ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಟೆಸ್ಟ್‌: ನ್ಯೂಜಿಲೆಂಡ್ 296 ರನ್‌ಗಳಿಗೆ ಆಲೌಟ್‌, ಕಿವೀಸ್‌ಗೆ 49 ರನ್‌ಗಳ ಹಿನ್ನಡೆ

Newzealand allout

ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ 296 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ಕಿವೀಸ್ ಪಡೆ ಮೊದಲ ಇನ್ನಿಂಗ್ಸ್‌ 49 ರನ್‌ಗಳ ಹಿನ್ನಡೆ ಕಂಡಿದೆ.

ಎರಡನೇ ದಿನದಾಟದಲ್ಲಿ ಪಾರುಪತ್ಯ ಮೆರೆದಿದ್ದ ಕಿವೀಸ್ ಬ್ಯಾಟ್ಸ್‌ಮನ್‌ಗಳು ಮೂರನೇ ದಿನದಾಟದಲ್ಲಿ ಭಾರತದ ಸ್ಪಿನ್ನರ್‌ಗಳ ಎದುರು ಪತರುಗುಟ್ಟಿದ್ದರು. ಅಕ್ಷರ್‌ ಪಟೇಲ್ ಮಾರಕ ಸ್ಪಿನ್‌ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಕಿವೀಸ್ ಬ್ಯಾಟ್ಸ್‌ಮನ್ ಪಟೇಲ್ ಸ್ಪಿನ್ ಮೋಡಿ ಅರಿಯದೆ ವಿಕೆಟ್ ಒಪ್ಪಿಸಿದ್ರು.

ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್‌ 345ರನ್‌ಗಳಿಗೆ ಉತ್ತರವಾಗಿ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್ ಎರಡನೇ ದಿನದಾಟದಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ 129 ರನ್ ಗಳಿಸಿತ್ತು. ಓಪನರ್‌ಗಳಾದ ಟಾಮ್ ಲಥಾಮ್ ಮತ್ತು ವಿಲ್ ಯಂಗ್ ಎರಡನೇ ದಿನದಾಟದಲ್ಲಿ ಜೊತೆಯಾಟವನ್ನ ಮುಂದುವರಿಸಿದ್ರು.

ಶತಕದತ್ತ ಹೆಜ್ಜೆಯಿಟ್ಟಿದ್ದ ವಿಲ್ ಯಂಗ್ ವಿಕೆಟ್ ಪಡೆದ ಅಶ್ವಿನ್

ಶತಕದತ್ತ ಹೆಜ್ಜೆಯಿಟ್ಟಿದ್ದ ವಿಲ್ ಯಂಗ್ ವಿಕೆಟ್ ಪಡೆದ ಅಶ್ವಿನ್

ಬಹಳ ಸೊಗಸಾಗಿ ಇನ್ನಿಂಗ್ಸ್‌ ಕಟ್ಟಿ ಶತಕದತ್ತ ಹೆಜ್ಜೆಯಿಟ್ಟಿದ್ದ ವಿಲ್ ಯಂಗ್ 66.1ನೇ ಓವರ್‌ನಲ್ಲಿ ರವಿಚಂದ್ರನ್ ಸ್ಪಿನ್‌ ದಾಳಿಯಲ್ಲಿ ಬದಲಿ ವಿಕೆಟ್ ಕೀಪರ್ ಕೆ.ಎಸ್ ಭರತ್‌ಗೆ ಕ್ಯಾಚಿತ್ತು ಬಹಳ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು. 214 ಎಸೆತಗಳಲ್ಲಿ 89ರನ್ ಕಲೆಹಾಕಿದ್ದ ವಿಲ್ ಯಂಗ್ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು.

ತಂಡಕ್ಕೆ ನೆರವಾಗದ ಕೇನ್ ವಿಲಿಯಮ್ಸನ್

ತಂಡಕ್ಕೆ ನೆರವಾಗದ ಕೇನ್ ವಿಲಿಯಮ್ಸನ್

ಮೊದಲ ವಿಕೆಟ್‌ಗೆ 151ರನ್‌ಗಳ ಜೊತೆಯಾಟ ಕೊನೆಗೊಂಡ ಬಳಿಕ ಕ್ರೀಸ್‌ಗಿಳಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ ತಾಳ್ಮೆಯ ಆರಂಭ ಪಡೆದರೂ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲಗೊಂಡ್ರು. ಉಮೇಶ್ ಯಾದವ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದ ವಿಲಿಯಮ್ಸನ್ ರಿವೀವ್ ತೆಗೆದುಕೊಂಡ್ರು ಉಳಿಯಲಿಲ್ಲ. 18ರನ್‌ಗೆ ತಮ್ಮ ಇನ್ನಿಂಗ್ಸ್‌ ಮುಗಿಸಿದ್ರು.

