ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊನ್ನೆ ಶಮಿ ಇಂದು ಠಾಕೂರ್: ಫೈನಲ್ ಓವರ್ ಹೀರೋಗಳು!

Ind vs NZ 4th t20 Superover : Shami And Thakur are Super hero of Super over | Oneindia kannada
india vs new zealand: 4th t20 super over thriller

ಅತ್ಯಂತ ರೋಚಕವಾಗಿ ಮತ್ತೊಂದು ಟಿ20 ಪಂದ್ಯ ಅಂತ್ಯವಾಗಿದೆ. ಟೀಮ್ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟಿ20 ಪಂದ್ಯ ಅಂತಿಮ ಓವರ್‌ನಲ್ಲಿ ರೋಚಕ ಟೈ ಆಗಿದೆ. ಬಳಿಕ ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಮೂರನೇ ಪಂದ್ಯದ ನಂತರ ನಾಲ್ಕನೇ ಪಂದ್ಯದಲ್ಲೂ 20ನೇ ಓವರ್ ಎಸೆದ ಬೌಲರ್ ಹೀರೋ ಆಗಿ ಮಿಂಚಿದ್ದಾರೆ.

ಮೂರನೇ ಪಂದ್ಯದಲ್ಲಿ 20ನೇ ಓವರನ್ನು ಶಮಿ ಬೌಲಿಂಗ್ ಮಾಡಿ ನ್ಯೂಜಿಲ್ಯಾಂಡ್ ಗೆಲುವಿಗೆ ಅಡ್ಡಿಯಾಗಿದ್ದರೆ ಇಂದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ತಡೆಯಾಗಿದ್ದು ಶಾರ್ದೂಲ್ ಠಾಕೂರ್. ಅಂತಿಮ ಓವರ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ಠಾಕೂರ್ ನ್ಯೂಜಿಲ್ಯಾಂಡ್‌ಗೆ ಆಘಾತ ನೀಡಿದರು.

ನ್ಯೂಜಿಲೆಂಡ್‌ಗೆ ಮತ್ತೆ ಕಾಡಿದ ಸೂಪರ್ ಓವರ್ ಗುಮ್ಮ: ಭಾರತಕ್ಕೆ ಜಯನ್ಯೂಜಿಲೆಂಡ್‌ಗೆ ಮತ್ತೆ ಕಾಡಿದ ಸೂಪರ್ ಓವರ್ ಗುಮ್ಮ: ಭಾರತಕ್ಕೆ ಜಯ

ಅಂತಿಮ ಓವರ್‌ನಲ್ಲಿ ನ್ಯೂಜಿಲ್ಯಾಂಡ್ ಗೆಲುವಿಗೆ ಬೇಕಿದ್ದಿದ್ದು ಕೇವಲ 7ರನ್. ನ್ಯೂಜಿಲ್ಯಾಂಡ್‌ ಪರವಾಗಿ ಕ್ರೀಸ್‌ನಲ್ಲಿದ್ದಿದ್ದು ಅದಾಗಲೇ ಅರ್ಧ ಶತಕ ಸಿಡಿಸಿದ್ದ ಸೈಫರ್ಟ್ ಮತ್ತು ಅನುಭವಿ ಆಟಗಾರ ರಾಸ್ ಟೈಲರ್. ಹೀಗಾಗಿ ನ್ಯೂಜಿಲ್ಯಾಂಡ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂಬ ನಿರೀಕ್ಷೆ ಎಲ್ಲರದಾಗಿತ್ತು. ಆದರೆ ಅಂತಿಮ ಓವರ್‌ನಲ್ಲಿ ಆಗಿದ್ದು ಮ್ಯಾಜಿಕ್

ಮೊದಲ ಎಸೆತಕ್ಕೆ ಔಟ್

ಮೊದಲ ಎಸೆತಕ್ಕೆ ಔಟ್

ಅಂತಿಮ ಓವರ್‌ನಲ್ಲಿ ಆಗಿದ್ದು ನಿಜಕ್ಕೂ ಮ್ಯಾಜಿಕ್. ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಶಾರ್ದೂಲ್ ದೊಡ್ಡ ವಿಕೆಟನ್ನೇ ಕೆಡವಿದರು. ಅನುಭವಿ ಆಟಗಾರ ರಾಸ್ ಟೇಲರ್ ಮೊದಲ ಎಸೆತಕ್ಕೇ ಔಟಾಗಿ ಫೆವಿಲಿಯನ್ ಸೇರಿಕೊಂಡರು. ಆದರೆ ಎರಡನೇ ಎಸೆತ ಬೌಂಡರಿ ಸಿಡಿಯಿತು.

