ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾನ್ಪುರ ಟೆಸ್ಟ್: ಗೆದ್ದೇಬಿಟ್ಟೆವು ಎಂಬ ಉತ್ಸಾಹದಲ್ಲಿದ್ದ ಟೀಮ್ ಇಂಡಿಯಾಗೆ ಉಲ್ಟಾ ಹೊಡೆದಿದ್ದು ಈ 3 ಅಂಶಗಳು!

India vs New zealand: 3 reasons for 1st test match draw

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಗಿದೆ. ಪಂದ್ಯದ ಆರಂಭದಿಂದಲೂ ಒಂದರ ನಂತರ ಒಂದು ತಂಡಗಳು ಪಂದ್ಯದಲ್ಲಿ ಹಿಡಿತವನ್ನು ಸಾಧಿಸುತ್ತಾ ಬಂದಿತ್ತು. ಆದರೆ ನಾಲ್ಕನೇ ದಿನದಂತ್ಯಕ್ಕೆ ಪಂದ್ಯ ಭಾರತದ ಹಿಡಿತಕ್ಕೆ ಬಂದಿತ್ತು. ಹೀಗಾಗಿ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಲಿದೆ ಎಂಬ ನಿರೀಕ್ಷೆ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿತ್ತು. ಟೀಮ್ ಇಂಡಿಯಾ ಆಟಗಾರರು ಕೂಡ ಅದೇ ಆತ್ಮವಿಶ್ವಾಸದಲ್ಲಿದ್ದರು.

ಆದರೆ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ಅಂದುಕೊಂಡಿದ್ದು ಸಾಧಿಸಲು ಸಾಧ್ಯವಾಗಲೇ ಇಲ್ಲ. ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದ ಟೀಮ್ ಇಂಡಿಯಾ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಅಂತಿಮ ಹಂತದಲ್ಲಿ ಗೆಲುವಿನ ಸನಿಹಕ್ಕೆ ತಲುಪಿದ್ದರೂ ಕೂಡ ಅಂತ್ಯದಲ್ಲಿ ಅದು ಭಾರತಕ್ಕೆ ನಿರಾಸೆಯೊಂದಿಗೇ ಮುಕ್ತಾಯವಾಯಿತು.

ಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥಬಹುಕಾಲದ ಗೆಳತಿ ಜೊತೆಗೆ, ಟೀಂ ಇಂಡಿಯಾ ಬೌಲರ್ ಶಾರ್ದೂಲ್ ಠಾಕೂರ್ ನಿಶ್ಚಿತಾರ್ಥ

ಹಾಗಾದರೆ ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸದಿರಲು ಕಾರಣವಾದ ಅಂಶಗಳು ಯಾವುದು? ಇಲ್ಲಿದೆ ಮಾಹಿತಿ

ಅಂತಿಮ ದಿನದ ಮೊದಲ ಸೆಶನ್‌ನಲ್ಲಿ ಭಾರತಕ್ಕೆ ಹಿನ್ನಡೆ

ಅಂತಿಮ ದಿನದ ಮೊದಲ ಸೆಶನ್‌ನಲ್ಲಿ ಭಾರತಕ್ಕೆ ಹಿನ್ನಡೆ

ನಾಲ್ಕನೇ ದಿನದಾಟದ ಮುಕ್ತಾಯದಲ್ಲಿ ಟೀಮ್ ಇಂಡಿಯಾ ದಿನಾಟಕ್ಕೆ ಕೆಲವೇ ಓವರ್‌ಗಳ ಆಟ ಬಾಕಿಯಿರುವಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಕಿವೀಸ್‌ಗೆ ಅಂತಿಮ ಇನ್ನಿಂಗ್ಸ್‌ನಲ್ಲಿ 284 ರನ್‌ಗಳಿಸುವ ಸವಾಲು ನೀಡಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಲು ಆರಂಭಿಸಿದ ನ್ಯೂಜಿಲೆಂಡ್ ತಂಡದ ಮೊದಲ ವಿಕೆಟ್‌ಅನ್ನು ಟೀಮ್ ಇಂಡಿಯಾ ಆರಂಭದಲ್ಲಿಯೇ ಪಡೆದುಕೊಂಡಿತ್ತು. ಮೂರು ರನ್‌ಗಳಿಗೆ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತ್ತು. ನಂತರ ನ್ಯೂಜಿಲೆಂಡ್ ತಂಡದ ನಾಲ್ಕನೇ ದಿನದಾಟದ ಅಂತ್ಯಕ್ಕಾಗುವಾದ ಕೇವಲ 14 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಕೊನೆಯ ದಿನ ಭಾರತೀಯ ಬೌಲರ್‌ಗಳ ಕೈ ಮೇಲಾಗುತ್ತದೆ ಎಂಬ ಲೆಕ್ಕಾಚಾರಗಳು ನಡೆದಿತ್ತು.

