ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಜಡ್ಡು, ಅಯ್ಯರ್ ಅರ್ಧಶತಕ, ಲೀಸೆಸ್ಟರ್‌ಶೈರ್‌ ವಿರುದ್ಧ ಭಾರತಕ್ಕೆ 366ರನ್‌ಗಳ ಮುನ್ನಡೆ

India

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೂ ಮುನ್ನ ಲೀಸೆಸ್ಟರ್‌ಶೈರ್‌ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ 366ರನ್‌ಗಳ ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಮೂರನೇ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 364ರನ್ ಕಲೆಹಾಕಿದ್ದು, 366ರನ್‌ಗಳ ಮುನ್ನಡೆ ಸಾಧಿಸಿದೆ.

ಮೂರನೇ ದಿನದಾಟದಲ್ಲಿ ಭರ್ಜರಿ ಆಟವಾಡಿದ ಟೀಂ ಇಂಡಿಯಾದ ಬ್ಯಾಟರ್‌ಗಳು ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಅಂತಿಮ ದಿನದಾಟದಲ್ಲಿ ಉತ್ತಮ ಟಾರ್ಗೆಟ್ ಹೊಂದಿದೆ.

ಅಯ್ಯರ್, ಜಡೇಜಾ ಅರ್ಧಶತಕ

ಅಯ್ಯರ್, ಜಡೇಜಾ ಅರ್ಧಶತಕ

ರಣಜಿ ಫೈನಲ್: ರಜತ್ ಪಾಟೀದಾರ್ ಶತಕ, ಮುಂಬೈ ವಿರುದ್ಧ ಮಧ್ಯಪ್ರದೇಶ ಮೇಲುಗೈ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಟೀಂ ಇಂಡಿಯಾಗೆ ಆಧಾರವಾಗುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ಕಾರಣರಾದ್ರು. ಮೂರನೇ ದಿನದಾಟಕ್ಕೆ ಅಜೇಯ 31 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ಭರತ್ ಇನ್ನಿಂಗ್ಸ್‌ 43ರನ್‌ಗಳಿಗೆ ಕೊನೆಗೊಂಡಿತು. ಇದಕ್ಕೂ ಮೊದಲು ಹನುಮ ವಿಹಾರಿ 20ರನ್‌ಗೆ ಗಂಟು ಮೂಟೆ ಕಟ್ಟಿದ್ರು.

ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ದೃಢವಾಗಿ ನಿಂತ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾದ್ರು. 89 ಎಸೆತಗಳಲ್ಲಿ 62 ರನ್ ಕಲೆಹಾಕಿ ಔಟಾದ್ರೆ, ರವೀಂದ್ರ ಜಡೇಜಾ 77 ಎಸೆತಗಳಲ್ಲಿ ಅಜೇಯ 56ರನ್ ಕಲೆಹಾಕಿದ್ದಾರೆ.

ರಣಜಿ ಫೈನಲ್: ರಜತ್ ಪಾಟೀದಾರ್ ಶತಕ, ಮುಂಬೈ ವಿರುದ್ಧ ಮಧ್ಯಪ್ರದೇಶ ಮೇಲುಗೈ

ಏಳನೇ ಕ್ರಮಾಂಕದಲ್ಲಿ ಅರ್ಧಶತಕ ದಾಖಲಿಸಿದ ಕೊಹ್ಲಿ

ಏಳನೇ ಕ್ರಮಾಂಕದಲ್ಲಿ ಅರ್ಧಶತಕ ದಾಖಲಿಸಿದ ಕೊಹ್ಲಿ

ಫಾರ್ಮ್ ವೈಫಲ್ಯದಿಂದ ಕಂಗಾಲಾಗಿರುವ ವಿರಾಟ್ ಕೊಹ್ಲಿ ಭಾರತ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧಶತಕ ದಾಖಲಿಸಿದ್ರು. 98 ಎಸೆತಗಳಲ್ಲಿ 67ರನ್ ಸಿಡಿಸಿದ್ದ ಕೊಹ್ಲಿ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು. ಕೊಹ್ಲಿ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು.

ಕೊಹ್ಲಿಗೂ ಮುಂಚೆ ಕಣಕ್ಕಿಳಿದಿದ್ದ ಪೂಜಾರ ಇನ್ನಿಂಗ್ಸ್ ಕೇವಲ 22ರನ್‌ಗೆ ಮುಕ್ತಾಯಗೊಂಡಿದ್ದು ಬೇಸರ ತರಿಸಿತು. ಏಕೆಂದರೆ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ ಶೂನ್ಯಕ್ಕೆ ಶಮಿಗೆ ವಿಕೆಟ್ ಒಪ್ಪಿಸಿದ್ದರು.

ENG vs NZ: ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಮ್ ಗಿಲ್‌ಕ್ರಿಸ್ಟ್‌ ದಾಖಲೆ ಸರಿಗಟ್ಟಿದ ಬೆನ್ ಸ್ಟೋಕ್ಸ್

ಬೌಲಿಂಗ್‌ನಲ್ಲಿ ಮಿಂಚಿದ ನವದೀಪ್ ಸೈನಿ

ಬೌಲಿಂಗ್‌ನಲ್ಲಿ ಮಿಂಚಿದ ನವದೀಪ್ ಸೈನಿ

ಇನ್ನು ಲೀಸೆಸ್ಟರ್‌ಶೈರ್‌ ಪರ ಬೌಲಿಂಗ್ ಮಿಂಚಿದ ನವದೀಪ್ ಸೈನಿ ಮೂರು ವಿಕೆಟ್ ಕಬಳಿಸಿ ಮಿಂಚಿದ್ರು. ಇದೇ ವೇಳೆಯಲ್ಲಿ ಯುವ ವೇಗದ ಬೌಲರ್ ಕಮಲೇಶ್ ನಾಗರಕೋಟಿ ಎರಡು ವಿಕೆಟ್ ಪಡೆದು ಗಮನಸೆಳೆದರು. ಅಂತಿಮ ದಿನದಾಟದಲ್ಲಿ ರವೀಂದ್ರ ಜಡೇಜಾ ಜೊತೆಗೆ ಸಿರಾಜ್ ಬ್ಯಾಟ್ ಬೀಸಲಿದ್ದು, ರೋಹಿತ್ ಶರ್ಮಾ ಬ್ಯಾಟಿಂಗ್ ಬರುತ್ತಾರ? ಅಥವಾ ಡಿಕ್ಲೇರ್ ಮಾಡಿಕೊಂಡು 366ರನ್‌ಗಳ ಲೀಡ್ ಅನ್ನು ಡಿಫೆಂಡ್ ಮಾಡಿಕೊಳ್ತಾರ ಕಾದುನೋಡಬೇಕಿದೆ.

Story first published: Saturday, June 25, 2022, 23:42 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X