ಮತ್ತೊಂದು ವಿಕೆಟ್

ಮತ್ತೊಂದು ವಿಕೆಟ್

ಮೂರನೇ ಎಸೆತವನ್ನು ಎದುರಿಸಲು ಡೈರ್ಲ್ ಮಿಶೆಲ್ ಕ್ರೀಸ್‌ಗೆ ಬಂದಿದ್ದರು. ಸ್ಲೋವರ್ ಬೌನ್ಸರ್ ಎಸೆದ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ವಿಫಲವಾಗಿ ಕೀಪರ್ ಕೈ ಸೇರಿತು. ಈ ವೇಳೆ ಒಂದು ರನ್ ಕದಿಯುವ ಯತ್ನ ಮಾಡಿದರು ಕೀವಿಸ್ ದಾಂಡಿಗರು. ಆದರೆ ವಿಫಲವಾಗಿ ರನ್‌ಔಟ್‌ಗೆ ಬಲಿಯಾದರು. ನಾಲ್ಕನೇ ಎಸತದಲ್ಲಿ ಮತ್ತೆ ಒಂಟಿ ರನ್‌ ಕದಿಯಲಷ್ಟೇ ಸ್ಯಾಂಟ್ನರ್.

ಮತ್ತೆ ವಿಕೆಟ್

ಮತ್ತೆ ವಿಕೆಟ್

ಅಂತಿಮ ಎರಡು ಎಸೆತದಲ್ಲಿ ನ್ಯೂಜಿಲ್ಯಾಂಡ್‌ಗೆ ಬೇಕಿದ್ದಿದ್ದು ಎರಡು ರನ್. ನಾಯಕನ ಜೊತೆ ಚರ್ಚಿಸಿದ ಶಾರ್ದೂಲ್ ಟಾಕೂರ್ ಐದನೇ ಎಸೆತವನ್ನು ಮಾಡಿದರು. ಡ್ಯಾರ್ಲ್ ಮಿಶೆಲ್ ಈ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನವನ್ನು ಮಾಡಿದರು. ಆದರೆ ಈ ಪ್ರಯತ್ನದಲ್ಲಿ ಮಿಶೆಲ್ ವಿಫಲರಾದರು. ಬಾಲ್ ನೇರವಾ ಫೀಲ್ಡರ್ ಶಿವಮ್ ದುಬೆ ಕೈಗೆ ಸೇರಿತು. ಅಲ್ಲಿಗೆ ಮತ್ತೊಂದು ವಿಕೆಟ್ ಪತನ!

ಒಂದು ಎಸೆತಕ್ಕೆ ಎರಡು ರನ್

ಒಂದು ಎಸೆತಕ್ಕೆ ಎರಡು ರನ್

ಅಂತಿಮ ಎಸೆತದಲ್ಲಿ ನ್ಯೂಜಿಲ್ಯಾಂಡ್‌ಗೆ ಗೆಲ್ಲಲು ಎರಡು ರನ್‌ಗಳ ಅವಶ್ಯಕತೆಯಿತ್ತು. ಟಾಕೂರ್ ಎಸೆದ ಬಾಲನ್ನು ಡ್ರೈವ್‌ ಮಾಡುವಲ್ಲಿ ಯಶಸ್ವಿಯಾದರೂ ಎರಡು ರನ್‌ಗಳಿಸಲು ವಿಫಲ. ಎರಡನೇ ರನ್‌ ಕದಿಯಲು ಹೋದ ಸ್ಯಾಂಟ್ನರ್ ರನ್‌ ಔಟ್‌ ಆದರು. ಅಲ್ಲಿಗೆ ಸರಣಿಯಲ್ಲಿ ಎರಡನೇ ಪಂದ್ಯ ಟೈನಲ್ಲಿ ಅಂತ್ಯವಾಯಿತು.

ಮೂರನೇ ಪಂದ್ಯದಲ್ಲಿ ಶಮಿ ಹೀರೋ

ಮೂರನೇ ಪಂದ್ಯದಲ್ಲಿ ಶಮಿ ಹೀರೋ

ಸರಣಿಯ ಮೂರನೇ ಪಂದ್ಯವೂ ಇದೇ ರೀತಿ ರೋಚಕವಾಗಿ ಟೈನಲ್ಲಿ ಅಂತ್ಯವಾಗಿತ್ತು. ಅಂದು ಶಮಿ ಅಂತಿಮ ಓವರನ್ನು ಎಸೆದಿದ್ದರು. ನ್ಯೂಜಿಲ್ಯಾಂಡ್‌ಗೆ 9 ರನ್‌ ಅವಶ್ಯಕತೆಯಿದ್ದ ಆಪಂದ್ಯವನ್ನು ನ್ಯೂಜಿಲ್ಯಾಂಡ್‌ ಗೆಲ್ಲದಂತೆ ಶಮಿ ಅಡ್ಡಿಯಾಗಿದ್ದರು. ಅದಾಗಲೇ ಒಂದು ಸೂಪರ್ ಓವರ್ ಕಂಡಿದ್ದ ಸರಣಿ ಮತ್ತೊಂದು ಸೂಪರ್ ಓವರ್‌ನ ನಿರೀಕ್ಷೆಯಲ್ಲೇ ಇರಲಿಲ್ಲ. ಆದರೆ ಇಂದು ಮತ್ತೆ ಸೂಪರ್ ಓವರ್ ಕಂಡು ಟೀಮ್ ಇಂಡಿಯಾ ಜಯಭೇರಿ ಬಾರಿಸಿತು.

Story first published: Friday, January 31, 2020, 18:39 [IST]
Other articles published on Jan 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X