ಈ ಜೋಡಿ ಬೇರ್ಪಡಿಸಲು ಹರಸಾಹಸ

ಈ ಜೋಡಿ ಬೇರ್ಪಡಿಸಲು ಹರಸಾಹಸ

ಆದರೆ ಅಂತಿಮ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪಡೆ ಭಾರತದ ದಾಳಿಯನ್ನು ದಿಟ್ಟವಾಗಿ ಎದುರಿಸಿತು. ಆರಂಭಿಕ ಆಟಗಾರ ಟಾಮ್ ಲಾಥನ್ ಅವರೊಂದಿಗೆ ನೈಟ್ ವಾಚ್ ಮಾನ್ ಆಗಿ ಕಣಕ್ಕಿಳಿದ ವಿಲಿಯಮ್ ಸೋಮರ್‌ವಿಲ್ಲೆ ಭಾರತೀಯ ಬೌಲರ್‌ಗಳಿಗೆ ಅಡ್ಡಿಯಾದರು. ಈ ಜೋಡಿಯನ್ನು ಬೇರ್ಪಡಿಸುವುದೇ ತಂಡಕ್ಕೆ ಸವಾಲಾಗಿತ್ತು. ಎಚ್ಚರಿಕೆಯಿಂದ ಆಡಿದ ಈ ಜೋಡಿ ಎರಡನೇ ವಿಕೆಟ್‌ಗೆ ನಿರ್ಣಾಯಕ 76 ರನ್‌ಗಳ ಕೊಡುಗೆಯನ್ನು ನೀಡಿದರು. 110 ಎಸೆತ ಎದುರಿಸಿದ್ದ ಸೋಮರ್‌ವಿಲ್ಲೆ 36 ರನ್‌ಗಳಿಸಿದ್ದಾಗ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಈ ಜೊತೆಯಾಟ ನ್ಯೂಜಿಲೆಂಡ್ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಬಹಳ ಪ್ರಮುಖ ಪಾತ್ರವಹಿಸಿತ್ತು.

