ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

India face a huge problem prior first test match | Oneindia Kannada
India vs New Zealand: 0,0,1 - Big problem for India ahead of Test series

ಹ್ಯಾಮಿಲ್ಟನ್, ಫೆಬ್ರವರಿ 14: ಕಳೆದ 12 ತಿಂಗಳಿನಿಂದಲೂ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರಮ್ಯ ಮೆರೆಯುತ್ತಲೇ ಬಂದಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ವಿರಾಟ್ ಕೊಹ್ಲಿ ಪಡೆ ಭರ್ಜರಿ ಮುನ್ನಡೆಯಲ್ಲಿದೆ. ಅಂಕಪಟ್ಟಿಯಲ್ಲಿ ಭರ್ಜರಿ 360 ಪಾಯಿಂಟ್ ಕಲೆ ಹಾಕಿ ನಂ.1 ಸ್ಥಾನದಲ್ಲಿದೆ. ಆದರೆ ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ ತಂಡ ಟೆಸ್ಟ್ ಸರಣಿ ನಿಟ್ಟಿನಲ್ಲಿ ದೊಡ್ಡ ಸಮಸ್ಯೆಯ ಸುಳಿಯಲ್ಲಿದೆ.

ಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿಐಪಿಎಲ್ 2020ಕ್ಕೆ ನೂತನ ಲೋಗೋ ಬಿಡುಗಡೆಗೊಳಿಸಿದ ಆರ್‌ಸಿಬಿ

ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ, ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿತ್ತು. ಇದರಲ್ಲಿ ಟಿ20 ಸರಣಿಯಲ್ಲಿ ಭಾರತ, ಕಿವೀಸನ್ನು 5-0ಯಿಂದ ಕ್ಲೀನ್‌ ಸ್ವೀಪ್‌ಗೊಳಿಸಿದ್ದರೆ, ಏಕದಿನ ಸರಣಿಯಲ್ಲಿ ಕಿವೀಸ್ ಭಾರತಕ್ಕೆ ವೈಟ್‌ ವಾಷ್ ಮುಖಭಂಗ ಅನುಭವಿಸುವಂತೆ ಮಾಡಿತ್ತು.

ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್-ಕೈಲಿ ದಾಂಪತ್ಯ ಬದುಕು ಅಂತ್ಯಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್-ಕೈಲಿ ದಾಂಪತ್ಯ ಬದುಕು ಅಂತ್ಯ

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲೂ ಸೋಲುವ ಭೀತಿಯೀಗ ಭಾರತವನ್ನಾವರಿಸಿದೆ. ಇದಕ್ಕೆ ಒಂದಿಷ್ಟು ಕಾರಣಗಳು ಇಲ್ಲಿವೆ.

ರೋಹಿತ್, ಧವನ್‌ಗೆ ಗಾಯ

ರೋಹಿತ್, ಧವನ್‌ಗೆ ಗಾಯ

ಕಿವೀಸ್ ಎದುರಿನ ಏಕದಿನ ಸರಣಿಯಲ್ಲಿ ಭಾರತದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ಆಡಿರಲಿಲ್ಲ. ಇಬ್ಬರೂ ಗಾಯಕ್ಕೀಡಾಗಿದ್ದರಿಂದ ಸರಣಿಯಲ್ಲಿ ಆಡಲಾಗಿರಲಿಲ್ಲ. ಟೆಸ್ಟ್ ಸರಣಿಯಲ್ಲೂ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾಗೆ ಆಡಲಾಗುತ್ತಿಲ್ಲ.

ಆರಂಭಿಕ ಬ್ಯಾಟಿಂಗ್ ವೈಫಲ್ಯ

ಆರಂಭಿಕ ಬ್ಯಾಟಿಂಗ್ ವೈಫಲ್ಯ

ಸದ್ಯ ನ್ಯೂಜಿಲೆಂಡ್ XI ಮತ್ತು ಭಾರತ ತಂಡಗಳು ಹ್ಯಾಮಿಲ್ಟನ್‌ನಲ್ಲಿ 3 ದಿನಗಳ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿದೆ. 78.5 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 263 ರನ್ ಪೇರಿಸಿ ಇನ್ನಿಂಗ್ಸ್‌ ಮುಗಿಸಿದೆ. ಅದರಲ್ಲೂ ಆರಂಭಿಕ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಳ್ಳುವಾಗ ಭಾರತದ ಖಾತೆಯಲ್ಲಿ 40 ರನ್‌ ಕೂಡ ಇರಲಿಲ್ಲ.

38 ರನ್‌ಗೆ 4 ವಿಕೆಟ್‌ ಪತನ

38 ರನ್‌ಗೆ 4 ವಿಕೆಟ್‌ ಪತನ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, 0 ರನ್‌ಗೆ 1ನೇ ವಿಕೆಟ್‌ (ಪೃಥ್ವಿ ಶಾ, 0 ರನ್), 5 ರನ್‌ಗೆ 2ನೇ ವಿಕೆಟ್ (ಮಯಾಂಕ್ ಅಗರ್ವಾಲ್, 1), 5 ರನ್‌ಗೆ 3ನೇ ವಿಕೆಟ್ (ಶುಭ್‌ಮಾನ್‌ ಗಿಲ್, 0), 38 ರನ್‌ಗೆ 4ನೇ ವಿಕೆಟ್ (ಅಜಿಂಕ್ಯ ರಹಾನೆ, 18) ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.

ಶತಕ ಬಾರಿಸಿದ ವಿಹಾರಿ ರಿಟೈರ್ಡ್ ಔಟ್

ಶತಕ ಬಾರಿಸಿದ ವಿಹಾರಿ ರಿಟೈರ್ಡ್ ಔಟ್

ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದು ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ಮಾತ್ರ. ಪೂಜಾರ 93 ರನ್ ಗಳಿಸಿ ಔಟಾದರೆ, ವಿಹಾರಿ 101 ರನ್ ಬಾರಿಸಿ ರಿಟೈರ್ಡ್ ಔಟ್ ಆದರು. ಉಳಿದ ಯಾವ ಬ್ಯಾಟ್ಸ್‌ಮನ್ ಕೂಡ 20ಕ್ಕೂ ಹೆಚ್ಚಿನ ರನ್‌ ಗಳಿಸದೆ ನೀರಸ ಬ್ಯಾಟಿಂಗ್‌ಗೆ ಸಾಕ್ಷಿ ಹೇಳಿದರು.

Story first published: Friday, February 14, 2020, 13:20 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X