1 ರನ್‌ಗೆ ಔಟಾಗಿದ್ದ ಸಾಹ 3ನೇ ದಿನ ವಿಕೆಟ್ ಕೀಪಿಂಗ್ ಮಾಡಲು ಕಣಕ್ಕಿಳಿಯಲಿಲ್ಲ: ಕಾರಣ ಏನು?

ಅನುಭವಿ ರಾಸ್‌ ಟೇಲರ್‌ಗೆ ಪೆವಿಲಿಯನ್ ತೋರಿಸಿದ ಅಕ್ಷರ್ ಪಟೇಲ್

ಅನುಭವಿ ರಾಸ್‌ ಟೇಲರ್‌ಗೆ ಪೆವಿಲಿಯನ್ ತೋರಿಸಿದ ಅಕ್ಷರ್ ಪಟೇಲ್

ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲಗೊಂಡ ಬಳಿಕ, ಅನುಭವಿ ಬ್ಯಾಟ್ಸ್‌ಮನ್ ರಾಸ್‌ ಟೇಲರ್ ತಂಡಕ್ಕೆ ನೆರವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದ್ರೆ ಅಕ್ಷರ್ ಪಟೇಲ್ ಸ್ಪಿನ್‌ದಾಳಿಗೆ , ವಿಕೆಟ್ ಕೀಪರ್ ಕೆ.ಎಸ್‌ ಭರತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಅಕ್ಷರ್ ಪಟೇಲ್ ಅಬ್ಬರ, ಐದು ವಿಕೆಟ್ ಗೊಂಚಲು

ಅಕ್ಷರ್ ಪಟೇಲ್ ಅಬ್ಬರ, ಐದು ವಿಕೆಟ್ ಗೊಂಚಲು

ಮೊದಲ ವಿಕೆಟ್ ಪಡೆದ ಅಕ್ಷರ್‌ ಪಟೇಲ್ ಅಬ್ಬರ ಅಷ್ಟಕ್ಕೆ ಮುಗಿಯಲಿಲ್ಲ, ನ್ಯೂಜಿಲೆಂಡ್ ಒಂದೊಂದೇ ವಿಕೆಟ್ ಕಬಳಿಸುತ್ತಾ ಹೋದ ಅಕ್ಷರ್ ಪಟೇಲ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದನೇ ಬಾರಿಗೆ ಐದು ವಿಕೆಟ್ ಪಡೆದು ಮಿಂಚಿದ್ರು. ಹೆನ್ರಿ ನಿಕೋಲ್ಸ್ (2), ಶತಕ ಗಡಿಯಲ್ಲಿ ಮುಗ್ಗರಿಸಿದ ಟಾಮ್ ಲಥಾಮ್ (95), ಟಾಮ್ ಬ್ಲಂಡೆಲ್ (13), ಟಿಮ್ ಸೌಥಿ (5) ರನ್‌ ಗಳಿಸಿ ಅಕ್ಷರ್‌ಗೆ ವಿಕೆಟ್ ಒಪ್ಪಿಸಿದ್ರು.

ಇದರ ನಡುವೆ ರವೀಂದ್ರ ಜಡೇಜಾ ಭಾರತೀಯ ಮೂಲದ ರಚಿನ್ ರವೀಂದ್ರಾರನ್ನ (13) ಕ್ಲೀನ್ ಬೌಲ್ಡ್‌ ಮಾಡುವಲ್ಲಿ ಯಶಸ್ವಿಯಾದ್ರು. ರವಿಚಂದ್ರನ್ ಅಶ್ವಿನ್ 23ರನ್‌ಗಳಿಸಿದ್ದ ಕೈಲ್ ಜೇಮಿಸನ್ ವಿಕೆಟ್ ಪಡೆಯುವ ಮೂಲಕ ಎರಡನೇ ವಿಕೆಟ್ ಪಡೆದ್ರು. ಅಂತಿಮವಾಗಿ ಸೋಮರ್ವಿಲ್ಲೆ ಕೂಡ ಔಟಾಗುವ ಮೂಲಕ ಅಶ್ವಿನ್‌ಗೆ ಮೂರನೇ ವಿಕೆಟ್ ನೀಡಿದ್ರು.

