ಭಾರತ vs ಲೀಸೆಸ್ಟರ್‌ಶೈರ್: ಕೆಎಸ್ ಭರತ್ ಅಜೇಯ 70, ಭಾರತದ ಅಗ್ರ ಕ್ರಮಾಂಕ ವಿಫಲ

ಇಂಗ್ಲೆಂಡ್ ವಿರುದ್ಧದ ಮರುನಿಗದಿಪಡಿಸಿದ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೌಂಟಿ ತಂಡ ಲೀಸೆಸ್ಟರ್‌ಶೈರ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನ ಭಾರತ ತಂಡವು ಸಾಧಾರಣ ಮೊತ್ತ ಗಳಿಸಿದೆ. ಮಳೆಯಿಂದಾಗಿ ಕೇವಲ 60.2 ಓವರ್‌ಗಳ ಆಟ ಮಾತ್ರ ನಡೆಯಿತು.

ಭಾರತ vs ಲೀಸೆಸ್ಟರ್‌ಶೈರ್: ಅಭ್ಯಾಸ ಪಂದ್ಯ ಎಲ್ಲಿ, ಯಾವಾಗ; ಆನ್‌ಲೈನ್‌ ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?ಭಾರತ vs ಲೀಸೆಸ್ಟರ್‌ಶೈರ್: ಅಭ್ಯಾಸ ಪಂದ್ಯ ಎಲ್ಲಿ, ಯಾವಾಗ; ಆನ್‌ಲೈನ್‌ ಲೈವ್ ಸ್ಟ್ರೀಮಿಂಗ್ ವೀಕ್ಷಣೆ ಹೇಗೆ?

ಭಾರತದ ಪರ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕೆಎಸ್ ಭರತ್ ಅವರ ಅಗತ್ಯ ಅರ್ಧಶತಕದ ನೆರವಿನಿಂದ ಭಾರತವು 8 ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದೆ. ಈ ಅಭ್ಯಾಸ ಪಂದ್ಯದಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್, ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಎದುರಾಳಿ ಲೀಸೆಸ್ಟರ್‌ಶೈರ್ ಪರವಾಗಿ ಕಣಕ್ಕಿಳಿದಿದ್ದರು.

ಗುರುವಾರದಂದು ಸಂಯೋಜಿತ ಲೀಸೆಸ್ಟರ್‌ಶೈರ್ ಮತ್ತು ಇಂಡಿಯಾ XI ವಿರುದ್ಧದ ಅಭ್ಯಾಸ ಪಂದ್ಯವನ್ನು ಕಳಪೆಯಾಗಿ ಆರಂಭಿಸಿದ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು, ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಹೀಗೆ ಆಡಿದರೆ ಸರಣಿ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.

21 ರನ್ ಗಳಿಸಿ ಔಟಾದ ಶುಭ್‌ಮನ್ ಗಿಲ್

21 ರನ್ ಗಳಿಸಿ ಔಟಾದ ಶುಭ್‌ಮನ್ ಗಿಲ್

ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಆರಂಭಿಕ 35 ರನ್ ಜೊತೆಯಾಟ ಹಠಾತ್ತನೆ ಕೊನೆಗೊಂಡಿತು. ಕಿರಿಯ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಅವರು ವಿಲ್ ಡೇವಿಸ್ ಅವರ ಎಸೆತದಲ್ಲಿ 21 ರನ್ ಗಳಿಸಿ ಔಟಾದರು. ಅವರ ಕ್ಯಾಚ್ ಅನ್ನು ವಿಕೆಟ್ ಕೀಪರ್ ರಿಷಭ್ ಪಂತ್ ಪಡೆದರು.

ಲೀಸೆಸ್ಟರ್‌ನಲ್ಲಿ ಭಾರತದ ವಿಕೆಟ್‌ಗಳು ಪತನಗೊಳ್ಳುತ್ತಲೇ ಇದ್ದವು. ಮೂರು ಪ್ರಮುಖ ಭಾರತ ಬ್ಯಾಟರ್‌ಗಳು ತ್ವರಿತವಾಗಿ ನಿರ್ಗಮಿಸಿದರು. ನಾಯಕ ರೋಹಿತ್ ಶರ್ಮಾ (25), ಹನುಮ ವಿಹಾರಿ (3) ಮತ್ತು ಶ್ರೇಯಸ್ ಅಯ್ಯರ್ (0) ಬೇಗನೆ ಗಿಲ್‌ರನ್ನು ಅನುಸರಿಸಿದರು.

