ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯುಡು ಅಮೋಘ ಆಟ, ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 35 ರನ್ ಜಯ

India vs New Zealand 5th ODI, Live Cricket Score

ವೆಲ್ಲಿಂಗ್ಟನ್, ಫೆಬ್ರವರಿ 3: ವೆಲ್ಲಿಂಗ್ಟನ್‌ನ ವೆಸ್ಟ್‌ ಪ್ಯಾಕ್ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 3) ನಡೆದ ಭಾರತ ಮತ್ತು ಆತಿಥೇಯ ನ್ಯೂಜಿಲ್ಯಾಂಡ್ ನಡುವಣ 5ನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಭಾರತ 35 ರನ್‌ಗಳ ಗೆಲುವನ್ನಾಚರಿಸಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 4-1ರಿಂದ ಗೆದ್ದುಕೊಂಡಂತಾಗಿದೆ.

ಭಾರತದ ಇನ್ನಿಂಗ್ಸ್‌ ವೇಳೆ ತಂಡಕ್ಕೆ ಅಂಬಾಟಿ ರಾಯುಡು, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್ ಅವರ ರನ್ ಬೆಂಬಲ ದೊರೆತರೆ, ಕಿವೀಸ್ ಇನ್ನಿಂಗ್ಸ್ ವೇಳೆ ದೇಸಿ ತಂಡದ ಬೌಲರ್‌ಗಳಾದ ಯುಜುವೇಂದ್ರ ಚಾಹಲ್ 3, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ತಲಾ 2 ವಿಕೆಟ್ ಕೆಡವಿದ್ದು ಗೆಲ್ಲಲು ಕಾರಣವಾಯ್ತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44084

ಭಾರತ ನೀಡಿದ್ದ 253 ರನ್ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡ ಜೇಮ್ಸ್ ನೀಶಮ್ 44, ಟಾಮ್ ಲ್ಯಾಥಮ್ 37, ನಾಯಕ ಕೇನ್ ವಿಲಿಯಮ್ಸನ್ 39 ರನ್ ನೆರವಿನೊಂದಿಗೆ 44.1 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 217 ರನ್ ಪೇರಿಸುವುದರೊಂದಿಗೆ ತಲೆ ಬಾಗಿತು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಈ ಪಂದ್ಯದಲ್ಲೂ ಕಿವೀಸ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿತು. ನಾಯಕ ರೋಹಿತ್ ಶರ್ಮಾ 2, ಶಿಖರ್ ಧವನ್ 6, ಶುಭ್‌ಮಾನ್ ಗಿಲ್ 7, ಧೋನಿ 1 ರನ್ ಗಳಿಸಿ ಔಟಾದಾಗ ಭಾರತ ರನ್ ಕುಸಿತದ ಭೀತಿ ಅನುಭವಿಸಿತು.

ತಂಡದ ಜವಾಬ್ದಾರಿ ಹೊತ್ತುಕೊಂಡ ಅಂಬಾಟಿ ರಾಯುಡು ಭರ್ಜರಿ 90 ರನ್‌ಗಳ ಕೊಡುಗೆ ನೀಡಿದರು. ಜೊತೆಗೆ ವಿಜಯ್ ಶಂಕರ್ 45, ಕೇದಾರ್ ಜಾಧವ್ 34, ಹಾರ್ದಿಕ್ ಪಾಂಡ್ಯ 45 ರನ್ ರನ್ ಪೇರಿಸಿ ತಂಡವನ್ನು ಮೇಲಿತ್ತಿದರು. ಕಿವೀಸ್ ಪರ ಮ್ಯಾಟ್ ಹೆನ್ರಿ 4, ಟ್ರೆಂಟ್ ಬೌಲ್ಟ್ 3 ವಿಕೆಟ್ ಕಬಳಿಸಿದ್ದು ಗಮನ ಸೆಳೆಯಿತು.

ಅಂಬಾಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಭಾರತದ ವೇಗಿ ಮೊಹಮ್ಮದ್ ಶಮಿ ಸರಣಿಶ್ರೇಷ್ಠರೆನಿಸಿದರು. ಇತ್ತಂಡಗಳ ನಡುವಣ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಮೈದಾನದಲ್ಲಿ ಫೆಬ್ರವರಿ 6 ರಂದು ನಡೆಯಲಿದೆ.

ನ್ಯೂಜಿಲ್ಯಾಂಡ್ ತಂಡ: ಹೆನ್ರಿ ನಿಕೋಲ್ಸ್, ಕೋಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕೆ), ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಕೊಲಿನ್ ಡಿ ಗ್ರ್ಯಾಂಡ್ಹೊಮ್ಮೆ, ಟಾಡ್ ಆಯ್ಸ್ಲ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ಶುಭ್‌ಮಾನ್ ಗಿಲ್, ಅಂಬಾಟಿ ರಾಯುಡು, ಎಂಎಸ್ ಧೋನಿ (ವಿ.ಕೆ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.

Story first published: Sunday, February 3, 2019, 15:33 [IST]
Other articles published on Feb 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X