ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs NZ 2nd T20I: 2ನೇ ಪಂದ್ಯದ ಸಂಭಾವ್ಯ ಆಡುವ ಬಳಗ, ಸಮಯ, ನೇರಪ್ರಸಾರದ ಮಾಹಿತಿ

India vs New Zealand 2nd T20I Match probable XI, match time and pitch report

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆಯಲ್ಲಿದೆ. ಹೀಗಾಗಿ ಟೀಮ್ ಇಂಡಿಯಾ ಚುಟುಕು ಮಾದರಿಯ ಸರಣಿಯಲ್ಲಿ ಜೀವಂತವಾಗುಳಿಯಲು ಭಾನುವಾರದ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

ಈ ಪಂದ್ಯ ಲಕ್ನೋದ ಎಕಾನ ಸ್ಟೇಡಿಯಂನಲ್ಲಿ ನಡೆಯಲಿದ್ದು ಭಾರೀ ಪೈಪೋಟಿಯ ಪಂದ್ಯ ನಡೆಯುವ ನಿರೀಕ್ಷೆಯಿದೆ. ಸರಣಿಯಲ್ಲಿ ಸಮಬಲ ಸಾಧಿಸಲು ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಸಜ್ಜಾಗಿದ್ದರೆ ಮೊದಲ ಪಂದ್ಯದಲ್ಲಿ ಸಾಧಿಸಿರುವ ಮುನ್ನಡೆಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್. ರಾಂಚಿಯಲ್ಲಿ ಭಾರತದ ಬ್ಯಾಟರ್‌ಗಳ ವಿರುದ್ಧ ಕಿವಿಸ್ ಸ್ಪಿನ್ನರ್‌ಗಳು ಅದ್ಭುತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದು ಪ್ರವಾಸಿಗರ ಆತ್ಮವಿಶ್ವಾಸ ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್‌ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್‌ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ಲಕ್ನೋದ ಎಕಾನ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಟಾಸ್ ಪ್ರಕ್ರಿಯೆ 6:30ಕ್ಕೆ ನಡೆಯಲಿದೆ.
ನೇರಪ್ರಸಾರ: ಇನ್ನು ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯಲ್ಲಿ ನೀಡಲಿದೆ. ಅಲ್ಲದೆ ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ಪಿಚ್ ರಿಪೋರ್ಟ್ ಹೀಗಿದೆ

ಪಿಚ್ ರಿಪೋರ್ಟ್ ಹೀಗಿದೆ

ಬಿಆರ್‌ಎಸ್ಎಬಿವಿ ಎಕಾನ ಸ್ಟೇಡಿಯಂ ಕಪ್ಪು ಮಣ್ಣು ಹಾಗೂ ಕೆಂಪು ಮಣ್ಣು ಎರಡರ ಪಿಚ್ಚನ್ನು ಕೂಡ ಹೊಂದಿದೆ. ಮತ್ತೊಂದು ಪ್ರಮುಖ ಅಂಶವೆಂದರೆ ಇಲ್ಲಿ ಆಡಿರುವ ಎಲ್ಲಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೂಡ ಮೊದಲು ಬ್ಯಾಟಿಂಗ್ ನಡೆಸಿರುವ ತಂಡಗಳು ಗೆಲುವು ಸಾಧಿಸಿದೆ. ಪಂದ್ಯ ಸಾಗುತ್ತಿದ್ದಂತೆಯೇ ಪಿಚ್ ನಿಧಾನವಾಗುತ್ತಾ ಸಾಗುತ್ತದೆ. ಆದರೆ ಇಲ್ಲಿ ವೇಗಿಗಳೇ ಹೆಚ್ಚಿನ ವಿಕೆಟ್ ಪಡೆದುಕೊಂಡಿದ್ದಾರೆ ಎಂಬುದು ಕೂಡ ಗಮನಿಸಬೇಕಿದೆ. ಏನೇ ಆಗಿದ್ದರೂ ಟಾಸ್ ಗೆದ್ದ ನಾಯಕ ಇಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು ಹೆಚ್ಚು ಯೋಚಿಸಲಾರ ಎಂಬುದು ಸ್ಪಷ್ಟ.

ಹವಾಮಾನ ವರದಿ: ಇಲ್ಲಿನ ಹವಾಮಾನ ವರದಿ ಭಾನುವಾರ ಅತ್ಯಂತ ತಂಪಾದ ವಾತಾವರಣದಿಂದ ಕೂಡಿರಲಿದೆ ಎಂದು ಮುನ್ಸೂಚನೆ ನೀಡುತ್ತಿದೆ. ಪಂದ್ಯ ನಡೆಯುವ ದಿನ ಇಲ್ಲಿ ಮಳೆ ಬರುವ ಮುನ್ಸೂಚನೆಯಿಲ್ಲ.

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಭಾರತ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಶಿವಂ ಮಾವಿ, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಇಶ್ ಸೋಧಿ, ಜಾಕೋಬ್ ಡಫ್ಫಿ, ಲಾಕಿ ಫರ್ಗ್ಯೂಸನ್, ಬ್ಲೇರ್ ಟಿಕ್ನರ್

Story first published: Saturday, January 28, 2023, 21:25 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X