ವಿಲ್ ಡೇವಿಸ್ ಮತ್ತು ರೋಮನ್ ವಾಕರ್ ಮಾರಕ ಬೌಲಿಂಗ್

ವಿಲ್ ಡೇವಿಸ್ ಮತ್ತು ರೋಮನ್ ವಾಕರ್ ಮಾರಕ ಬೌಲಿಂಗ್

ಇದೇ ಆಲ್‌ರೌಂಡರ್ ರವೀಂದ್ರ ಜಡೇಜಾ (13) ಕೂಡ ಬೆಳಗಿನ ಅವಧಿಯಲ್ಲಿ ಔಟಾದ ಐದನೇ ಬ್ಯಾಟರ್ ಆಗಿದ್ದು, ಊಟದ ವೇಳೆಗೆ ಭಾರತ 90/5 ಗಳಿಸಿತ್ತು. ಲೀಸೆಸ್ಟರ್‌ಶೈರ್ ವೇಗಿಗಳಾದ ವಿಲ್ ಡೇವಿಸ್ ಮತ್ತು ರೋಮನ್ ವಾಕರ್ ಅವರ ದಾಳಿಗೆ ಭಾರತದ ಅಗ್ರ ಕ್ರಮಾಂಕದ ದಾಂಡಿಗರು ತರಗಲೆಗಳಂತೆ ಉರುಳಿದರು.

ಮಾಝಿ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೀಕಾರ್ ಭರತ್ ಮಧ್ಯಾಹ್ನದ ನಂತರ 57 ರನ್‌ಗಳ ಜೊತೆಯಾಟದೊಂದಿಗೆ ಆರಂಭದಲ್ಲಿ ಭಾರತಕ್ಕೆ ಆಗಿದ್ದ ಹಾನಿಯನ್ನು ಸರಿಪಡಿಸುವ ಪ್ರಯತ್ನ ಮಾಡಿದರು.

Ind vs Eng: ಭಾರತ ವಿರುದ್ಧ ಆಡಲಿದ್ದಾರೆ ಪೂಜಾರ, ಪಂತ್, ಬುಮ್ರಾ, ಪ್ರಸಿದ್ಧ್ ಕೃಷ್ಣ!

69 ಎಸೆತಗಳಲ್ಲಿ 33 ರನ್ ಬಾರಿಸಿದ ವಿರಾಟ್ ಕೊಹ್ಲಿ

69 ಎಸೆತಗಳಲ್ಲಿ 33 ರನ್ ಬಾರಿಸಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರ 33 ರನ್ 69 ಎಸೆತಗಳಲ್ಲಿ ಬಂದವು ಮತ್ತು ಪ್ರಸಿದ್ಧ್ ಕೃಷ್ಣ ಅವರ ಓವರ್‌ನಲ್ಲಿ ಒಂದು ದೊಡ್ಡ ಸಿಕ್ಸರ್ ಸೇರಿದಂತೆ ಐದು ಬೌಂಡರಿಗಳನ್ನು ಬಾರಿಸಿದರು. ಲೀಸೆಸ್ಟರ್‌ಶೈರ್ ಮಾಜಿ ನಾಯಕ ರೋಮನ್ ವಾಕರ್ ಅವರ ಓವರ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಕೆಎಸ್ ಭರತ್ ಅವರ ಸಮಯೋಚಿತ ಅರ್ಧಶತಕದೊಂದಿಗೆ ಮೊದಲ ಬಾರಿಗೆ ಭಾರತದ ಟೆಸ್ಟ್ ಕ್ಯಾಪ್‌ಗಾಗಿ ತಮ್ಮನ್ನು ಸಾಬೀತುಪಡಿಸಿಕೊಂಡರು ಅಲ್ಲದೇ, ಭಾರತದ ಪರವಾಗಿ ಅಗ್ರ ಸ್ಕೋರ್ ಮಾಡಿದರು.

ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿರುವ ಕೆಎಸ್ ಭರತ್

ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿರುವ ಕೆಎಸ್ ಭರತ್

28 ವರ್ಷ ವಯಸ್ಸಿನ ವಿಕೆಟ್‌ಕೀಪರ್-ಬ್ಯಾಟರ್ ಕೆಎಸ್ ಭರತ್ ಮೂರು ವರ್ಷಗಳಿಂದ ವೈಟ್-ಬಾಲ್ ಮತ್ತು ರೆಡ್-ಬಾಲ್ ಕ್ರಿಕೆಟ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾರೆ.

ಜಸ್ಪ್ರೀತ್ ಬುಮ್ರಾ ಒಂಬತ್ತು ಓವರ್‌ಗಳನ್ನು ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯದಿದ್ದರೂ, ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ಆದರೆ ಪ್ರಸಿದ್ಧ್ ಕೃಷ್ಣ ಉತ್ತಮ ಓವರ್‌ಗಳ ಮಾಡುವುದರ ಜೊತೆಗೆ ಶ್ರೇಯಸ್ ಅಯ್ಯರ್ ಅವರ ವಿಕೆಟ್ ಪಡೆದರು. ಎರಡನೇ ದಿನಾದಾಟ ಶುಕ್ರವಾರವೂ ಮುಂದುವರೆಯಲಿದೆ. ಕೆಎಸ್ ಭರತ್ ಅಜೇಯ 70 ಮತ್ತು ಮೊಹಮ್ಮದ್ ಶಮಿ 18 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 24, 2022, 9:00 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X