ಈ ಮೂಲಕ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪಡೆಯನ್ನ 296 ರನ್‌ಗಳಿಗೆ ಕಟ್ಟಿ ಹಾಕುವ ಮೂಲಕ 49 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ನನ್ನ ಸೋದರಿ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದಾರೆ; ಕಾನ್ಪುರ ಟೆಸ್ಟ್ ವೇಳೆ ವೈರಲ್ ಆದವನ ವ್ಯಥೆ!

ಮೊದಲ 4 ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ 5 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್

ಮೊದಲ 4 ಟೆಸ್ಟ್ ಪಂದ್ಯಗಳಲ್ಲಿ 5 ಬಾರಿ 5 ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್

ಐದು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಕಂಟಕನಾದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ನಾಲ್ಕು ಟೆಸ್ಟ್‌ಗಳಲ್ಲಿ ಐದು ಬಾರಿ ಐದು ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್ ಆಗಿದ್ದಾರೆ. ಈ ಮೂಲಕ ಲೆಜೆಂಡರಿ ಪ್ಲೇಯರ್ಸ್ ಟಾಮ್ ರಿಚರ್ಡ್‌ಸನ್, ರೊಡ್ನಿ ಹಾಗ್ ಜೊತೆಗೆ ದಾಖಲೆ ಹಂಚಿಕೊಂಡಿದ್ದಾರೆ. ಚಾರ್ಲಿ ಟರ್ನರ್ ಆರು ಬಾರಿ ಈ ಸಾಧನೆ ಮಾಡಿದ್ರು.

ಎರಡನೇ ಇನ್ನಿಂಗ್ಸ್‌ ಆರಂಭದಲ್ಲೇ ಭಾರತಕ್ಕೆ ವಿಘ್ನ, ಶುಭ್ಮನ್ ಗಿಲ್ ಔಟ್

ಎರಡನೇ ಇನ್ನಿಂಗ್ಸ್‌ ಆರಂಭದಲ್ಲೇ ಭಾರತಕ್ಕೆ ವಿಘ್ನ, ಶುಭ್ಮನ್ ಗಿಲ್ ಔಟ್

ನ್ಯೂಜಿಲೆಂಡ್ ತಂಡವನ್ನ 296 ರನ್‌ಗಳಿಗೆ ಆಲೌಟ್‌ ಮಾಡಿದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಡಿದ್ದ ಶುಭ್ಮನ್ ಗಿಲ್ ಕೇವಲ 1ರನ್‌ಗೆ ಕೈಲ್ ಜೇಮಿಸನ್‌ಗೆ ಬೌಲ್ಡ್‌ ಆಗಿದ್ದಾರೆ. ಮೂರನೇ ದಿನದಾಟದಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್‌ 1 ವಿಕೆಟ್ ನಷ್ಟಕ್ಕೆ 14 ರನ್‌ಗಳಿಸಿದೆ. ಈ ಮೂಲಕ 69 ರನ್‌ಗಳ ಮುನ್ನಡೆ ಪಡೆದಿದೆ.

ನ್ಯೂಜಿಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಕೈಲ್ ಜೇಮಿಸನ್, ಕಿವೀಸ್ ಪರ ಅತ್ಯಂತ ವೇಗವಾಗಿ 50 ವಿಕೆಟ್ ಕಬಳಿಸಿದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ಪರ ವೇಗವಾಗಿ 50 ವಿಕೆಟ್ ಪಡೆದ ಬೌಲರ್ಸ್‌ ಮಾಹಿತಿ ಈ ಕೆಳಗಿದೆ.

ಕೈಲ್ ಜೇಮಿಸನ್ 9 ಪಂದ್ಯಗಳು
ಶೇನ್ ಬಾಂಡ್ 12 ಪಂದ್ಯಗಳು
ಕ್ರಿಸ್ ಮಾರ್ಟಿನ್ 13 ಪಂದ್ಯಗಳು

Story first published: Saturday, November 27, 2021, 17:11 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X