭಾರತ ತಂಡದ ಜವಾಬ್ದಾರಿಗಳಿಗಿಂತ ವಿಶ್ವದ ಶ್ರೀಮಂತ ಲೀಗ್‌ನ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಹೀಯಾಳಿಸಲಾಗುತ್ತಿತ್ತು.

ಆದರೆ ಐಪಿಎಲ್ ನಂತರ ಹಾರ್ದಿಕ್ ಪಾಂಡ್ಯ ಅವರ ಪ್ರಬುದ್ಧತೆಗಾಗಿ ವಿಶ್ವದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಜೂನ್ 26ರಿಂದ ಐರ್ಲೆಂಡ್‌ ವಿರುದ್ಧ ಪ್ರಾರಂಭವಾಗುವ ಮುಂಬರುವ ಟಿ20 ಸರಣಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತವನ್ನು ಮುನ್ನಡೆಸಲಿದ್ದಾರೆ.

IND vs SL: ಮಿಂಚಿದ ಜೆಮಿಮಾ, ರಾಧಾ ಯಾದವ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯIND vs SL: ಮಿಂಚಿದ ಜೆಮಿಮಾ, ರಾಧಾ ಯಾದವ್; ಶ್ರೀಲಂಕಾ ವಿರುದ್ಧ ಭಾರತಕ್ಕೆ ಜಯ

ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ ಮತ್ತೊಮ್ಮೆ ಹಾರ್ದಿಕ್ ಪಾಂಡ್ಯರನ್ನು ಶ್ಲಾಘಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, ""ಹಾರ್ದಿಕ್ ಪಾಂಡ್ಯ ತಂಡದಲ್ಲಿ ಕಾಳಜಿಯ ಅಗತ್ಯವಿರುವ ವ್ಯಕ್ತಿಯಿಂದ ಕೇರ್ ಟೇಕರ್ ಆಗಿ ಬೆಳೆದಿದ್ದಾರೆ,'' ಎಂದು ಹೇಳಿದರು.

ಕ್ರಿಕೆಟ್‌ನಲ್ಲಿ ಬಂದಿರುವ ಪ್ರಬುದ್ಧತೆ

ಕ್ರಿಕೆಟ್‌ನಲ್ಲಿ ಬಂದಿರುವ ಪ್ರಬುದ್ಧತೆ

"ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಮತ್ತು ಒಟ್ಟಾರೆ ಅವರ ಕ್ರಿಕೆಟ್‌ನಲ್ಲಿ ಬಂದಿರುವ ಪ್ರಬುದ್ಧತೆಯನ್ನು ನೋಡುವುದು ಖುಷಿಯಾಗುತ್ತದೆ. ಅವರು ತಮ್ಮ ಸ್ವಲ್ಪ ಜವಾಬ್ದಾರಿಯಿಂದ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಈ ಹಿಂದೆ ಅವರು ಸೂಪರ್‌ಸ್ಟಾರ್‌ಗಳ ತಂಡದಲ್ಲಿ ಆಡಿದಾಗ, ಅಂದರೆ, ಮುಂಬೈ ಇಂಡಿಯನ್ಸ್ ಆಗಿರಲಿ ಅಥವಾ ಭಾರತವೇ ಆಗಿರಲಿ ಸೂಪರ್‌ಸ್ಟಾರ್‌ಗಳ ತಂಡದಲ್ಲಿ ಬೆಳೆದಿದ್ದೇನೆ ಎಂದುಕೊಂಡಿದ್ದರು".

"ನಾನು ನನ್ನ ಆಟವನ್ನು ಆಡುತ್ತೇನೆ, ಏಕೆಂದರೆ ಉಳಿದ ಆಟಗಾರರು ನನ್ನನ್ನು ನೋಡಿಕೊಳ್ಳುತ್ತಾರೆ. ನಾನು ವಿಫಲವಾದರೆ ಅವರು ಮುನ್ನಡೆಸುತ್ತಾರೆ," ಎಂದುಕೊಳ್ಳುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ಹೇಳಿದರು.

