ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಶುಭ್ಮನ್, ಶ್ರೇಯಸ್, ಜಡ್ಡು ಅರ್ಧಶತಕ, ಮೊದಲ ದಿನಕ್ಕೆ ಭಾರತ 258/4

TEAM India

ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 258 ರನ್ ದಾಖಲಿಸಿದೆ.

ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಹೊಸ ಓಪನಿಂಗ್ ಜೋಡಿ ಮಯಾಂಕ್ ಅಗರ್ವಾಲ್ ಮತ್ತು ಶುಭ್ಮನ್ ಗಿಲ್‌ ಕಣಕ್ಕಿಳಿದರು. ಭಾರತವು ಉತ್ತಮ ಆರಂಭದ ಆಸೆಯೊಂದಿಗೆ ಇನ್ನಿಂಗ್ಸ್ ಆರಂಭಿಸಿತು. ಆದರೆ ಮೊದಲ ಸೆಷನ್‌ನಲ್ಲೇ ಟೀಂ ಇಂಡಿಯಾ ಮೊದಲ ವಿಕೆಟ್‌ ಕಳೆದುಕೊಂಡಿತು.

13ರನ್‌ಗೆ ಮುಗ್ಗರಿಸಿದ ಮಯಾಂಕ್ ಅಗರ್ವಾಲ್

13ರನ್‌ಗೆ ಮುಗ್ಗರಿಸಿದ ಮಯಾಂಕ್ ಅಗರ್ವಾಲ್

ಕೈಲ್ ಜೇಮಿಸನ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ 13 ರನ್‌ಗಳಿಸಿದ್ದಾಗ ಔಟ್‌ಸೈಟ್ ಎಡ್ಜ್ ಆಗಿ ವಿಕೆಟ್ ಕೀಪರ್ ಟಾಮ್ ಬ್ಲಂಡೆಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. ಎರಡು ಬೌಂಡರಿ ಸಿಡಿಸಿ ಆತ್ಮವಿಶ್ವಾದಲ್ಲೇ ಆಡ್ತಿದ್ದ ಮಯಾಂಕ್ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡ್ರು.

ಶುಭ್ಮನ್ ಗಿಲ್ ಅರ್ಧಶತಕದ ಕೊಡುಗೆ, ಖೆಡ್ಡಾ ತೋಡಿದ ಕೈಲ್ ಜೇಮಿಸನ್

ಶುಭ್ಮನ್ ಗಿಲ್ ಅರ್ಧಶತಕದ ಕೊಡುಗೆ, ಖೆಡ್ಡಾ ತೋಡಿದ ಕೈಲ್ ಜೇಮಿಸನ್

ಭಾರತದ ಯುವ ಸ್ಟಾರ್ ಆಟಗಾರ ಓಪನರ್ ಶುಭ್ಮನ್ ಗಿಲ್ ಮೊದಲ ವಿಕೆಟ್ ಬೇಗನೆ ಉರುಳಿದರೂ, ಅತ್ಯಂತ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದರು. 93 ಎಸೆತಗಳಲ್ಲಿ 52 ರನ್ ಕಲೆಹಾಕಿದ ಶುಭ್ಮನ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಮತ್ತು ಒಂದು ಆಕರ್ಷಕ ಸಿಕ್ಸರ್ ಇತ್ತು.

ಊಟದ ವಿರಾಮದವರೆಗೆ ಭಾರತ ಕೇವಲ ಒಂದು ವಿಕೆಟ್ ಕಳೆದುಕೊಂಡಿತ್ತು. ಆದರೆ ವಿರಾಮದ ಬಳಿಕ ಮೊದಲ ಓವರ್‌ನಲ್ಲೇ ಕೈಲ್ ಜೇಮಿಸನ್ ಲೆಂಥ್ ಬಾಲ್‌ಗೆ ಅರ್ಧಶತಕ ಸಿಡಿಸಿದ್ದ ಶುಭ್ಮನ್ ಕ್ಲೀನ್ ಬೌಲ್ಡ್ ಆದ್ರು.

ಪೂಜಾರನನ್ನ ಪೆವಿಲಿಯನ್‌ಗೆ ಅಟ್ಟಿದ ಸೌಥಿ

ಪೂಜಾರನನ್ನ ಪೆವಿಲಿಯನ್‌ಗೆ ಅಟ್ಟಿದ ಸೌಥಿ

ಟೀಂ ಇಂಡಿಯಾದ ಗೋಡೆ, ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಟೀಂ ಇಂಡಿಯಾವನ್ನ ಉತ್ತಮ ರನ್‌ಗಳತ್ತ ಮುನ್ನೆಡೆಸುವಲ್ಲಿ ವಿಫಲಗೊಂಡ್ರು. ಶುಭ್ಮನ್ ಔಟಾದ ಕೆಲವೇ ಓವರ್‌ಗಳಲ್ಲಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು. 88 ಎಸೆತಗಳಲ್ಲಿ ಅತ್ಯಂತ ತಾಳ್ಮೆಯ 26ರನ್‌ ಕಲೆಹಾಕಿದ್ದ ಚೇತೇಶ್ವರ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳಿದ್ದವು.