ತಡೆಯಾದ ರಚಿನ್ ರವೀಂದ್ರ

ತಡೆಯಾದ ರಚಿನ್ ರವೀಂದ್ರ

ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ರಚಿನ್ ರವೀಂದ್ರ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು ಪ್ರತಿನಿಧಿಸುತ್ತಿದ್ದಾರೆ. ಬೌಲರ್ ಆಗಿ ವಿಫಲವಾದ ರಚಿನ್ ರವೀಂದ್ರ ಈ ಪಂದ್ಯದಲ್ಲಿ ತಂಡ ಸೋಲದಂತೆ ಕಾಪಾಡಲು ಮಹತ್ವದ ಪಾತ್ರವಹಿಸಿದರು ಎಂಬುದು ಗಮನಾರ್ಹ ಸಂಗತಿ. ರಾಚಿನ್ ರವೀಂದ್ರ ಕ್ರೀಸ್‌ಗೆ ಇಳಿದಾಗ ತಂಡ ಅಕ್ಷರಶಃ ಸೋಲಿನ ದವಡೆಯಲ್ಲಿತ್ತು. 138/7 ವಿಕೆಟ್ ಕಳೆದುಕೊಂಡಿದ್ದಾಗ ರವೀಂದ್ರ ಕಣಕ್ಕಿಳಿದಿದ್ದರು. ಆಗ ಪಂದ್ಯದ ಮುಕ್ತಾಯಕ್ಕೆ ಇನ್ನು 20ಕ್ಕೂ ಹೆಚ್ಚು ಓವರ್‌ಗಳ ಅಗತ್ಯವಿತ್ತು. ಆದರೆ ಕಿವೀಸ್ ಕೈಯಲ್ಲಿದ್ದಿದ್ದು ಕೇವಲ ಮೂರು ವಿಕೆಟ್ ಮಾತ್ರ. ಈ ಪರಿಸ್ಥಿತಿಯನ್ನು ಅರಿತ ಕಿವೀಸ್ ತಂಡದ ಈ ಆಟಗಾರ ಅತ್ಯಂತ ತಾಳ್ಮೆಯ ಆಟವನ್ನು ಆಡಿದರು. ಮತ್ತೊಂದು ತುದಿಯಲ್ಲಿ ಎರಡು ವಿಕೆಟ್ ಕಳೆದುಕೊಂಡರು ಕೂಡ ಅಂತಿಮ ಹಂತದಲ್ಲಿ ಅಜೀಜ್ ಪಟೇಲ್ ಜೊತೆಗೆ ಸೇರಿಕೊಂಡು ಭಾರತೀಯ ಬೌಲರ್‌ಗಳ ದಾಳಿಯನ್ನು ವಿಫಲಗೊಳಿಸಿದರು. ಅಂತಿಮವಾಗಿ ಮಂದಗತಿಯಿಂದ ಪಂದ್ಯವನ್ನು ಅಂತ್ಯಗೊಳಿಸಲು ನಿರ್ಧರಿಸಿದಾಗ ಕಿವೀಸ್ ಪಡೆ 165 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ರಚಿನ್ ರವೀಂದ್ರ ಬರೊಬ್ಬರಿ 91 ಎಸೆತಗಳನ್ನು ಎದುರಿಸಿ ಅಜೇಯವಾಗುಳಿದಿದ್ದರು. ಈ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಅಜೀಜ್ ಪಟೇಲ್ ಕೂಡ 23 ಎಸೆತ ಎದುರಿಸಿದ 2 ರನ್‌ಗಳಿಸುವ ಮೂಲಕ ಅಜೇಯವಾಗಿ ಉಳಿದಿದ್ದರು.

ಗೆಲುವಿಗೆ ಅಡ್ಡಿಯಾದ ಸೂರ್ಯ

ಗೆಲುವಿಗೆ ಅಡ್ಡಿಯಾದ ಸೂರ್ಯ

ಇನ್ನು ಟೀಮ್ ಇಂಡಿಯಾದ ಗೆಲುವಿಗೆ ಅಡ್ಡಿಯಾದ ಮತ್ತೊಂದು ಪ್ರಮುಖ ಅಂಶವೆಂದರೆ ಸೂರ್ಯ. ದಿನದಂತ್ಯದಲ್ಲಿ ಮೋಡ ಬೆಳಕಿನಾಟ ಪೂರ್ಣ ಪ್ರಮಾಣದ ಆಟ ಸಾಗಲು ಬಿಡಲಿಲ್ಲ. ದಿನದಾಟದ ನಿಗದಿತ ಓವರ್‌ಗಳು ಸಂಪೂರ್ಣವಾಗುವ ಮುನ್ನವೇ ಬೆಳಕಿನ ಅಭಾವ ಉಂಟಾಗಿತ್ತು. ಅನೇಕ ಬಾರಿ ಅಂಪಾಯರ್‌ಗಳು ಪರಿಶೀಲಿಸಿದ ಬಳಿಕ ಪಂದ್ಯ ಮುಂದುವರಿಸುವುದು ಅಸಾಧ್ಯ ಎಂದು ನಿರ್ಧರಿಸಿದರು. ಹೀಗಾಗಿ ಅಂತಿಮ ಹಂತದಲ್ಲಿ ಇದ್ದ ಸಣ್ಣ ಅವಕಾಶವೂ ಟೀಮ್ ಇಂಡಿಯಾದ ಕೈ ತಪ್ಪಿತು. ಹೀಗಾಗಿ ಭಾರತ ಡ್ರಾಗೆ ತೃಪ್ತಿಪಟ್ಟುಕೊಂಡಿದೆ.

ಕಾನ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಆಡುವ ಬಳಗ: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ(ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್
ಬೆಂಚ್: ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್, ಶ್ರೀಕರ್ ಭರತ್

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲಿಯಂ ಸೊಮರ್ವಿಲ್ಲೆ
ಬೆಂಚ್: ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್

ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada

Story first published: Tuesday, November 30, 2021, 10:26 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X