ಪಾಂಡ್ಯ ತಮ್ಮ ಜವಾಬ್ದಾರಿಯನ್ನು ತಿಳಿದಿದ್ದಾರೆ

ಪಾಂಡ್ಯ ತಮ್ಮ ಜವಾಬ್ದಾರಿಯನ್ನು ತಿಳಿದಿದ್ದಾರೆ

"ಆದರೆ ಹಾರ್ದಿಕ್ ಪಾಂಡ್ಯ ಇದೀಗ ನಾಯಕನಾಗಿ, ಅವರು ತಮ್ಮ ಜವಾಬ್ದಾರಿಯನ್ನು ತಿಳಿದಿದ್ದಾರೆ. ಅವರು ತಮ್ಮ ತಂಡವನ್ನು ತಾನೇ ಮುನ್ನಡೆಸಬೇಕೆಂದು ಅವರಿಗೆ ತಿಳಿದಿದೆ. ಅದು ಅವರನ್ನು ಕ್ರಿಕೆಟಿಗನಾಗಿ ಮಾತ್ರ ಸುಧಾರಿಸಿದೆ ಮತ್ತು ಅದು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದು," ಎಂದು ಮಾಜಿ ಭಾರತೀಯ ಕ್ರಿಕೆಟ್ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.

ಭಾರತ ತಂಡದ ನಾಯಕತ್ವದ ವಿಷಯದಲ್ಲಿ ಬಿಸಿಸಿಐ ಆಯ್ಕೆಗಾರರು ಮುಂದಿನ ಆಯ್ಕೆಗಳನ್ನು ನೋಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹವರು ಟೀಮ್ ಇಂಡಿಯಾದ ಭವಿಷ್ಯದ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

0-2 ರಿಂದ ಹಿನ್ನಡೆಯಲ್ಲಿದ್ದ ನಂತರ 2-2 ರಿಂದ ಸಮಬಲ

0-2 ರಿಂದ ಹಿನ್ನಡೆಯಲ್ಲಿದ್ದ ನಂತರ 2-2 ರಿಂದ ಸಮಬಲ

ದಕ್ಷಿಣ ಆಫ್ರಿಕಾದಲ್ಲಿ ನಡೆದ 3 ಏಕದಿನ ಪಂದ್ಯಗಳ ನಾಯಕತ್ವವನ್ನು ಕೆಎಲ್ ರಾಹುಲ್ ಅವರಿಗೆ ನೀಡಲಾಯಿತು. ಅವರು ದಕ್ಷಿಣ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಬೇಕಾಗಿತ್ತು. ಆದರೆ ಅವರು ಗಾಯದ ಕಾರಣದಿಂದಾಗಿ ಅವರು ಮುನ್ನಡೆಸಲಿಲ್ಲ.

ನಂತರ ರಿಷಭ್ ಪಂತ್ ಅವರನ್ನು ಭಾರತದ ನಾಯಕರನ್ನಾಗಿ ಮಾಡಲಾಯಿತು ಮತ್ತು ಅವರು ಸರಣಿಯಲ್ಲಿ 0-2 ರಿಂದ ಹಿನ್ನಡೆಯಲ್ಲಿದ್ದ ನಂತರ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾದರು. ನಾಯಕತ್ವದಲ್ಲಿ ಅಪಾರ ಪ್ರಬುದ್ಧತೆಯನ್ನು ತೋರಿಸಿದರು. ಇದೀಗ ಎರಡು ಪಂದ್ಯಗಳ ಸರಣಿಯಲ್ಲಿ ಭಾರತದ ಯುವ ತಂಡವನ್ನು ಮುನ್ನಡೆಸುವಾಗ ನಾಯಕನಾಗಿ ಅದ್ಭುತ ಪ್ರದರ್ಶನ ನೀಡುವ ಸರದಿ ಹಾರ್ದಿಕ್ ಪಾಂಡ್ಯ ಅವರದ್ದಾಗಿದೆ.

ಐರ್ಲೆಂಡ್ ವಿರುದ್ಧ ಭಾರತ ತಂಡ

ಐರ್ಲೆಂಡ್ ವಿರುದ್ಧ ಭಾರತ ತಂಡ

ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆರ್. ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 23, 2022, 20:20 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X