35ರನ್‌ಗೆ ಇನ್ನಿಂಗ್ಸ್ ಮುಗಿಸಿದ ನಾಯಕ ರಹಾನೆ

35ರನ್‌ಗೆ ಇನ್ನಿಂಗ್ಸ್ ಮುಗಿಸಿದ ನಾಯಕ ರಹಾನೆ

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನ ಮುನ್ನೆಡೆಸುತ್ತಿರುವ ಅಜಿಂಕ್ಯ ರಹಾನೆ, ಕೊಹ್ಲಿಯ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಭರವಸೆ ಮೂಡಿಸಿದ್ರು. ಆದ್ರೆ ರಹಾನೆ ಇನ್ನಿಂಗ್ಸ್‌ ಟೀ ವಿರಾಮಕ್ಕೂ ಮುನ್ನವೇ ಮುಕ್ತಾಯಗೊಂಡಿತು.

63 ಎಸೆತಗಳಲ್ಲಿ 35 ರನ್ ಕಲೆಹಾಕಿದ ಅಜಿಂಕ್ಯ ರಹಾನೆ ಕೈಲ್ ಜೇಮಿಸನ್ ಬೌಲಿಂಗ್ ಪರಿಯನ್ನ ಅರಿಯದೇ ಬೌಲ್ಡ್ ಆದ್ರು.

ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್

ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್

ಟೀಂ ಇಂಡಿಯಾದ ಪರ 303ನೇ ಟೆಸ್ಟ್ ಆಟಗಾರನಾಗಿ, ಕಾನ್ಪುರದಲ್ಲಿ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡುತ್ತಿರುವ ಶ್ರೇಯಸ್ ಅಯ್ಯರ್ ಮೊದಲ ಪಂದ್ಯದಲ್ಲೇ ಆಕರ್ಷಕ ಆಟವಾಡಿ ಗಮನಸೆಳೆದಿದ್ದಾರೆ. ದಿನದಾಟದಂತ್ಯಕ್ಕೆ 136 ಎಸೆತಗಳಲ್ಲಿ 75 ರನ್ ಸಿಡಿಸಿದ ಅಯ್ಯರ್ ಚೊಚ್ಚಲ ಅರ್ಧಶತಕ ದಾಖಲಿಸಿ ಶತಕದತ್ತ ಹೆಜ್ಜೆಯಿಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು.

ಅಯ್ಯರ್‌ಗೆ ಸಾಥ್ ಕೊಟ್ಟ ಜಡ್ಡು, 17ನೇ ಅರ್ಧಶತಕ ದಾಖಲು

ಅಯ್ಯರ್‌ಗೆ ಸಾಥ್ ಕೊಟ್ಟ ಜಡ್ಡು, 17ನೇ ಅರ್ಧಶತಕ ದಾಖಲು

ಶ್ರೇಯಸ್ ಅಯ್ಯರ್‌ಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಮ್ಮ ಸಾಮರ್ಥ್ಯವನ್ನ ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. 100 ಎಸೆತಗಳಲ್ಲಿ ಅಜೇಯ 50 ರನ್ ಕಲೆಹಾಕಿರುವ ಜಡೇಜಾ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿಗಳಿದ್ದವು.

Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada
ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶ್ರೇಯಸ್-ಜಡ್ಡು

ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಶ್ರೇಯಸ್-ಜಡ್ಡು

ನಾಲ್ಕು ಪ್ರಮುಖ ವಿಕೆಟ್‌ಗಳು ಉರುಳಿದರೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶ್ರೇಯಸ್ ಅಯ್ಯರ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಐದನೇ ವಿಕೆಟ್‌ಗೆ ಉತ್ತಮ ಶತಕದ ಜೊತೆಯಾಟದ ಮೂಲಕ ಟೀಂ ಇಂಡಿಯಾಗೆ ಆಧಾರವಾಗಿದ್ದಾರೆ. ಐದನೇ ವಿಕೆಟ್‌ಗೆ ಅಜೇಯ 113 ರನ್ ಕಲೆಹಾಕಿರುವ ಈ ಜೋಡಿಯು ಎರಡನೇ ದಿನವೂ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದೆ.

ಮೊದಲ ದಿನದಾಟವೂ ಪೂರ್ಣ ಓವರ್‌ ಮುಕ್ತಾಯಕ್ಕೂ ಮೊದಲೆ ಬೆಳಕಿನ ಅಭಾವದಿಂದ ಕೊಂಚ ಬೇಗನೆ ಮುಕ್ತಾಯಗೊಂಡಿತು. ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿದೆ. ನ್ಯೂಜಿಲೆಂಡ್ ಪರ ಯಶಸ್ವಿ ಬೌಲಿಂಗ್ ದಾಳಿ ನಡೆಸಿದ ಕೈಲ್ ಜೇಮಿಸನ್ 47 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಟಿಮ್ ಸೌಥಿ 43ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ರು.

Story first published: Thursday, November 25, 2021, 17:15 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X